ಪ್ರಮುಖ ಸುದ್ದಿವಾರ್ತೆ

ಅಣ್ಣ-ತಂಗಿಯರ ಸಂಬಂಧ ಗಟ್ಟಿಗೊಳಿಸುವ ಹಬ್ಬ

 
ವಿಶೇಷ ಲೇಖನ
ಶ್ರಾವಣ ಬಂತೆಂದರೆ ಹಬ್ಬಗಳ ಸರಮಾಲೆ ಎಂದರೆ ತಪ್ಪಾಗಲಾರದು. ಈಗಾಗಲೇ ನಾಗರಪಂಚಮಿಯನ್ನು ಆಚರಿಸಿಕೊಂಡ ನಾವು ಇಂದು ಅಣ್ಣ-ತಂಗಿಯ ಸಂಬಂಧವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಿದ್ದೇವೆ.  ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.
 
ರಕ್ಷಾ ಬಂಧನ ಹಬ್ಬವನ್ನು ಭಾರತೀಯರು ಶ್ರಾವಣ ಮಾಸದ ಹುಣ್ಣಿಮೆ ದಿನ ಆಚರಿಸುತ್ತೇವೆ. ಅದರಲ್ಲೂ ಉತ್ತರಭಾರತೀಯರು ಈ ಹಬ್ಬಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಅಂದು ಸಹೋದರಿ ಶಾಸ್ತ್ರೋಕ್ತವಾಗಿ ತನ್ನ ಪ್ರೀತಿ ಮತ್ತು ತನ್ನ ಸಹೋದರನ ಒಳಿತನ್ನು ಬಯಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ತನ್ನ ಸಹೋದರನಿಗೆ ಬಲಗೈ ಮಣಿಕಟ್ಟಿಗೆ ರಾಖಿ ಕಟ್ಟಿ ಆರತಿ ಮಾಡಿ, ಸಿಹಿ ತಿನಿಸಿ ಸೋದರನ ಆಶೀರ್ವಾದವನ್ನು ಬೇಡುತ್ತಾಳೆ. ನಂತರ ಸಹೋದರಿ, ಸಹೋದರನಿಂದ ಉಡುಗೊರೆಯನ್ನು ಪಡೆಯುತ್ತಾರೆ.
 
 
 
ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಬಲಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.
 
ಇದೇ ದಿನ ಬ್ರಾಹ್ಮಣರು ಇದನ್ನು ಋಗ್ವೇದ ಉಪಕರ್ಮವೆಂದು ಆಚರಿಸುತ್ತಾರೆ. ಅಂದು ಬ್ರಾಹ್ಮಣ ಗಂಡಸರು ಜನಿವಾರವನ್ನು ಬದಲಿಸಿ ಹೊಸ ಜನಿವಾರವನ್ನು ಹಾಕಿಕೊಳ್ಳುವ ಪ್ರತೀತಿ ಇದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here