ಅಡ್ಮಿನ್ ಪವರ್ ಎಂಬ ಶಕ್ತಿ ಪ್ರದರ್ಶನ

0
1951

ಹರೀಶ್ ಕೆ.ಆದೂರು.

ಮೂಡುಬಿದಿರೆ:ಆಧುನಿಕ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾಗಳದ್ದೇ ಹವಾ… ಎಲ್ಲಿ ನೋಡಿದರಲ್ಲಿ ಮಕ್ಕಳಾದಿಯಾಗಿ ಯುವಕ ಯುವತಿಯರು ವಾಟ್ಸ್ ಆಪ್, ಇನ್ಸ್ಟಾಗ್ರಾಂ,ಫೇಸ್ ಬುಕ್, ಟ್ವೀಟರ್…ಮೊದಲಾದ ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗಿರೋದು ಮಾಮೂಲಿ. ಸೋಶಿಯಲ್ ಮೀಡಿಯಾಗಳಿಂದ ಸಮಾಜ ಹಾಳಾಗುತ್ತಿದೆ ಎಂಬ ಮಾತು ಬಲವಾಗಿದೆ. ಒಂದಷ್ಟು ಹೌದು ಕೂಡಾ…
ಹೌದು ಸೋಶಿಯಲ್ ಮೀಡಿಯಾಗಳೆಂದರೆ ಸಾಕು…ಇಡೀ ಸಮಾಜಕ್ಕೆ ಕಂಠಕವೆಂಬಂತೆ ಭಾವಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಅನೇಕ ಸೋಶಿಯಲ್ ಮೀಡಿಯಾಗಳು ಈ ಮಾತಿಗೆ ಅಪವಾದವೆಂಬಂತಹ ಕಾರ್ಯವೆಸಗುತ್ತಿವೆ. ಅನೇಕ ಮಂದಿಗೆ ಸಹಾಯ ಹಸ್ತ ಚಾಚುತ್ತಿವೆ. ಅಶಕ್ತ ಪಾಲಿಗೆ ಬೆಳಕು ನೀಡುವ ಮಹತ್ಕಾರ್ಯವೆಸಗುತ್ತಿವೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇ ಬೇಕು… ಇಂತಹ ಸೋಶಿಯಲ್ ಮೀಡಿಯಾಗಳು ಅನೇಕ ಕಣ್ಣೀರೊರೆಸುವ ಪರಿಣಾಮಕಾರೀ ಕಾರ್ಯವನ್ನು ಮಾಡುತ್ತಿರುವುದನ್ನು ನಾವೆಲ್ಲ ಮರೆಯುವಂತೆಯೂ ಇಲ್ಲ. ಧನಾತ್ಮಕ ದೃಷ್ಠಿಕೋನದ , ಸಮಾಜಮುಖೀ ಕಾರ್ಯಗಳೆಸಗುತ್ತಿರುವ ವಾಟ್ಸ್ ಆಪ್ ಗ್ರೂಪ್ ಇದೀಗ ಹೊಸತೊಂದು ಚಿಂತನೆಯನ್ನು ಹುಟ್ಟುಹಾಕಿದೆ. ಅದೇ `ಅಡ್ಮಿನ್ ಪವರ್ ಸಮಾವೇಶ’!
ಯಾಕಾಗಿ? : ವಿವಿಧ ಗ್ರೂಪ್‍ಗಳನ್ನು ನಡೆಸುವ ಅಡ್ಮಿನ್ ಗಳು ಹೇಗಿರಬೇಕು? ಯಾವ ಯಾವ ರೀತಿಯ ಕಾರ್ಯಕ್ರಮಗಳನ್ನು ನಡೆಸಿದರೆ ಉತ್ತಮ…ಸಮಾಜಮುಖಿಯಾಗಿ ಸೋಶಿಯಲ್ ಮೀಡಿಯಾಗಳು ಹೇಗೆ ಕೆಲಸ ಮಾಡಬಹುದು ಎಂಬುದನ್ನು ಪರಿಣಾಮಕಾರೀ ಚರ್ಚೆ ನಡೆಸುವ ಉದ್ದೇಶದಿಂದ ಅಡ್ಮಿನ್ ಸಮಾವೇಶ ಏರ್ಪಡಿಸಲಾಗಿದೆ.
ವಾಟ್ಸ್ ಆಪ್ ಗ್ರೂಪ್ ನಡೆಸುವ ಎಡ್ಮಿನ್‍ಗಳು ಹತ್ತು ಹಲವು ಪ್ರತಿಭೆಗಳನ್ನು ಹೊಂದಿರುವರು..ಒಬ್ಬೊಬ್ಬರ ಚಿಂತನೆಯೂ ಒಂದೊಂದು ರೀತಿ..ಅಗಾಧ ಚಿಂತನೆಗಳ ಪ್ರತಿಭೆಗಳ ಅನಾವರಣಕ್ಕೆ ಅಡ್ಮಿನ್ ಪವರ್ ವೇದಿಕೆ… ಸಮಾಜ ತಿದ್ದುವ ಕಾರ್ಯ ಅಡ್ಮಿನ್‍ಗಳಿಂದ ಸಾಧ್ಯ ಎಂಬ ಇರಾದೆಯಿಂದ ಸುಮಾರು ನೂರು ವಾಟ್ಸ್ ಆಪ್ ಗ್ರೂಪ್ ಗಳ ಅಡ್ಮಿನ್‍ಗಳು ಒಟ್ಟಾಗಿ ಈ ಬೃಹತ್ ಸಮಾವೇಶವನ್ನು ಮೂಡುಬಿದಿರೆಯಲ್ಲಿ ಆಯೋಜಿಸಿದೆ.
ಇದರ ಚಿಂತನೆ ಹೇಗಾಯ್ತು…: ನಿರಂತರ ಚಟುವಟಿಕೆಯ ಕ್ರಿಯಾಶೀಲ ವ್ಯಕ್ತಿತ್ವದ ಅಳದಂಗಡಿ ವಿಜಯ್ ಕುಮಾರ್ ಅಡ್ಮಿನ್‍ಗಳನ್ನು ಒಟ್ಟು ಸೇರಿಸುವ ತಂತ್ರ ರೂಪಿಸಿದರು. ಕೇವಲ ಲಿಂಕ್ ಶೇರ್ ಮಾಡುವುದು, ಫಾರ್ವರ್ಡ್ ಮೆಸೇಜ್ ಹಾಕುವುದು ಅಷ್ಟೇ ಸೋಶಿಯಲ್ ಮೀಡಿಯಾಗಳ ಕೆಲಸವಾಗಿರಬಾರದು; ಬದಲಾಗಿ ಕೆಟ್ಟ ಸಂದೇಶಗಳು ಬಂದಾಗ ತಟ್ಟನೆ ಪ್ರತಿಭಟಿಸುವುದರೊಂದಿಗೆ, ಸರಕಾರದ, ಸಕಾರಾತ್ಮಕ ಚಿಂತನೆಗಳನ್ನು ಕ್ಷಣ ಮಾತ್ರಕ್ಕೆ ಸಮಾಜಕ್ಕೆ ತಿಳಿಸುವ ಜವಾಬ್ದಾರಿಯನ್ನು ನೆನಪಿಸುವ ಹಾಗೂ ಪ್ರೇರೇಪಿಸುವ ದೃಷ್ಠಿಯಿಂದ ಸಮ್ಮೇಳನ ಆಯೋಜಿಸಲಾಗಿದೆ ಎನ್ನುತ್ತಾರೆ.
ಕಿರುಚಿತ್ರಗಳಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ, ನೋಂದಾಯಿತ ಸಂಸ್ಥೆಯಾಗಿ ಈ ಅಡ್ಮಿನ್ ಬಳಗ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುವ ಇರಾದೆ ವಿಜಯ್ ಹೊಂದಿದ್ದಾರೆ.
27ರಂದು ಸಮಾವೇಶ: ಅಡ್ಮಿನ್ ಪವರ್ ಸಮಾವೇಶ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಅಕ್ಟೋಬರ್ 27ರಂದು ನಡೆಯಲಿದೆ. ಈಗಾಗಲೇ 60ಕ್ಕೂ ಅಧಿಕ ಅಡ್ಮಿನ್‍ಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಡೀ ದಿನದ ಸಮಾವೇಶದಲ್ಲಿ ಪ್ರತಿಭಾ ಪ್ರದರ್ಶನದ ಜೊತೆಗೆ ಮಾರ್ಗದರ್ಶನ ಕಾರ್ಯಗಳು, ಮನೋರಂಜನಾ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ನಮ್ಮ ಸಂಗಮ ದೀಪಾವಳಿ ಸಂಭ್ರಮ ಎಂಬ ವಿಶೇಷ ಚಿಂತನೆಯನ್ನೂ ಅಳವಡಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಅಡ್ಮಿನ್ ಪವರ್ ಸಮಾವೇಶ ಹತ್ತು ಹಲವು ಚಿಂತನೆಗಳಿಗೆ ವೇದಿಕೆಯಾಗುವುದರೊಂದಿಗೆ ಸಮಾಜಮುಖೀ ಕಾರ್ಯಕ್ಕೆ ಒಂದು ಸ್ಪಷ್ಟ ಅಡಿಗಲ್ಲಾಗುವುದರಲ್ಲಿ ಸಂದೇಹವೇ ಇಲ್ಲ.
ಭಾಗವಹಿಸುವ ಅಡ್ಮಿನ್‍ಗಳು: 

ವಿಜಯ್ ಕುಮಾರ್ ಜೈನ್ (ಆಮಂತ್ರಣ)
ಕಿಶೋರ್ ಶೆಟ್ಟಿ ಉಜಿರೆ (ಬೆಳಕು)
ಉಜಞ ಕಂಚಿಕಾನ್ (ಕಲತ್ವ ಕುಂದಾಪುರ)
ಭುವನೇಶ್ ಫ್ರಭು ಹಿರೇಬೆಟ್ಟು (ಫಿಲ್ಮಿ)
.ಪದ್ಮಶ್ರೀ ಭಟ್ (ಆರದಿರಲಿ ಬದುಕು)
ಪ್ರದೀಪ್ ಕುಕ್ಕಿಪಾಡಿ (ನ್ಯೂಸ್ ವೆಬ್ ಚಾನೆಲ್ )
ಶಶೀಂದ್ರ ಜಂಕಳ (ಸದ್ಗುರು ಕಲಾ ತಂಡ ಜಿb)
(ಕಲಾ ಬದುಕು )
ದಿನೇಶ್ ಬಾಂಧವ್ಯ ( ಬಾಂಧವ್ಯ ಬ್ಲಡ್ ಕರ್ನಾಟಕ )
ಅನುಷ್ ಸನಿಲ್ ( ತುಳು ಕನ್ನಡ ಇನ್ಸ್ಪಿರೇಷನ್)
ನಿತ್ಯಾನಂದ್ ಶೆಟ್ಟಿ (ಹೋಟೆಲ್ ಮಾಲೀಕರು )
ಕಿರಣ್ ರೈ ಬಳಂಜ (ಕಲಾವಿದರ ಧ್ವನಿ)
ಮಂಜುನಾಥ್ ಚೇರ್ಕಾಡಿ (ಕಲಾಗೊಂಚ ಕ್ರಿಯೇಷನ್)
ವಿಜಯಶ್ರೀ ಶೆಟ್ಟಿ ಉಜಿರೆ (ದುರ್ಗಾ ಸೇನೆ)
ಕಿಶೋರ್ ರಾವ್ , ಮೂಡಬಿದ್ರೆ
ಶಿವ ಪ್ರಸಾದ್ ಚೌಟ ಪೆರ್ಣ ದೊಡ್ಡಮನೆ.
ಧರ್ಮ ಚಾವಡಿ
ಗುರುಪ್ರಸಾದ್ ಶೆಟ್ಟಿ ಪಡುಬೆಳ್ಳೆ ವೀರಕೇಸರಿ ಬೆಳ್ತಂಗಡಿ ಸಹಾಯ ಹಸ್ತ ಸಂಸ್ಥೆ
ಆರ್ಯನ್ ಸವಣಾಲ್ ಅಮ್ಮನ ಆಸರೆ ವಾಟ್ಸಾಪ್ ಬಳಗ
ಗಣೇಶ್ ಶೆಟ್ಟಿ ಸಿದ್ದಾಪುರ ಆರಾಧ್ಯ ಗೆಳೆಯರ ಬಳಗ ಸಿದ್ದಾಪುರ
ಅನಿಲ್ ರೈ ನೆಲ್ಯಾಡಿ ದೇಶಕ್ಕಾಗಿ ನಾವು
ವಿ ಬಿ ಶೆಟ್ಟಿ ಬೊಳ್ತೇರ್ದ ಬೊಳ್ಳಿಲು
ಕಿಶೋರ್ ಕುಮಾರ್ ಸಂಸ್ಕೃತ ಸಿರಿ
ಬಾಲಕೃಷ್ಣ ತುಳುನಾಡ ನೆನಪು
ರಮೇಶ್ ರೈ ಕುಕ್ಕುವಳ್ಳಿ ತುಳುನಾಡ ರಂಗ ಬೊಳ್ಳಿಲು
ಪ್ರಕಾಶ್ ಮೊಗವೀರ್ ಐಸಿರಿ
ದಯಾನಂದ ರೈ ಪೆನ್ಸಿಲ್ ಬಾಕ್ಸ್
ಅರುಣ್ ಕುಂದರ್ ಸುದ್ದಿ ಕುಂದಾಪ್ರ್
ಪ್ರಕಾಶ್ ಶೆಟ್ಟಿ ತುಲುವೆ. ಸತ್ಯ ಲೋಕ ಭಗವಾನ್
ರವೀಂದ್ರ ಶೆಟ್ಟಿ ನಮ್ಮ ಸವಣಾಲು
ಚೇತನ್ ವರ್ಕಾಡಿ ಬರವುದ ಬಂಡಾರ
ಪ್ರಶಾಂತ್ ಕಾಟುಕುಕ್ಕೆ ಬರವುಗಾರೆರ್ನ ಕೂಟ
ನವೀನ್ ಪಡ್ಡು ಇನ್ನ ಕಮಲಾ ಕಲಾ ವೇದಿಕೆ ಮುಂಬೈ (ರಿ)
ಕಿರಣ್ ನಿರಂಜನ್.ಕೆ ತುಳು ಒರಿಪುಗ ,ಸತ್ಯೊದ ಜಾಲ್
ಸಂತು ಬಜಗೋಳಿ. (ತುಳು ಬರವು,ತುಳು ಕಬಿತೆ)
ಶಶಿಧರ ಗುಜ್ಜಾಡಿ (ಕರಾವಳಿ ಕಲಾ ಕಣ್ಮಣಿಗಳು)
ಸುಶಾಂತ್ (ತುಳುನಾಡ್ ಯೂತ್ ರಾಕ್ಸ್)
ಡಾ| ಶೇಖರ ಅಜೆಕಾರು ಬೆಳದಿಂಗಳು
ಅಭಿಷೇಕ್ ಶೆಟ್ಟಿ ಐಕಳ ಜಾಬ್ ಜಾಬ್ ಜಾಬ್ ಗ್ರೂಪ್
ಪ್ರೀತಂ ಕೆ ಉಷಾ ಸ್ಮೃತಿ ಬಳಗ
ಜಯಪ್ರಕಾಶ್ ಗುರ್ಮೆಲ್ ಲವ್ ಈಸ್ ಲೈಪ್
ಹರೀಶ್ ಪಂಚಮಿ ಮೆಲೋಡಿಸ್
ಶಶಿ ಗಿರಿವನ ಕಡಬ ಕರುನಾಡ ಕಲಾವಿದರ ಚಾವಡಿ
ರಂಜು ತುಳುರಂಗ ಪ್ರೇಮಿ ಕಲಾವಿದೆರೆ ಕಡಲ್
ಸುಕೇಶ್ ಶೆಟ್ಟಿ ಎಕ್ಕಾರ್ ತುಳುನಾಡ ಕಲಾವಿದೆರ್
ಸಂತು ಮುದ್ರಾಡಿ ಕರುನಾಡ ಹಣತೆ ಕವಿ ಬಳಗ (ರಿ)
ಹರೀಶ್ ಕೆ.ಆದೂರು.ಕಾಲ ನ್ಯೂಸ್
ರಂಜನ್ ಸಹ್ಯಾದ್ರಿ ನೆರಿಯ
ಅಶೋಕ್ ಕರಾವಳಿ ಯೂತ್ ಕ್ಲಬ್ ಉಡುಪಿ
ರಾಜೇಶ್ ಭಂಡಾರಿ ಕಲಾಂಜಲಿ ಕ್ರಿಯೇಶನ್ಸ್

ಮಾಧ್ಯಮ ಸಹಭಾಗಿತ್ವ: ವರ್ಷ ಕ್ರಿಯೇಷನ್ಸ್ ಪ್ರಸ್ತುತಿಯ ಮಾಧ್ಯಮ ಸಂಸ್ಥೆಗಳಾದ ವಾರ್ತೆ.ಕಾಂ ಹಾಗೂ ಕಾಲ ನ್ಯೂಸ್ ಈ ಅಡ್ಮಿನ್ ಸಮಾವೇಶದ ಮಾಧ್ಯಮ ಸಹಭಾಗಿತ್ವ ವಹಿಸಿಕೊಂಡಿದೆ.

LEAVE A REPLY

Please enter your comment!
Please enter your name here