ಅಗ್ನಿ-5 ಯಶಸ್ವಿ

0
207

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ಸೇನೆಗೆ ಮತ್ತೊಂದು ಶಕ್ತಿಶಾಲಿ ಕ್ಷಿಪಣಿ ಸೇರ್ಪಡೆಯಾಗಿದೆ. ಇಂದು ಒಡಿಶಾದ ಕರಾವಳಿಯಲ್ಲಿ ಸೇನೆಗೆ ಸೇರಿದ ವೀಲರ್ ದ್ವೀಪದಲ್ಲಿ ಶಕ್ತಿಶಾಲಿ ಅಗ್ನಿ-5 ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ.
 
 
 
ಈ ಕ್ಷಿಪಣಿ 5 ಸಾವಿರ ಕಿಲೋಮೀಟರ್ ದೂರದವರೆಗೆ ಚಿಮ್ಮುನ ಸಾಮರ್ಥ್ಯವಿದೆ. ಅಗ್ನಿ-5 ಮಿಸೈಲ್ ಸಾವಿರ ಕೆಜಿ ಸಿಡಿತಲೆ ಹೊತ್ತೊಯ್ಯಬಲ್ಲದ್ದಾಗಿದೆ. ಇದು ಚೀನಾದ ಯಾವುದೇ ಪ್ರದೇಶಗಳನ್ನು ಟಾರ್ಗೆಟ್ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಪಾಕಿಸ್ತಾನ, ಏಷ್ಯಾದ ರಾಷ್ಟ್ರಗಳನ್ನು ಟಾರ್ಗೆಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
 
 
ಅಗ್ನಿ-5 ಮೂರು ಸ್ತರದ ಕ್ಷಿಪಣಿಯಾಗಿದ್ದು,17 ಮೀ. ಉದ್ದ ಮತ್ತು 1.5 ಟನ್‌ ಭಾರ ಹೊಂದಿದೆ. ಮೊದಲನೇ ಸ್ತರದ ರಾಕೆಟ್‌ ಎಂಜಿನ್‌, ಕ್ಷಿಪಣಿಯನ್ನು 40 ಕಿ.ಮೀ. ಎತ್ತರಕ್ಕೆ ಒಯ್ದರೆ, ಎರಡನೇ ಸ್ತರವು ಕ್ಷಿಪಣಿಯನ್ನು 150 ಕಿ.ಮೀ. ಎತ್ತರಕ್ಕೆ ನೂಕುತ್ತದೆ. 3ನೇ ಸ್ತರವು ಭೂಮಿಗಿಂತ 300 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯುತ್ತದೆ.
ಅಂತಿಮವಾಗಿ ಸುಮಾರು 800 ಕಿ.ಮೀ. ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ.

LEAVE A REPLY

Please enter your comment!
Please enter your name here