ಅಗ್ನಿ ಅವಘಡ

0
440

ರಾಷ್ಟ್ರೀಯ ಪ್ರತಿನಿಧಿ ವರದಿ
ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಸಂಭವಿಸಿದೆ. ಅಕ್ಷಯ್ ಕೆಮಿಕಲ್ ಫ್ಯಾಕ್ಟರರಿಯಲ್ಲಿ ಇಂದು ಮುಂಜಾನೆ ಸುಮಾರು 4 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
 
 
 
ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಫ್ಯಾಕ್ಟರಿಯ್ಲಲಿ ರಾಸಾಯನಿಕಗಳು ಇದ್ದಿದ್ದರಿಂದ ಕೂಡಲೇ ಬೆಂಕಿ ಆವರಿಸಿಕೊಂಡಿದೆ. ಫ್ಯಾಕ್ಟರಿಯ ಇತರೆ ಭಾಗಗಳಿಗೂ ಬೆಂಕಿ ಆವರಿಸಿದೆ.
 
 
 
ಬೆಂಕಿ ನಂದಿಸಲು 12 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಸತತ 3 ಗಂಟೆಗಳ ಕಾಲ ಬೆಂಕಿ ನಂದಿಸಲು ಸಿಬ್ಬಂದಿಗಳು ಶ್ರಮಿಸಿದ್ದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.  ಬೆಂಕಿ ಅವಘಡದಿಂದ ಕೋಟ್ಯಂತರ ರೂ. ಆಸ್ತಿ ನಷ್ಟವಾಗಿದೆ.

LEAVE A REPLY

Please enter your comment!
Please enter your name here