ಅಗ್ನಿ ಅವಘಡ ಮತ್ತು ಪ್ರಥಮ ಚಿಕಿತ್ಸೆ ಅಣಕು ಪ್ರದರ್ಶನ

0
279

ಮ0ಗಳೂರು ಪ್ರತಿನಿಧಿ ವರದಿ
ಮಂಗಳೂರಿನ ಅತ್ತಾವರದಲ್ಲಿರುವ ಮಣಿಪಾಲ ಸ್ಕೂಲ್ ನಲ್ಲಿ ಶಾಲಾ ಮಕ್ಕಳಿಗಾಗಿ ಅಗ್ನಿ ಅವಘಡ ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ಕುರಿತು ಅಣಕು ಪ್ರದರ್ಶನ ನಡೆಯಿತು.
 
 
 
ಜಿಲ್ಲಾ ಗೃಹರಕ್ಷಕದಳ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಜಿಲ್ಲಾ ಅಗ್ನಿಶಾಮಕದಳ ಮಂಗಳೂರು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಜರಗಿತು ಅಗ್ನಿಶಾಮಕದಳದ ಅಧಿಕಾರಿ ಶೇಖರ್ ಗೃಹರಕ್ಷಕದಳದ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು, ಉಪಸಮಾದೇಷ್ಟ ರಮೇಶ್, ಗೃಹರಕ್ಷಕರಾದ ಸತೀಶ್, ಸನತ್, ಸಂತೋಷ್, ಲಿಂಗಪ್ಪ, ಶೈಲೇಶ್ ಮುಂತಾದವರು ಈ ಶಿಬಿರದಲ್ಲಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
 
 
ಶಾಲಾ ಮುಖ್ಯೋಪಾದ್ಯಾಯಿನಿ ಅನುರಾಧ ಶಿವರಾಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಶಾಲಾ ಶಿಕ್ಷಕಿಯರಾದ ಪಾರ್ವತಿ, ಮೀನಾ ಮಲಾನಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here