'ಅಕ್ಷಯ ಧಾಮ' ಲೋಕಾರ್ಪಣೆ

0
494

 
ಮೂಡುಬಿದಿರೆ ಪ್ರತಿನಿಧಿ ವರದಿ
ಕಲ್ಲಬೆಟ್ಟಿನ ಗ್ರಾಮೀಣ ಭಾಗದಲ್ಲಿ ಸಹಕಾರಿ ಎಂಬ ತತ್ವವನ್ನು, 5 ದಶಕಗಳ ಹಿಂದೆ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಮೂಲಕ ಬೆಳೆಸಿಕೊಂಡು ಬಂದಿದ್ದು ಹೆಮ್ಮೆಯ ವಿಚಾರವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
 
 
 
ಇವರು ಕಳೆದ ಶನಿವಾರ ಕಲ್ಲಬೆಟ್ಟು ಸೇವಾ ಸಹಕಾರ ಬ್ಯಾಂಕ್ ಸುವರ್ಣ ಮಹೊತ್ಸವ ಸಮಾರಂಭದಲ್ಲಿ ಬ್ಯಾಂಕಿನ ನೂತನ ಕಟ್ಟಡ ‘ಅಕ್ಷಯ ಧಾಮ’ ಉದ್ಘಾಟಿಸಿ ಮಾತನಾಡುತ್ತಾ ಸಹಕಾರಿ ರಂಗದಲ್ಲಿ ಗ್ರಾಮದ ಜನತೆಗೆ ಶುದ್ಧಜಲ ಒದಗಿಸುವ ಬ್ಯಾಂಕಿನವರ ಕಾಳಜಿ, ಸಾಮಾಜಿಕ ಬದ್ಧತೆ ಗಮನಾರ್ಹವಾಗಿದೆ ಎಂದು ಶ್ಲಾಘಿಸಿ ಶುಭ ಹಾರೈಸಿದ್ದರು.
 
 
 
100 ಮನೆಗಳಿಗೆ ಉಚಿತ ‘ಸುಜಲ’ ಭಾಗ್ಯ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಅವರು ನೂತನ ಸಭಾಭವನವನ್ನು ಉದ್ಘಾಟಿಸಿದ್ದಾರೆ. ಬ್ಯಾಂಕಿನ ಸುಜಲ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಘಟಕಕ್ಕೆ 2 ಲಕ್ಷ ರೂ. ಹಾಗೂ ಬ್ಯಾಂಕಿಗೆ ರೂ.2.5 ಲಕ್ಷ ರೂ. ಕೊಡುಗೆಯನ್ನು ಪ್ರಕಟಿಸಿದ್ದಾರೆ. ಎಸ್ ಕೆಎಫ್ ನ ಸುಮಾರು 2 ಲಕ್ಷ ರೂ, ವೆಚ್ಚದ ಸುಜಲ ಪರಿಶುದ್ಧ ನೀರಿನ ಘಟಕದ ಮೂಲಕ ಉಚಿತವಾಗಿ ಕಲ್ಲಬೆಟ್ಟಿನ ಆಯ್ದ 100 ಮನೆಗಳಿಗೆ ತಲಾ 5 ಲೀಟರ್ ನ 100 ಕ್ಯಾನ್ ಗಳ ಮೂಲಕ ನಿತ್ಯವೂ ಸುಮಾರು 500 ಲೀ. ಕುಡಿಯುವ ಶುದ್ಧ ನೀರನ್ನು ಒದಗಿಸಲಾಗುವುದು.
 
 
 
 
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರು ಭದ್ರತಾ ಕೋಶವನ್ನು ಉದ್ಘಾಟಿಸಿದರು. ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಕೆ ಕೃಷ್ಣರಾಜ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅತಿಥಿಯಾಗಿ ಆಗಮಿಸಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ಸಮಾರಂಭವನ್ನು ಜತೆಗೂಡಿ ಉದ್ಘಾಟಿಸಿದರು. ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚಿಸಿದರು.
 
 
 
 
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ, ದ.ಕ.ಜಿಲ್ಲಾ ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ.ಜಿ.ಪಂ. ಸದಸ್ಯ ಸುಚರೀತ ಶೆಟ್ಟಿ, ಬೆಳುವಾಯಿ ಸಿ ಎ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್ ಕೋಟ್ಯಾನ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
 
ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಕೆ ಕೃಷ್ಣರಾಜ ಹೆಗ್ಡೆ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಿನಯ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಪುರುಷೋತ್ತಮ್ ಶೆಟ್ಟಿ ವಂದಿಸಿದರು.
 
ಈ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ಸಾಧಕರಾದ:
ಯಕ್ಷಗಾನ ಕ್ಷೇತ್ರದಲ್ಲಿ ಬಲಿಪ ನಾರಾಯಣ ಭಾಗವತ
ನಾಟಿ ವೈದ್ಯ ಕ್ಷೇತ್ರದಲ್ಲಿ ಶ್ಯಾಮ ಆಚಾರ್ಯ, ಮಹಾಬಲ ಪೂಜಾರಿ,
ಶಿಕ್ಷಣ ಕ್ಷೇತ್ರದಲ್ಲಿ ಜೆ ನಾಗೇಶ್ ರಾವ್
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸದಾನಂದ ಹೆಗ್ಡೆಕಟ್ಟೆ
ಗೇರು ಉದ್ಯಮ ಕ್ಷೇತ್ರದಲ್ಲಿ ಕೆ.ಶ್ರೀಪತಿ ಭಟ್
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಯಗೋಪಾಲ ತೋಳ್ಪಾಡಿ
ಕೃಷಿ ಕ್ಷೇತ್ರದಲ್ಲಿ ಎಸ್ ಡಿ ಸಂಪತ್ ಸಾಮ್ರಾಜ್ಯ, ಧರ್ಮರಾಜ ಹೆಗ್ಡೆ ಕೊಣಾಜೆ , ಪೂವಪ್ಪ ಶೆಟ್ಟಿ
ಕುಸುಮಾ ಶೆಟ್ಟಿ( ಜಾನಪದ),
ದೈವಪಾತ್ರಿ ಕ್ಷೇತ್ರದಲ್ಲಿ ಪೂವಪ್ಪ ಮೂಡುಕೊಣಾಜೆ, ರಮೇಶ್ ಮಾರೂರು
ಕಂಬಳ ಕ್ಷೇತ್ರದಲ್ಲಿ ರಾಮಣ್ಣ ಕುಂದರ್
ಯುವಪ್ರತಿಭೆ ಪಂಚಮಿ ಮರೂರು ಅವರನ್ನು ಗೌರವಿಸಲಾಯಿತು.
ಬ್ಯಾಂಕ್ ನ ಸದಸ್ಯರು, ಮಾರೂರು ಗ್ರಾಮಸ್ಥರು ಬ್ಯಾಂಕ್ ಅಧ್ಯಕ್ಷ ಕೃಷ್ಣರಾಜ ಹೆಗ್ಡೆಯವರನ್ನು ಸಮ್ಮಾನಿಸಿದರು.
ಕೊನೆಗೆ ವಿದ್ಯಾಮನೋಜ್ ಕಲಾನಿಕೇತನ, ಬೆಳ್ತಂಗಡಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here