ಅಕ್ಷತಾ ಅಭಿಯಾನಕ್ಕೆ ಎಣ್ಮಕಜೆ ಪಂಚಾಯತು ಮಟ್ಟದ ಚಾಲನೆ

0
418

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಕನಸಿನ ಮಂಗಲ ಗೋಯಾತ್ರೆಯ ಮಹಾಮಂಗಲದ ಅಕ್ಷತಾ ಅಭಿಯಾನ ಎಣ್ಮಕಜೆ ಪಂಚಾಯತು ಮಟ್ಟದಲ್ಲಿ ಬುಧವಾರ ಅಪರಾಹ್ನ ಪೆರ್ಲ ಶಂಕರಸದನದಲ್ಲಿ ಜರಗಿತು. ಗ್ರಾಮಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿ ಭಟ್ ಅವರಿಗೆ ಅಕ್ಷತೆ ಹಾಗೂ ಆಮಂತ್ರಣವನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮಂಗಲ ಗೋಯಾತ್ರೆಯ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ, ಜಿ.ಜಗದೀಶ ಗೋಳಿತ್ತಡ್ಕ ಮಾತನಾಡಿ ಮಂಗಳೂರಿನಲ್ಲಿ ನಡೆಯುವ ಮಹಾಮಂಗಲ ಕಾರ್ಯಕ್ರಮ ಹಾಗೂ ಅಕ್ಷತಾಭಿಯಾನದ ಸವಿವರವನ್ನು ನೀಡಿದರು.
 
 
ಮಂಗಲ ಗೋಯಾತ್ರೆಯ ಕಾಸರಗೋಡು ಜಿಲ್ಲಾ ಸಂಚಾರದ ವಿವರವನ್ನು ಕೋಶಾಧಿಕಾರಿ ಬಾಲಸುಬ್ರಹ್ಮಣ್ಯ ಸರ್ಪಮಲೆ ನೀಡಿದರು. ಪಂಚಾಯತು ವಾಡರ್ು ಮಟ್ಟದ ಕಮಿಟಿಗಳಿಗೆ ಆಮಂತ್ರಣ ಪತ್ರಿಕೆ, ಪೋಸ್ಟರ್ಗಳನ್ನು ನೀಡಲಾಯಿತು. ಪಂಚಾಯತು ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್, ಉಪಾಧ್ಯಕ್ಷೆ ಪುಷ್ಪಾ ಅಮೆಕ್ಕಳ, ಗೌರವ ಮಾರ್ಗದರ್ಶಕ ಬಿ.ಜಿ.ರಾಮ ಭಟ್, ಕಾರ್ಯದಶರ್ಿ ಉದಯ ಚೆಟ್ಟಯಾರ್, ಪತ್ತಡ್ಕ ಗಣಪತಿ ಭಟ್, ಸದಾನಂದ ಕುದ್ವ, ಸುಂದರ ಅಪ್ಪಯಮೂಲೆ, ವಿನಯಕೃಷ್ಣ ಕಾವಿನಮೂಲೆ ಮೊದಲಾದವರು ಮಾತನಾಡಿದರು.

LEAVE A REPLY

Please enter your comment!
Please enter your name here