ಅಕ್ರಮ ಮರಳುಗಾರಿಕೆ

0
277

 
ಮೈಸೂರು ಪ್ರತಿನಿಧಿ ವರದಿ
ಕಾವೇರಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ.ಅಕ್ರಮ ಮರಳುಗಾರಿಕೆ ಹಿನ್ನೆಲೆಯಲ್ಲಿ ಮರಳು ತುಂಬುತ್ತಿದ್ದ ಲಾರಿ ಮತ್ತು ಜೆಸಿಬಿಯನ್ನು ಜಪ್ತಿ ಮಾಡಲಾಗಿದೆ.
 
 
ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಅಡಗೂರು ಬಳಿ ಮರಳು ಸಾಗಿಸುತ್ತಿದ್ದ 3 ಲಾರಿ ಮತ್ತು ಚಂದ್ರಗಾಲು ಗ್ರಾಮದ ಬಳಿ ಮರಳು ತುಂಬಿಸುತ್ತಿದ್ದ 1 ಜೆಸಿಬಿಯನ್ನು ವಶಪಡಿಸಿಕೊಳ್ಳಲಾಗಿದೆ.
 
 
ಕೆಆರ್ ನಗರ ಸಿಪಿಐ ಸಿದ್ದಯ್ಯ ನೇತೃತ್ವದಲ್ಲಿ ದಾಳಿ ನಡೆದಿದೆ. ಮರಳು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here