ಅಕ್ರಮ ಗಣಿಗಾರಿಕೆ ತನಿಖೆ ಮುಂದುವರಿಕೆ

0
191

ರಾಷ್ಟ್ರೀಯ ಪ್ರತಿನಿಧಿ ವರದಿ
ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧದ ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಇಬ್ಬರು ರಿಲೀಫ್ ಆಗಿದ್ದು, ಒಬ್ಬರಿಗೆ ಸಂಕಷ್ಟ ಎದುರಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಮೂರು ಕೇಸ್ ಗಳ ಬಗ್ಗೆ ವಿಚಾರಣೆ ನಡೆದಿದೆ.
 
 
ಮಾಜಿ ಸಿಎಂಗಳಾದ ಎಸ್ ಎಂ ಕೃಷ್ಣ, ಹೆಚ್ ಡಿ ಕುಮಾರ ಸ್ವಾಮಿ, ಐಎಎಸ್ ಅಧಿಕಾರಿ ಎ ಎಸ್ ಅಶ್ವತ್ಥ್, ಕೆ ಶ್ರೀನಿವಾಸ್ ಈ ನಾಲ್ವರ ವಿರುದ್ಧದ ತನಿಖೆಗಿದ್ದ ತಡೆಯಾಜ್ಞೆ ಮುಂದುವರಿದಿದೆ.
 
 
 
ಆದರೆ ಮಾಜಿ ಸಿಎಂ ಧರಂಸಿಂಗ್, ಅಧಿಕಾರಿಗಳಾದ ಬಸಪ್ಪ ರೆಡ್ಡಿ, ಗಂಗಾ ರಾಮ್ ಬಡೇರಿಯಾ, ವಿ.ಉಮೇಶ್, ಪೆರುಮಾಳ್, ಜೀಜಾ ಹರಿಸಿಂಗ್, ಮಹೇಂದ್ರ ಜೈನ್, ಎಂ ರಾಮಪ್ಪ, ಶಂಕರಲಿಂಗಯ್ಯ ವಿರುದ್ಧದ ತನಿಖೆ ಮುಂದುವರಿಕೆಯಾಗಿದೆ.
 
 
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಮಾಜಿ ಸಿಎಂಗಳಾದ ಎಸ್ ಎಂ ಕೃಷ್ಣ, ಹೆಚ್ ಡಿ ಕುಮಾರ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಆದರೆ ಮಾಜಿ ಸಿಎಂ ಧರಸಿಂಗ್ ಹಾಗೂ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿಲ್ಲ. ಹೀಗಾಗಿ ನಾಲ್ವರನ್ನು ಬಿಟ್ಟು ಉಳಿದವರ ವಿರುದ್ಧ ತನಿಖೆ ನಡೆದಿದೆ.

LEAVE A REPLY

Please enter your comment!
Please enter your name here