ಅಕ್ಟೋಬರ್ 11ಕ್ಕೆ ಜಂಬೂ ಸವಾರಿ

0
409

 
ಬೆಂಗಳೂರು ಪ್ರತಿನಿಧಿ ವರದಿ
ಅಕ್ಟೋಬರ್ 11ರ ವಿಜಯದಶಮಿಯಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ಜಂಬೂಸವಾರಿ ನಡೆಯಲಿದೆ. ಇದರಿಂದ ಜಂಬೂಸವಾರಿ ದಿನಾಂಕದಲ್ಲಿದ್ದ ಗೊಂದಲಕ್ಕೆ ತೆರೆ ಎಳೆದಂತಾಗಿದೆ.
 
ಈ ಬಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ದಸರಾ ಸಿದ್ಧತೆ ಕುರಿತು ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅಕ್ಟೋಬರ್ 1ರಂದು ಬೆಳಗ್ಗೆ 11:40ಕ್ಕೆ ದಸರಾ ಉದ್ಘಾಟನೆಯಾಗಲಿದೆ.
 
 
 
ಅ.11ರಂದು ಜಂಬೂಸವಾರಿ, ಪಂಜಿನ ಕವಾಯತು ನಡೆಯಲಿದೆ. ಈ ಬಾರಿಯ ದಸರಾ ಸರಳವೂ ಇಲ್ಲ. ಅದ್ದೂರಿಯೂ ಇಲ್ಲ. ಸಾಂಪ್ರದಾಯಿಕವಾಗಿ ಜನರನ್ನು ಆಕರ್ಷಿಸುವಂತೆ ಇರಲಿದೆ ಎಂದು ಸಿಎಂ ಸಿದ್ದರಾಮಯ್ಯ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
 
 
ದಸರಾ ಉದ್ಘಾಟಕರು ಯಾರು?
ದಸರಾ ಉದ್ಘಾಟನೆಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರು ಪ್ರಸ್ತಾಪವಾಗಿದೆ. ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ, ಎಸ್.ಎಲ್ ಭೈರಪ್ಪ, ನಿಸಾರ್ ಅಹಮದ್ ಅವರ ಹೆಸರುಗಳೂ ಸಹ ಪ್ರಸ್ತಾಪವಾಗಿದೆ.
ಆಗಸ್ಟ್ 9ಕ್ಕೆ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಅಂದು ದಸರಾ ಉದ್ಘಾಟಕರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಾಗೆಯೇ ಈ ಬಾರಿ ಯುವ ದಸರಾ ಸಹ ನಡೆಯಲಿದೆ. ಎಂದು ಸಿಎಂ ತಿಳಿಸಿದ್ದಾರೆ.
 
 
 
ಗೊಂದಲವಿತ್ತು…
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ಜಂಬೂಸವಾರಿ ಯಾವ ದಿನ ನಡೆಸಬೇಕು ಎಂಬ ಗೊಂದಲ ಶುರುವಾಗಿತ್ತು.
ಅಕ್ಟೋಬರ್ 10, 11 ರಲ್ಲಿ ಯಾವ ದಿನ ನಡೆಸಬೇಕೆಂದು ಗೊಂದಲ ಏರ್ಪಟ್ಟಿತ್ತು. ಈ ಬಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಚರ್ಚೆ ನಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here