ಅಕ್ಕಿ-ಮೊಟ್ಟೆ-ಎಲೆಕೋಸು ಸರದಿಯಲ್ಲಿ ಸಕ್ಕರೆ!

0
416

ರಾಷ್ಟ್ರೀಯ ಪ್ರತಿನಿಧಿ ವರದಿ
ಚೀನಾದಿಂದ ಆಮದಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್ ಆಗಿದ್ದಾಯ್ತು. ನಕಲಿ ಮೊಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾಯ್ತು. ಕೆಮಿಕಲ್ ನೀರಿನಲ್ಲಿ ಲಿಕ್ವಿಡ್ ಬಳಸಿ ಎಲೆಕೋಸು ತಯಾರಿಸಿದ್ದು ಆಯ್ತು… ಈಗ ಇದಕ್ಕೆಲ್ಲಾ ಕಳಸವಿಟ್ಟಂತೆ ಪ್ಲಾಸ್ಟಿಕ್ ಸಕ್ಕರೆಯು ಮಾರುಕಟ್ಟೆಗೆ ಬಂದಿದೆ.
 
 
ಚಿತ್ರದುರ್ಗ ತಾಲೂಕಿನ ಕೋನಬೇವು ಗ್ರಾಮದ ಶಿವರುದ್ರಪ್ಪ ಎಂಬುವವರು ಚಿತ್ರದುರ್ಗದಲ್ಲಿ ಸಕ್ಕರೆ ಖರೀದಿಸಿ ಮನೆಗೆ ತಂದು ಅದನ್ನು ಡಬ್ಬದಲ್ಲಿ ಹಾಕುತ್ತಿದ್ದಾಗ ಫ್ಯಾನ್ ಗಾಳಿಗೆ ಸಕ್ಕರೆ ತೂರಿ ಹೋಗಿದೆ. ತಕ್ಷಣವೇ ಅನುಮಾನ ಬಂದು ಸಕ್ಕರೆಯನ್ನು ನೀರಿಗೆ ಹಾಕಿದಾಗ ಪ್ಲಾಸ್ಟಿಕ್ ಸಕ್ಕರೆ ತೇಲಿ ತಕ್ಷಣವೇ ಶಿವರುದ್ರಪ್ಪ ಅವರು ಆಹಾರ ಸಂರಕ್ಷಣಾ ಅಧಿಕಾರಿಯ ಜೊತೆ ಅಂಗಡಿಗೆ ತೆರಳಿದಾಗ ಮಾಲೀಕರ ಜೊತೆ ಜಟಾಪಟಿ ನಡೆದಿದೆ.
 
 
ಶಿವರುದ್ರಪ್ಪ ಅವರ ದೂರಿನ ಮೇರೆಗೆ ಆಹಾರಾಧಿಕಾರಿಗಳು ಪಟ್ಟಣದ ಮಂಜುನಾಥ ಕಾಫಿ ವರ್ಕ್ ಸೇರಿದಂತೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಸಕ್ಕರೆಯ ಪ್ಯಾಕೇಟ್‌ಗಳನ್ನು ಖರೀದಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here