ಅಕ್ಕಿ ಬಾಳೆ ಎಲೆ ಬಾಳೆಗೊನೆ ಯತೇಚ್ಛ!

0
53

ಕರಿಂಜೆಯಲ್ಲಿ ತುಂಬುತ್ತಿದೆ ಉಗ್ರಾಣ…


ಮೂಡುಬಿದಿರೆ: ಕರಿಂಜೆ ಕ್ಷೇತ್ರದ ಬ್ರಹ್ಮಕಲಶೋತ್ಸವದಂಗವಾಗಿ ಉಗ್ರಾಣದಲ್ಲಿ ಬಾಳೆ ಎಲೆ, ತರಕಾರಿ, ಸುವಸ್ತುಗಳು, ಸೇರಿದಂತೆ ಅಕ್ಕಿ,ಬೆಲ್ಲ,ದಿನಸಿ ಸಾಮಾನುಗಳು ಯತೇಚ್ಛವಾಗಿ ಭಕ್ತಾಧಿಗಳಿಂದ ಹರಿದು ಬರಲಾರಂಭಿಸಿದೆ. ಕ್ಷೇತ್ರದ ಅನ್ನದಾಸೋಹಕ್ಕಾಗಿ ವಿವಿಧ ಕಡೆಗಳಿಂದ ಹೊರೆಕಾಣಿಕೆ ಬರುತ್ತಿದ್ದು ಉಗ್ರಾಣದಲ್ಲಿ ಶೇಖರಣೆಯಾಗುತ್ತಿದೆ.
ಕರಿಂಜೆ ಬ್ರಹ್ಮಕಲಶೋತ್ಸವದಂಗವಾಗಿ ಮೂಡುಬಿದಿರೆಯಿಂದ ಆರಂಭಗೊಂಡು ಕರಿಂಜೆ ಕ್ಷೇತ್ರದ ತನಕವೂ ರಸ್ತೆಯುದ್ದಕ್ಕೂ ಕೇಸರಿ ಬಂಟಿಂಗ್ಸ್ , ಕೇಸರಿ ಪತಾಕೆ ರಾರಾಜಿಸುತ್ತಿದ್ದವು. ಸಂಪೂರ್ಣ ಕ್ಷೇತ್ರದ ಪರಿಸರ ತೆಂಗಿನ ಮಡಲಿನ ಸಾಂಪ್ರದಾಯಿಕ ಚಪ್ಪರದೊಂದಿಗೆ ಶೃಂಗಾರಗೊಂಡಿತ್ತು. ನೆಲಕ್ಕೆ ಸೆಗಣಿ ಸಾರಿಸಿ ಸಂಪ್ರದಾಯಕ್ಕೆ ಒತ್ತು ಕೊಡಲಾಗಿತ್ತು. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಧಾರ್ಮಿಕ ಹಾಗೂ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಹೆಜ್ಜೆ ಹೆಜ್ಜೆಗೂ ಗೋಚರಿಸುತ್ತಿತ್ತು.
ಧಾರ್ಮಿಕ ಕಾರ್ಯಕ್ರಮ: ಬ್ರಹ್ಮಕಲಶೋತ್ಸವದಂಗವಾಗಿ ಸೋಮವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬೆಳಗ್ಗೆ ಕ್ಷೇತ್ರದಲ್ಲಿ ಪುಣ್ಯಾಹ್ಯ ವಾಚನೆ, ನಾಂದಿ, ಸಮಾರಾಧನೆ, ಕೌತುಕ ಬಂಧನ, ಮಧುಪರ್ಕ, ಋತ್ವಿಗ್ವರಣೆ, ಅರಣಿಮಥನ, ವೇದಶಾಸ್ತ್ರ ಪುರಾಣಗಳ ಪಾರಾಯಣ ಆರಂಭ, ಗಣಪತಿ ಹೋಮ, ಮಹಾರುದ್ರಯಾಗ, ಪೂರ್ಣನವಗ್ರಹಯಾಗ, ಭೂವರಾಹ ಹೋಮ, ನೂತನ ಪ್ರತಿಮೆಗಳ ಪಂಚಗವ್ಯಾಧಿವಾಸಗಳು ವಿಧಿ ವತ್ತಾಗಿ ಋತ್ವಿಜರಿಂದ ನಡೆದವು. ಮಧ್ಯಾಹ್ನ ಭಕ್ತಾಧಿಗಳಿಗಾಗಿ ಅನ್ನದಾಸೋಹ ನಡೆಯಿತು.ವೈದಿಕ ಕಾರ್ಯದಂಗವಾಗಿ ಅಂಕುರಾರೋಹಣ, ಮಂಟಪಸಂಸ್ಕಾರ, ಮಹಾಸುದರ್ಶನ ಹೋಮಗಳು ನಡೆದವು.

LEAVE A REPLY

Please enter your comment!
Please enter your name here