ಅಂಬಾರಿ ಹೊತ್ತ ಆನೆಗಳ ಇತಿಹಾಸ

0
590

ವಿಶೇಷ ಲೇಖನ
ನಿಮಗೆ ತಿಳಿದಿರದ ಕುತೂಹಲ ಮಾಹಿತಿ ಇಲ್ಲಿದೆ
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಅದರಲ್ಲೂ ಹೆಚ್ಚಾಗಿ ಕಂಡು ಬರುವ ಎರಡು ಅಂಶಗಳೆಂದರೆ ಅಂಬಾರಿ ಮತ್ತು ಅಂಬಾರಿ ಹೊರುವ ಆನೆ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಿದ್ದಾರೆ.
 
 

 • ಜಯಮಾರ್ತಾಂಡ ಆನೆ:

ಕೃಷ್ಣದೇವರಾಜ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ. ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಳ ಚಿನ್ನದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಈ ಆನೆ ಮಹಾರಾಜರ ಪ್ರೀತಿಗೆ ಕಾರಣವಾಗಿತ್ತು. ಅರಮನೆಯ ಮಹಾದ್ವಾರಗಳಲ್ಲೊಂದಾದ ಜಯಮಾರ್ತಾಂಡ ದ್ವಾರಕ್ಕೆ ಈ ಆನೆ ಹೆಸರು ಇಡಲಾಗಿದೆ.
 
 
1902ರಿಂದ ಅಂಬಾರಿ ಹೊತ್ತ ಆನೆಗಳ ವಿವರ:

 • ವಿಜಯಬಹದ್ದೂರ್
 • ನಂಜುಂಡ
 • ರಾಮಪ್ರಸಾದ್
 • ಮೋತಿಲಾಲ್
 • ಸುಂದರ್ ರಾಜ್
 • ಐರಾವತ

1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್ ಚಿತ್ರ’ದಿ ಎಲಿಫೆಂಟ್ ಬಾಯ್’ಗೆ ಬಳಸಿಕೊಳ್ಳಯಿತು. ಆ ಆನೆಯ ಮಾವುತನೇ ಚಿತ್ರದ ನಾಯಕನಾಗಿದ್ದು ವಿಶೇಷವಾಗಿತ್ತು. ಈ ಚಿತ್ರ ಜಗತ್ತಿನಾದ್ಯಂತ ಪ್ರದರ್ಶನಗೊಂಡಿತ್ತು. ಆ ಮಾವುತ ಮತ್ಯಾರು ಅಲ್ಲ 7 ವರ್ಷದ ಹುಡುಗ ಮೈಸೂರು ಸಾಬು ಆಗಿದ್ದರು.

 • ಗಜೇಂದ್ರ

ಬಿಳಿಗಿರಿ- ಇದು ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ ದೈತ್ಯ ಆನೆಯಾಗಿದ್ದು, ಇದರ ಎತ್ತರ 10.5 ಅಡಿ. ಸುಮಾರು 7 ಸಾವಿರ ಕೆ.ಜಿ. ಇತ್ತಂತೆ. 1975ರಲ್ಲಿ ಈ ಆನೆ ಮರಣ ಹೊಂದಿತ್ತು. ಇದರ ಮಾವುತ ಗೌಸ್ ಅಂತ. ಇದೇ ಆನೆ ಮಹಾರಾಜರನ್ನು ಹೊತ್ತೂಯ್ದ ಕೊನೇ ಆನೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

 • ರಾಜೇಂದ್ರ-

‘ಗಂಧದ ಗುಡಿ’ ಚಿತ್ರದಲ್ಲಿ ಈ ಆನೆ ಪಾತ್ರ ಮುಖ್ಯವಾಗಿತ್ತು. ಈ ಚಿತ್ರದ ನಾಯಕ ನಟ ಡಾ.ರಾಜ್ ಕುಮಾರ್ ರಾಜೇಂದ್ರ ಆನೆಯ ದಂತದ ಮೇಲೆ ಕುಳಿತು ಹಾಡು ಹಾಡುವ ದೃಶ್ಯವಿದೆ. ಈ ದೃಶ್ಯ ಯಾರಿಗೆ ತಾನೆ ನೆನಪಿಲ್ಲ. ಆನೆ ಈ ಚಿತ್ರದಲ್ಲಿ ಚಿತ್ರದುದ್ದಕ್ಕೂ ಭಾಗಿವಹಿಸಿದ್ದ. ಈ ಆನೆ ಡಾ. ರಾಜ್ ಅವರ ಅಚ್ಚುಮೆಚ್ಚಿನ ಆನೆ ಕೂಡ ಆಗಿತ್ತು.

Advertisement
 • ಡ್ರೋಣ-

ದ್ರೋಣ 10.25 ಎತ್ತರದ ಆನೆಯಾಗಿದ್ದ. ಅದು ಸುಮಾರು 6,400 ಕೆಜಿ ತೂಕ ಹೊಂದಿತ್ತು. ದ್ರೋಣ ಆನೆ 18 ವರ್ಷ ಸತತವಾಗಿ ಅಂಬಾರಿಗೆ ಬೆನ್ನು ಕೊಟ್ಟ ಖ್ಯಾತಿ ಹೊಂದಿದ್ದಾನೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ‘ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್’ ನ ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದೂ ಕೂಡ ಇದೇ ಡ್ರೋಣ. 1998ರಲ್ಲಿ ಹೈಟೆನ್ಶನ್ ವಿದ್ಯುತ್ ತಗುಲಿ ದ್ರೋಣ ಸಾವನ್ನಪ್ಪಿದ್ದ.
 

 • ಅರ್ಜುನ- ದ್ರೋಣನ ನಂತರ ಅರ್ಜುನ ಒಮ್ಮೆ ಅಂಬಾರಿ ಹೊತ್ತದ್ದ ಆನೆಯಾಗಿದೆ. ಆದರೆ ನಂತರದ ದಿನಗಳಲ್ಲಿ ಮಾವುತನನ್ನು ಕೊಂದ ಆರೋಪದಲ್ಲಿ ಅರ್ಜುನನನ್ನು ಉತ್ಸವದಿಂದ ಹೊರಗುಳಿಸಲಾಯಿತು.
 • ಬಲರಾಮ-ಅರ್ಜುನನ ನಂತರ ಬಲರಾಮನಿಗೆ ಅಂಬಾರಿ ಹೊರಿಸಲಾಯಿತು. ಬಲರಾಮ ಶಾಂತ ಸ್ವಭಾವದ ಆನೆಯಾಗಿತ್ತು. 1987ರಲ್ಲಿ ಕಟ್ಟೆಪುರದಲ್ಲಿ ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ, ಪ್ರಶಾಂತ-ಈ ಐದೂ ಆನೆಗಳನ್ನು ಹಿಡಿಲಾಗಿತ್ತು. 11 ವರ್ಷಗಳ ಕಾಲ ಅಂಬಾರಿ ಹೊತ್ತ ಬಲರಾಮನಿಗೆ ನಿವೃತ್ತಿ ಕೊಡಲಾಯಿತು.
 • ಅರ್ಜುನ- ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ ಹೊತ್ತಿದ್ದ ಅರ್ಜುನನ ಗುಣದಲ್ಲಿ ಸ್ವಲ್ಪ ಕೀಟಲೆ ಸ್ವಭಾವವಿದ್ದ ಕಾರಣ ಸಾಕಷ್ಟು ಟೀಕೆಗಳು ಬಂದಿತ್ತು. ಆದರೂ ಬಲರಾಮನಿಗೆ ವಯಸ್ಸಾದ ಕಾರಣ ಬಲರಾಮನ ನಿವೃತ್ತಿ ನಂತರ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಗೆ ಹೆಗಲಿಗೆ ಬಂತು. ಅಂದಿನಿಂದ ಇವತ್ತಿನವರೆಗೂ ಅರ್ಜುನನನ್ನೇ ಅಂಬಾರಿ ಹೊರುತ್ತಾನೆ. ಅರ್ಜು ಬರೋಬ್ಬರಿ 5,535 ಕೆಜಿ ತೂಕವನ್ನು ಹೊಂದುವ ಮೂಲಕ ತಂಡದ ಎಲ್ಲಾ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ.

 
 

LEAVE A REPLY

Please enter your comment!
Please enter your name here