ಅಂಬರೀಶ್ ರಾಜೀನಾಮೆ!

0
165

 
ಬೆಂಗಳೂರು ಪ್ರತಿನಿಧಿ ವರದಿ
ರೆಬಲ್ ಸ್ಟಾರ್ ಅಂಬರೀಶ್ ರೆಬಲ್ ಆಗಿದ್ದಾರೆ. ತಮ್ಮ ಶಾಸಕ ಸ್ಥಾನಕ್ಕೆ ಅಂಬರೀಶ್ ಅವರು ರಾಜೀನಾಮೆ ನೀಡಿದ್ದಾರೆ. ತನ್ನ ಆಪ್ತ ಕಾರ್ಯದರ್ಶಿ ಎಸ್ ಶ್ರೀನಿವಾಸ್ ಮೂಲಕ ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
 
 
 
ಸಂಪುಟದಿಂದ ಅವರನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಅಂಬರೀಶ್ ಈ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಸ್ಪೀಕರ್ ಹುದ್ದೆ ಖಾಲಿ ಇರುವ ಕಾರಣ ರಾಜೀನಾಮೆ ಪತ್ರವನ್ನು ಡೆಪ್ಯೂಟಿ ಸ್ಪೀಕರ್ ಶಿವಶಂಕರ್ ರೆಡ್ಡಿಗೆ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿ ಮೂಲಕ ಕಳುಹಿಸಿದ್ದಾರೆ. ಆದರೆ ಡೆಪ್ಯುಟಿ ಸ್ಪೀಕರ್ ಅಂಬಿ ರಾಜೀನಾಮೆಯನ್ನು ನಿರಾಕರಿಸಿದ್ದಾರೆ.
 
 
ಸ್ವತಃ ಶಾಸಕರೇ ಈ ರಾಜೀನಾಮೆಯನ್ನು ನೀಡಬೇಕು ಎಂದು ಡೆಪ್ಯೂಟಿ ಸ್ಪೀಕರ್ ಹೇಳಿದ್ದಾರೆ. ಇದರಿಂದ ಶ್ರೀನಿವಾಸ್ ಅವರು ರಾಜೀನಾಮೆ ಪತ್ರವನ್ನು ಹಿಂದೆ ತಂದಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
 
ಒಂದೇ ವಾಕ್ಯದಲ್ಲಿ ಪತ್ರ
“ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿರುವ ನಾನು ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಒಂದೇ ಒಂದು ವಾಕ್ಯದಲ್ಲಿ ಪತ್ರದ ಮೂಲಕ ಅಂಬಿ ರಾಜೀನಾಮೆ ನೀಡಿದ್ದಾರೆ.

LEAVE A REPLY

Please enter your comment!
Please enter your name here