ಅಂಫಾನ್..ಏನೀ ನಿನ್ನ ಲೀಲೆ!

0
1292


ನಮ್ಮ ಪ್ರತಿನಿಧಿ ವರದಿ


ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಫಾನ್‌ ಚಂಡಮಾರುತ ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳಲಿದೆ. ಮುಂದಿನ ಆರು ಗಂಟೆಗಳಲ್ಲಿ ಇದು ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೇ.೨೦ರ ಮಧ್ಯಾಹ್ನದ ವೇಳೆಗೆ ಪಶ್ಚಿಮ ಬಂಗಾಳ ಬಾಂಗ್ಲಾದೇಶ ಕರಾವಳಿಯನ್ನು ದಿಘಾ ಮತ್ತು ಹಾತಿಯಾ ದ್ವೀಪಗಳ ನಡುವೆ ಹಾದುಹೋಗುವ ನಿರೀಕ್ಷೆಯಿದೆ ಎಂದು ಇಲಾಖೆ ಎಚ್ಚರಿಸಿದೆ. ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಮುಂದುವರಿಯವ ನಿರೀಕ್ಷೆಯಿದೆ ಎಂದು ಇಲಾಖೆ ಸೂಚಿಸಿದೆ.


ಗುಡುಗು ಸಹಿತ ಮಳೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಹೊಡೆತದಿಂದಾಗಿ ಮೂಡುಬಿದಿರೆಯಲ್ಲಿ ಭಾನುವಾರ ಹಾಗೂ ಸೋಮವಾರ ಉತ್ತಮ ಮಳೆಯಾಗಿದೆ. ಭಾನುವಾರ ರಾತ್ರಿಯೇ ಗುಡುಗು ಸಿಡಿಲಬ್ಬರದಿಂದೊಡಗೂಡಿ ಮಳೆಯ ಒಡ್ಡೋಲಗವಾಗಿತ್ತು. ಸೋಮವಾರ ಬೆಳ್ಳಂ ಬೆಳಗ್ಗೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ಗಾಳಿಯ ರಭಸವೂ ಜೋರಾಗಿತ್ತು. ಸಿಡಲಬ್ಬರವೂ ಅಧಿಕವಾಗಿತ್ತು. ಮೂಡುಬಿರೆ ವ್ಯಾಪ್ತಿಯ ಕೃಷಿ ತೋಟಗಳಲ್ಲಿರುವ ಅಡಿಕೆ ಮರಗಳು ಗಾಳಿಯ ಹೊಡೆತಕ್ಕೆ ಸಿಲುಕಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂಜೆಯ ತನಕವೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು.


ಎಚ್ಚರಿಕೆ: ಪ್ರತಿಕೂಲ ಹವಾಮಾನ ಪ್ರಾರಂಭಕ್ಕೂ ೪೮ತಾಸಿಗೂ ಮುಂಚಿತವಾಗಿ ಎಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ. ಒಡಿಶಾ ಮತ್ತು ಬಂಗಾಳ ಕರಾವಳಿ ಭಾಗಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಅಂಫಾನ್‌ ಚಂಡಮಾರುತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಪಡೆಯು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಿದೆ. ಅಲ್ಲದೆ ೧೦ತಂಡಗಳು ಒಡಿಶಾ ಹಾಗೂ ಏಳು ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ರವಾನಿಸಿದೆ.

LEAVE A REPLY

Please enter your comment!
Please enter your name here