ಅಂಧರ ಚೆಸ್ ಪಂದ್ಯಾವಳಿ

0
226

 
ವರದಿ-ಚಿತ್ರ: ಚಂದ್ರಲೇಖ ಭಟ್
ಬೆಂಗಳೂರಿನ ಎನ್‌ಜಿಒ ಹಾಲ್‌ನಲ್ಲಿ ಐಡಿಯಲ್ ಫೌಂಡೇಷನ್ ಆಯೋಜಿಸಿರುವ ಅಂಧರ ಚೆಸ್ ಪಂದ್ಯಾವಳಿ ಜೂನ್ 24ರಿಂದ 26ರವರೆಗೆ ನಡೆಯಲಿದೆ ಎಂದು ಡಾ.ಪಿ.ಕೆ.ಪೌಲ್ ತಿಳಿಸಿದ್ದಾರೆ.
 
 
 
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಡಿಯಲ್ ಸಂಸ್ಥೆ ಅಖಿಲ ಭಾರತೀಯ ಅಂಧರ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಂಧರ ಚೆಸ್ ಸಂಸ್ಥೆ ಸಹಯೋಗದಲ್ಲಿ ಪಂದ್ಯಾವಳಿಯನ್ನು ಆಯೋಜಿಸಿದ್ದು ಸುಮಾರು 140 ಮಂದಿ ಭಾಗವಹಿಸಲಿದ್ದಾರೆ ಎಂದರು.
 
 
 
ಬುದ್ದಿವಂತಿಕೆಯ ಆಟವಾಗಿರುವ ಚೆಸ್ ಪಂದ್ಯಾವಳಿಯಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು , ವಿಜೇತರಾದವರಿಗೆ 50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಈ ಪಂದ್ಯಾವಳಿ ಮೂರು ಹಂತಗಳಲ್ಲಿ ನಡೆಯಲಿದ್ದು , ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳ ಒಂದು ತಂಡ, ಹಾಗೂ ಓಪನ್ ಸ್ಪೇಸ್ ಒಂದು ತಂಡ ಮತ್ತು ರಾಜ್ಯ ಮಟ್ಟದ ಒಂದು ತಂಡಗಳಲ್ಲಿ ಪಂದ್ಯ ನಡೆಯಲಿದೆ ಎಂದು ವಿವರಿಸಿದರು.
 
 
 
ಇದೇ ವೇಳೆ 88 ಅಡಿಯ ಚೆಸ್ ಬೋರ್ಡ್‌ನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಚೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು 8880268787 ಹಾಗೂ ಸ್ಪರ್ಧೆಗೆ ಸಹಾಯ ಮಾಡಲು ಇಚ್ಛೆಯುಳ್ಳವರು 9740288077 ಸಂಪರ್ಕಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ [email protected] ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here