ವಾರ್ತೆವಿದೇಶ

ಅಂತೂ ಬಂದೆ ಬಿಡ್ತು ನಾಗರಪಂಚಮಿ…

 
ನಾಗರಪಂಚಮಿ ವಿಶೇಷ ಲೇಖನ
ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ಪಂಚಮಿಯಂದು ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.
 
 
nagarapanchami vaarte1
 
ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿಯನ್ನು ವಿಶಿಷ್ಟ್ಯವಾಗಿ ಆಚರಿಸುತ್ತಾರೆ. ಈ ಹಬ್ಬಕ್ಕೆ ತವರು ಮನೆಯವರು ಬಂದು ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಇದಕ್ಕಾಗಿ ಮದುವೆಯಾಗಿ ಗಂಡನ ಮನೆ ಸೇರಿಕೊಂಡ ಹೆಣ್ಣುಮಕ್ಕಳು ಆ ಹಬ್ಬಕ್ಕೆ ತವರು ಮನೆಯವರು ಬಂದು ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ.
 
 
ಈ ಹಬ್ಬದಂದು ಮನೆಯಲ್ಲಿ ಬಗೆ ಬಗೆಯ ಅಡುಗೆ ತಯಾರಿಸುತ್ತಾರೆ. ಮಧ್ಯಾಹ್ನ ಊಟವಾದ ನಂತರ ಎಲೆಅಡಿಕೆ(ತಾಂಬೂಲ)ಜಗಿದು, ಜೋಕಾಲಿ(ಉಯ್ಯಾಲೆ)ಯಾಟ ಆಡುವುದು ವಾಡಿಕೆ.
 
 
ನಾಗ ಪಂಚಮಿ ಹಿನ್ನೆಲೆ 1:
ಒಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಿನ್ನೆಲೆ 2 :
ನಾಗರಪಂಚಮಿ ಆಚರಣೆ ದ್ವಾಪರಯುಗದಲ್ಲಿ ಆರಂಭವಾಯಿತೆಂಬ ಪ್ರತೀತಿ ಇದೆ. ಪಾಂಡವರ ಪೂರ್ವಜ ಜನಮೇಜಯ, ತನ್ನ ತಂದೆಯನ್ನು ಕೊಂದ ನಾಗಸಂತತಿ ನಾಶವಾಗಬೇಕೆಂದು ಸರ್ಪಯಾಗ ಮಾಡಿಸುತ್ತಾನೆ. ಯಾಗಕ್ಕೆ ಅನೇಕ ದುಷ್ಟ ಸರ್ಪಗಳು ಆಹುತಿಯಾಗುತ್ತವೆ. ಇದಕ್ಕೆ ಕಂಗಾಲಾದ ಸರ್ಪಗಳ ಮುಖ್ಯಸ್ಥ ವಾಸುಕಿ ಬ್ರಹ್ಮನ ಮೊರೆಹೋಗುತ್ತಾನೆ. ಆಗ ತಾಯಿಯ ಶಾಪವಿದೆ ಎಂದು ವಾಸುಕಿಗೆ ತಿಳಿಯುತ್ತದೆ. ಜರಾತ್ಕಾರು ಮುನಿಗೆ ನಿನ್ನ ತಂಗಿಯನ್ನು ಕೊಟ್ಟು ಮದುವೆ ಮಾಡು. ಅವಳಿಂದ ಜನಿಸುವ ಆಸ್ತಿಕನು ನಿಮ್ಮ ಶಾಪ ವಿಮೋಚನೆ ಮಾಡುತ್ತಾನೆ ಎಂದು ಬ್ರಹ್ಮ ಹೇಳಿದ. ಇತ್ತ ಯಾಗ ಮುಗಿಯುವ ದಿನಗಳು ಬರುತ್ತವೆ. ಸರ್ಪಗಳು ಸಾಯುವುದು ನಡೆದೇ ಇರುತ್ತದೆ. ಜನಮೇಜಯನ ಯಾಗಶಾಲೆಗೆ ಆಸ್ತಿಕಮುನಿ ಬರುತ್ತಾನೆ, ಅವನ ಮನಃಪರಿವರ್ತನೆ ಮಾಡಿ ಯಜ್ಞ ನಿಲ್ಲಿಸುತ್ತಾನೆ. ಆಗ ಸರ್ಪಗಳ ಸಂತತಿ ಉಳಿಯುವಂತಾಗುತ್ತದೆ. ಇದೆಲ್ಲ ನಡೆದದ್ದು ಶ್ರಾವಣಮಾಸದ ಪಂಚಮಿ ದಿನದಂದು ಎನ್ನುವ ನಂಬಿಕೆ ಇದೆ. ಹಾಗಾಗಿ ಆಸ್ತಿಕನ ವರದಾನವಾದ ಶ್ರಾವಣ ಶುದ್ಧ ಪಂಚಮಿಯನ್ನು ನಾಗರಪಂಚಮಿ ಎಂದು ಆಚರಿಸಲಾಗುತ್ತದೆ.
ಹಿನ್ನೆಲೆ 3:
ಹಿಂದೆ ಸತ್ಯೇಶ್ವರಿ ಎಂಬ ಕನಿಷ್ಠ ದೇವಿ ಇದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ನಾಗರಪಂಚಮಿಯ ಹಿಂದಿನ ದಿನ ಸತ್ಯೇಶ್ವರನ ಮೃತ್ಯುವಾಯಿತು. ಸತ್ಯೇಶ್ವರಿಗೆ ಆಕೆಯ ಸಹೋದರ ನಾಗರೂಪದಲ್ಲಿ ಕಾಣಿಸಿದನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಸ್ವೀಕರಿಸಿದಳು. ಆಗ ನಾಗದೇವತೆಯು ಅವಳಿಗೆ ’ಯಾವ ಸಹೋದರಿಯು ನನ್ನನ್ನು ತನ್ನ ಸಹೋದರನೆಂದು ಪೂಜಿಸುವಳೋ, ನಾನು ಅವಳ ರಕ್ಷಣೆ ಮಾಡುತ್ತೇನೆ’ ಎಂದು ವಚನ ನೀಡಿತು. ಅದಕ್ಕಾಗಿಯೇ ಪ್ರತಿಯೊಬ್ಬ ಸ್ತ್ರೀಯು ಅಂದು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.
 
 
 
ಮೆಹಂದಿ ಹಚ್ಚುವುದರ ಮಹತ್ತ್ವ
ಸತ್ಯೇಶ್ವರನು ನಾಗರಾಜನ ರೂಪದಲ್ಲಿ ಸತ್ಯೇಶ್ವರಿಯ ಎದುರಿನಲ್ಲಿ ನಿಂತನು. ’ಅವನು ಹೊರಟು ಹೋಗುವನು’, ಎಂದು ತಿಳಿದು ಅವಳು ಅವನಿಂದ, ಅಂದರೆ ನಾಗರಾಜನಿಂದ ಕೈಮೇಲೆ ವಚನ ಕೇಳಿಕೊಂಡಳು. ಆ ವಚನವನ್ನು ನೀಡುವಾಗ ಸತ್ಯೇಶ್ವರಿಯ ಕೈಮೇಲೆ ವಚನ ಚಿಹ್ನೆ ನಿರ್ಮಾಣವಾಯಿತು. ಆ ವಚನದ ಪ್ರತೀಕವೆಂದು ನಾಗರಪಂಚಮಿಯ ಹಿಂದಿನ ದಿನ ಸ್ತ್ರೀಯರು ತಮ್ಮ ಕೈಗಳ ಮೇಲೆ ಮೆಹಂದಿ ಬಿಡಿಸುತ್ತಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here