ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಜ್ಜು

0
241

 
ವರದಿ: ಲೇಖಾ
ಜೂ.21ರಂದು ನಡೆಯಲಿರುವ 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ 57 ಸಚಿವರು ದೇಶದ ವಿವಿಧ ಭಾಗಗಳಲ್ಲಿ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
 
 
 
ಚಂಡೀಗಢದಲ್ಲಿ ಸಾವಿರಾರು ಜನರ ಜತೆಯಲ್ಲಿ ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರು ಯೋಗಾಸನ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 150 ಅಂಗವಿಕಲರು ಹಾಗೂ 18 ಮಾಜಿ ಸೈನಿಕರು ಕೂಡ ಮೋದಿಯವರೊಂದಿಗೆ ಯೋಗಾಸನ ಮಾಡಲಿದ್ದಾರೆ.
 
 
 
ಗೃಹ ಸಚಿವ ರಾಜನಾಥ ಸಿಂಗ್‌, ಹಣಕಾಸು ಸಚಿವ ಅರುಣ್‌ ಜೇಟ್ಲಿ, ರಕ್ಷಣಾ ಸಚಿವ ಮನೋಹರ ಪರ್ರಿಕರ್‌, ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಸೇರಿದಂತೆ 57 ಸಚಿವರುಗಳು ವಿವಿಧೆಡೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
 
 
ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಮನೋಹರ್ ಪರಿಕ್ಕರ್, ಸ್ಮೃತಿ ಇರಾನಿ ಸೇರಿ ಹಲವು ಸಚಿವರು ವಿವಿಧ ರಾಜ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಉತ್ತರಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ, ನಿರ್ಮಲಾ ಸೀತಾರಾಮನ್ ಮತ್ತು ಮೇನಕಾ ಗಾಂಧಿ ಸೇರಿ 10 ಸಚಿವರು ಅಲ್ಲಿ ಪಾಲ್ಗೊಳ್ಳಲಿದ್ದಾರೆ.
 
 
 
ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದ ಮುಂದಾಳತ್ವವನ್ನು ಜೇಟ್ಲಿ, ಆಂಧ್ರಪ್ರದೇಶದ ವಿಜಯವಾಡದಲ್ಲಿ ಸುರೇಶ್​ಪ್ರಭು ವಹಿಸಲಿ ದ್ದಾರೆ. ಮನೋಹರ್ ಪರಿಕ್ಕರ್ ಕಾನ್ಪುರ, ವೆಂಕಯ್ಯ ನಾಯ್ಡು ನವದೆಹಲಿ, ಪಿಯೂಷ್ ಗೋಯಲ್ ರಾಯ್ಪುರ ಮತ್ತು ಜೆ.ಪಿ. ನಡ್ಡಾ ಅಹಮದಾಬಾದ್​ನಲ್ಲಿ ಯೋಗ ಮಾಡಲಿದ್ದಾರೆ.
 
 
 
2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಮೋದಿ ಅವರು, ಯೋಗ ದಿನ ಘೋಷಣೆಯಾದಾಗ ಇಂತಹ ಮಹಾ ಉತ್ಸಾಹವನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here