ಅಂತರ್ ಕಾಲೇಜು ಟೆಕ್ ಫೆಸ್ಟ್- 'ಪ್ರೇರಣ'- ಫಲಿತಾಂಶ

0
484

 
ಬೆಂಗಳೂರು ಪ್ರತಿನಿಧಿ ವರದಿ
ಗೀತಂ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್ ನ ಸ್ಕೂಲ್ ಆಫ್ ಟೆಕ್ನೊಲಜಿಯಿಂದ ಮೂರು ದಿನಗಳ ಅಂತರ್ ಕಾಲೇಜು ಟೆಕ್ ಫೆಸ್ಟ್ ‘ಪ್ರೇರಣ’ ನಡೆಯಿತು.
ಟೆಕ್ ಫೆಸ್ಟ್ ‘ಪ್ರೇರಣ’ ದಲ್ಲಿ ವಿವಿಧ ಕಾಲೇಜುಗಳ ಇಂಜಿನಿಯರಿಂಗ್ ನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿರುವರು. ಪೇಪರ್ ಪ್ರೆಸೆಂಟೇಶನ್,ಕ್ವೀಝ್, ಡಿಸೈನ್ ಕಾಂಪಟಿಶನ್, ಟೆಕ್ನಿಕಲ್ ಗೇಮ್ಸ್, ಶೋರ್ಟ್ ಫಿಲ್ಮ್ ಮೇಕಿಂಗ್, ಪೋಸ್ಟರ್ ಪ್ರೆಸೆಂಟೇಸನ್, ವೆಬ್ ಕ್ರಾಫ್ಟ್, ಸ್ಟಾರ್ಟ್ ಅಪ್ ಪ್ರೆಸೆಂಟೇಶನ್ ಹೀಗೆ ಹಲವು ಸ್ಪರ್ಧೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
 
githam tech fest
 
ಇಸಿಇ ಡಿಪಾರ್ಟ್ ಮೆಂಟ್ ನ ಪೇಪರ್ ಪ್ರೆಸೆಂಟೇಶನ್ ನಲ್ಲಿ ಬೆಂಗಳೂರಿನ ಆಕ್ಫರ್ಡ್ ಕಾಲೇಜಿನ ಭರತ್ ಆರ್ ಮತ್ತು ಕೆ ಯತೀಶ್ ರೆಡ್ಡಿ ಪ್ರಥಮ, ಗೀತಂ ವಿಶ್ವವಿದ್ಯಾಲಯದ ಭೈರವ್ ಕೆ ದ್ವಿತೀಯ, ದಿಲೀಪ್ ಕುಮಾರ್ ಹಾಗೂ ನಂದ ಕಿಶೋರ್ ರಾಜು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಪ್ರೊಜಕ್ಟ್ ಎಕ್ಸ್ಪೋನಲ್ಲಿ ಗೀತಂ ವಿಶ್ವವಿದ್ಯಾಲಯದ ಭೈರವ್, ನವ್ಯಶ್ರೀ ಪ್ರಥಮ, ಭರತ್ ಸಾಯಿ, ಮಹೇಶ್ ದ್ವಿತೀಯ, ಲುಕ್ಮನ್, ರಿಶಿಕುಮಾರ್ ಮತ್ತು ಆರ್ ಜಿ ಐಟಿ ಬೆಂಗಳೂರಿನ ಕೃತಿಕ್ ಹಾಗೂ ಮಂಜುನಾಥ್ ತೃತೀಯ ಬಹುಮಾನ ಪಡೆದಿದ್ದಾರೆ. ಲೈನ್ ಫೋಲೊವರ್ ನಲ್ಲಿ ಗೀತಂ ವಿಶ್ವವಿದ್ಯಾಲಯದ ಟಿ ಅಜಯ್, ಬಿ ಮಹೇಂದ್ರ ಪ್ರಥಮ ಹಾಗೂ ಕೆ ಓಂ ಸಾಯಿ ಮೋಹನ್ ಹಾಗೂ ಕೆ ಸಾಯಿ ಲಲಿತ್ ಕುಮಾರ್ ದ್ವಿತೀಯ ಬಹುಮಾನ ಪಡೆದಿದ್ದಾರೆ.
 
 
ಸಿವಿಲ್ ಡಿಪಾರ್ಟ್ ಮೆಂಟ್ ನ ಟೆಕ್ ಇಕ್ಯೂ ಸ್ಪರ್ಧೆಯಲ್ಲಿ ಗೀತಂ ವಿವಿಯ ಪುನೀತ್ ಹಾಗೂ ವಿವೇಕ್ ಪ್ರಥಮ, ಸಾಯಿ ಶ್ವೇತಾ ಹಾಗೂ ಸಾಯಿ ಚರಣ್ ದ್ವಿತೀಯ, ವೀರಲ್ ಹಾಗೂ ತೇಜಸ್ವಿನಿ ತೃತೀಯ ಬಹುಮಾನ ಪಡೆದಿದ್ದಾರೆ. ಕ್ರಾಸ್ ವಡ್ರ್ ನಲ್ಲಿ ಕೋಲಾರದ ಸಿಬಿಐಟಿಯ ಸುಮಂತ್ ಪ್ರಥಮ, ಸ್ವಾತಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಐಎಸ್ ಕೋಡ್ ಕ್ರಾಕಿಂಗ್ ನಲ್ಲಿ ಬೆಂಗಳೂರಿನ ಸಿಎಂ ಆರ್ಐಟಿ ಕಾಲೇಜಿನ ಕಾರ್ತಿಕ್ ಎನ್ ಎಂ ಪ್ರಥಮ, ಕೋಲಾರದ ಸಿಬಿಐಟಿ ಕಾಲೇಜಿನ ಪ್ರೀಯಾಂಕ ದ್ವಿತೀಯ ಬಹುಮಾನ ಪಡೆದಿದ್ದಾರೆ. ಪೋಸ್ಟರ್ ಪ್ರೆಸೆಂಟೇಶನ್ ನಲ್ಲಿ ಗೀತಂ ವಿವಿಯ ಸಾಯಿ ಶ್ವೇತ ಪ್ರಥಮ, ಚಾಣಕ್ಯ ಹಾಗೂ ಮಹೇಶ್ ಬಾಬು ದ್ವಿತೀಯ ಸ್ಥಾನ ಪಡೆದಿದ್ದಾರೆ.
 
 
ಸಿಎಸ್ಸಿ ಡಿಪಾರ್ಟ್ ಮೆಂಟ್ ನ ಸ್ಟಾರ್ಟ್ ಅಪ್ ಪ್ರೆಸೆಂಟೇಶನ್ ನಲ್ಲಿ ಬೆಂಗಳೂರಿನ ಬಿಎಂಎಸ್ ಐಟಿ ಕಾಲೇಜಿನ ಅಕ್ಷಯ್ ಕುಮಾರ್ ಎಚ್ ಪ್ರಥಮ, ಗೀತಂ ವಿವಿಯ ಕೆ ಸಾಯಿ ಚೈತನ್ಯ ದ್ವಿತೀಯ ಬಹುಮಾನ ಪಡೆದಿದ್ದಾರೆ. ವೆಬ್ ಕ್ರಾಫ್ಟ್ ನಲ್ಲಿ ಗೀತಂ ವಿವಿಯ ಕೆ ಸಾಯಿ ಚೈತನ್ಯ ಹಾಗೂ ವಿಜಯ ಶಂಕರ್ ಪ್ರಥಮ ಬಹುಮಾನ ಪಡೆದಿದ್ದಾರೆ. ಕೌಂಟರ್ ಸ್ಟ್ರೈಕ್ ನಲ್ಲಿ ವೆಲ್ಲೂರಿನ ಆದಿಪರಾಶಕ್ತಿ ಎಂಜಿನಿಯರಿಂಗ್ ಕಾಲೇಜಿನ ಲಿಂಗೇಶನ್ ಎಸ್ ಪ್ರಥಮ ಸ್ಥಾನ ಪಡೆದಿದ್ದಾರೆ. ಕೋಡ್ ಮೇಝ್ ನಲ್ಲಿ ಗೀತಂ ವಿವಿಯ ಜೋಶಿ ಹೆಚ್, ನಾಗೇಶ್, ಚಕ್ರಾಧರ್ ಕೆ ಪ್ರಥಮ, ಸಾಯಿ ಕುಮಾರ್, ಸಂದೀಪ್ ಕುಮಾರ್, ಸಾಯಿ ಮೌರ್ಯ ದ್ವಿತೀಯ ಹಾಗೂ ನವ್ಯಶ್ರೀ, ರೊಶಿತಾ ಪಿ ಹಾಗೂ ಮೇಘನಾ ತೃತೀಯ ಬಹುಮಾನ ಪಡೆದಿದ್ದಾರೆ.
 
 
ಮೆಕಾನಿಕಲ್ ವಿಭಾಗದ ರೋಬೋ ರೇಸ್ ನಲ್ಲಿ ಗೀತಂ ವಿವಿಯ ನಿಮ್ಮಲ ಶ್ರೀನಿವಾಸ್ ಪ್ರಥಮ, ಅನಿಲ್ ಕುಮಾರ್ ದ್ವಿತೀಯ ಬಹುಮಾನ ಪಡೆದಿದ್ದಾರೆ. ಟೆಕ್ನಿಕಲ್ ಕ್ವಿಜ್ ನಲ್ಲಿ ಹೇಮಂತ್ ಪ್ರಥಮ ಹಾಗೂ ಶಿವತೇಜ ರೆಡ್ಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪೇಪರ್ ಪ್ರೆಸೆಂಟೇಶನ್ ನಲ್ಲಿ ಗೀತಂ ವಿವಿಯ ನೂತನ್ ಹಾಗೂ ರಬ್ಬಾನಿ ಪ್ರಥಮ, ಕಿರಣ್ ಶ್ರೀರಾಮ್ ಹಾಗೂ ವಿವಿಐಟಿಯ ಕಿರಣ್ ಶ್ರೀರಾಮ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಐಸಿ ಇಂಜಿನ್ ಎಸ್ಸೆಂಬ್ಲಿಯಲ್ಲಿ ಗೀತಂ ವಿವಿಯ ಮಹೇಂದರ್ ಭಾನು ಪ್ರಕಾಶ್ ಹಾಗೂ ನಿಕಿಲ್ ಪ್ರಥಮ ಬಹುಮಾನ ಪಡೆದಿದ್ದಾರೆ. ಜಾಹಿರಾತು ರಚನೆಯಲ್ಲಿ ಶಾನವಾಝ್, ನಿಖಿಲ್ ಹನುಮೇಶ್, ನಿಖಿಲ್ ರಾಘವ ಹಾಗೂ ಮಹೇಂದ್ರ ಪ್ರಥಮ ಬಹುಮಾನ ಪಡೆದಿದ್ದಾರೆ. ಡಿಸೈನ್ ಕಾಂಪಟಿಶನ್ ನಲ್ಲಿ ಗೀತಂ ವಿವಿಯ ಮಣಿಕಾಂತ್ ಕುಮಾರ್ ಸ್ವಾಮಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪೋಸ್ಟರ್ ಪ್ರೆಸೆಂಟೇಶನ್ ನಲ್ಲಿ ಮಣಿಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.
 
 
ಸ್ಕೂಲ್ ಆಫ್ ಟೆಕ್ನೊಲಜಿಯ ನಿರ್ದೇಶಕರಾದ ಪ್ರೊ ವಿಜಯ ಭಾಸ್ಕರ್ ರಾಜು, ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣ ಮೂರ್ತಿ, ಮೆಕನಿಕಲ್ ವಿಭಾಗದ ಮುಖ್ಯಸ್ಥ ಪ್ರೊ ಟಿ ನಾಗೇಶ್ವರ್ ರಾವ್, ಸಿಎಸ್ ಇ ವಿಭಾಗದ ಮುಖ್ಯಸ್ಥ ಪ್ರೊ ಕೆ. ತಮ್ಮಿ ರೆಡ್ಡಿ, ಇಇಇ ವಿಭಾಗದ ಮುಖ್ಯಸ್ಥ ಪ್ರೊ ಜಿ ವಿ ನಾಗೇಶ್ ಕುಮಾರ್, ಇಸಿಇ ವಿಭಾಗದ ಮುಖ್ಯಸ್ಥ ಎ ಶ್ರೀನಿವಾಸ್, ಪ್ರಾದ್ಯಾಪಕರು, ಹಾಗೂ ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here