ಅಂತರಾಷ್ಟ್ರೀಯ ಯೋಗ ದಿನ ಆಚರಣೆ

0
547

 
ವರದಿ-ಚಿತ್ರ: ಹರ್ಷ ರಾವ್
ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತವಾಗಿ ಇಂದು ವಿವೇಕಾನಂದ ವಸತಿ ನಿಲಯ ನೆಹರು ನಗರ ಪುತ್ತೂರು ಇದರ ಆಶ್ರಯದಲ್ಲಿ ಯೋಗ ದಿನವನ್ನು ಆಚರಿಸಲಾಯಿತು.
 
putturu_yoga1
 
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರು ಪೋಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ದೇಶದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಆರಕ್ಷಕ ಸಿಬ್ಬಂದಿಗಳಿಗೆ ಕೆಲಸಗಳ ನಡುವೆ ಬಹಳಷ್ಟು ಮಾನಸಿಕ ಒತ್ತಡಗೊಳಪಡುತ್ತೇವೆ ಆದುದರಿಂದ ಯೋಗ ದಿನ ಆಚರಣೆ ಮತ್ತು ದಿನಂಪ್ರತಿ ಮಾಡುವುದರಿಂದ ಕನಿಷ್ಟ ಮನಸ್ಸಿಗೆ ಚೈತನ್ಯ ತುಂಬುತ್ತದೆ. ಕೇಂದ್ರ ಸರಕಾರದ ಆದೇಶದಂತೆ ಆಚರಣೆಗೆ ಪ್ರಾಶಸ್ಥ್ಯ ಕೊಟ್ಟಿರುವುದು ಸ್ವಾಗತಾರ್ಹ ಎಂದರು.
 
 
 
ವೇದಿಕೆಯಲ್ಲಿದ್ದ ಮುಖ್ಯ ನಿಲಯಪಾಲಕರಾದ ಡಾ|| ಬಿ.ಶ್ರೀಧರ ನಾಯಕ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ನಿಲಯದ ಸಂಚಾಲಕರಾದ ತಿರುಮಲೇಶ್ವರ ಭಟ್ ಮಾತನಾಡಿ ಯೋಗ ಸರ್ವ ಜನಾಂಗಕ್ಕೆ ಸಂಬಂಧಿಸಿದುದು, ಆದುದರಿಂದ ನಮ್ಮ ಪ್ರಧಾನಿಯವರ ಆದೇಶದಂತೆಯೇ ವಿಶ್ವ ಯೋಗ ದಿನವನ್ನು ಆಚರಣೆ ಮಾಡಬೇಕಾದುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಅಭೂತಪೂರ್ವವಾಗಿ ಆಚರಿಸುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
 
 
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಡಾ|| ಪೀಟರ್ ವಿಲ್ಸನ್ ಪ್ರಭಾಕರ್ ಇವರ ಗೌರವ ಉಪಸ್ಥಿಯಿತ್ತು. ನಂತರ ನಿಲಯದ ಎಲ್ಲಾ ವಿದ್ಯಾರ್ಥಿಗಳು ಯೋಗ ಶಿಕ್ಷಕ ಜಯರಾಮ್ ರವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು.
 
 
 
ಕಾರ್ಯಕ್ರಮವನ್ನು ಸಹ ನಿಲಯ ಪಾಲಕಿ ದಿವ್ಯಾ ಎಸ್ ನಿರ್ವಹಿಸಿದರು. ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕಿ ಉಷಾ ನಿರ್ವಹಿಸಿದರು. ಪುತ್ತೂರಿನ ಎಲ್ಲಾ ಪೋಲೀಸ್ ಸಿಬ್ಬಂದಿಯವರು ಯೋಗಾಭ್ಯಾಸ ನಡೆಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಕೋಶಾಧಿಕಾರಿ ರವೀಂದ್ರ ಪಿ. ಉಪನಿಲಯಪಾಲಕರುಗಳು ಹಾಗೂ ಉಪನ್ಯಾಸಕರುಗಳಾದ ಗೋವಿಂದರಾಜ್ ಶರ್ಮ , ಹರೀಶ್ ರಾವ್ ಹಾಗೂ ಎಲ್ಲಾ ಸಹ ನಿಲಯಪಾಲಕರುಗಳು, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿರಿದ್ದರು. ಈ ಯೋಗ ಸಪ್ತಾಹವು ದಿನಾಂಕ 21.06.2016ರಂದು ಮೊದಲ್ಗೊಂಡು 07.06.2016 ರಂದು ಕೊನೆಗೊಳ್ಳಲಿದೆ.

LEAVE A REPLY

Please enter your comment!
Please enter your name here