ಅಂಗನವಾಡಿ ಸಹಾಯಕಿ ಹುದ್ದೆ ಖಾಲಿ ಇದೆ

0
440

ಉದ್ಯೋಗ ವಾರ್ತೆ
ಬಂಟ್ವಾಳ ತಾಲೂಕಿನ 8 ಅಂಗನವಾಡಿ ಕೇಂದ್ರಗಳ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
 
ಕರ್ಪೆ ಗ್ರಾಮದ ಕರ್ಪೆ ಕುಟ್ಟಿಕಳ, ಹಾಗೂ ಕರ್ಪೆ ಸಮಾಜ ಮಂದಿರ, ಪುದು ಗ್ರಾಮದ ಕುಂಪನಮಜಲು2 ಬಾಳೆಪುಣಿ ಗ್ರಾಮದ ನವಗ್ರಾಮ, ಕಾಡಬೆಟ್ಟು ಗ್ರಾಮದ ಉಗ್ಗಬೆಟ್ಟು ಪಾಣೆಮಂಗಳೂರು ಗ್ರಾಮದ ಜೈನರಪೇಟೆ ವಾರ್ಡ್ ಸಂಖ್ಯೆ 20, ಕುಕ್ಕಿಪಾಡಿ ಗ್ರಾಮದ ಮಾಡಾಮೆ, ಮೂಡನಡುಗೋಡು ಗ್ರಾಮದ ಕುಜಿಲಬೆಟ್ಟು ಅಂಗನವಾಡಿ ಸಹಾಯಕಿ ಹುದ್ದೆಗೆ ಅದೇ ಗ್ರಾಮದ 18-35 ವರ್ಷ ಒಳಗಿನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
 
ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ತೇರ್ಗಡೆ ಹಾಗೂ ಗರಿಷ್ಠ 9ನೇ ತರಗತಿ ತೇರ್ಗಡೆ ಆಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 23. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here