ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ನೇಮಕಾತಿ

0
3550

ಮಂಗಳೂರು ಉದ್ಯೋಗ ವಾರ್ತೆ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು (ನಗರ) ವ್ಯಾಪ್ತಿಯ ವಿವಿಧ ಅಂಗನವಾಡಿಗಳಿಗೆ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
 
 
 
ಅತ್ತಾವರ ಶಾಲೆ (2) ಯೂತ್ ಸ್ಪೋಟ್ಸ್ ಕ್ಲಬ್ ತಣ್ಣೀರುಬಾವಿ, (3) 8ನೇ ವಿಭಾಗ ಚೊಕ್ಕಬೆಟ್ಟು (4) ಕುದ್ರೋಳಿ ಬೆಂಗ್ರೆ, ಒಟ್ಟು 4 ಅಂಗನವಾಡಿಗಳ ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
 
 
ಅಂಗನವಾಡಿ ಸಹಾಯಕಿಯರ ಹುದ್ದೆಗೆ (1) ಶಾಂತಿನಗರ -ಬಜಾಲ್, (2) ಅರ್ಸುಲ (ಪೋರ್ಟ್ ವಾರ್ಡ್), (3) ಜೋಡುಕಟ್ಟೆ -ಮರೋಳಿ (4) ಕುಂಜತ್ತ್‍ಬೈಲ್ ಬಾವಿ (5) ಉರುಂದಾಡಿ – ಕಾವೂರು ಗ್ರಾಮ, (6)ಅಂಬನಗರ-ಹೊಯಿಗೆ ಬಜಾರ್ (7) ಮೇರಿಹಿಲ್ (8) ಪರಾರಿ -ತಿರುವೈಲು (9) ವ್ಶೆದ್ಯಾನಾಥ ನಗರ ಪಚ್ಚನಾಡಿ (10) ಬದ್ರಿಯಾ ಶಾಲೆ ಬಂದರು ಒಟ್ಟು 10 ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ನೇ ತರಗತಿಯಿಂದ 9ನೇ ತರಗತಿ ಉತ್ತೀರ್ಣ ವಿದ್ಯಾಭ್ಯಾಸವುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 
 
 
ಈ ಎಲ್ಲಾ ಹುದ್ದೆಗಳು ಸಾಮಾನ್ಯ ವರ್ಗವಾಗಿದ್ದು ಅರ್ಜಿ ಸಲ್ಲಿಸಲು ಫೆಬ್ರವರಿ 4 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಿಲ್ವರ್ ಕ್ರಾಸ್ ರೋಡ್ ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು 0824-2432809 ಇಲ್ಲಿಗೆ ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here