ಅಂಗನವಾಡಿಯಲ್ಲಿ ಹುದ್ದೆ ಖಾಲಿ ಇದೆ

0
257

 
ಉಡುಪಿ ಉದ್ಯೋಗ ವಾರ್ತೆ
ಉಡುಪಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ನಗರಸಭೆ ವ್ಯಾಪ್ತಿಯ ಸೌತ್ ಶಾಲೆ( ನಗರಸಭೆ ಉಡುಪಿ- ವಾರ್ಡ್ ವಳಕಾಡು), 92 ಹೇರೂರು (ಗ್ರಾಮ 92 ಹೇರೂರು) ಅಂಗನವಾಡಿ ನಕಾರ್ಯಕರ್ತೆ ಹುದ್ದೆಗೂ, ಪಡುಬಿದ್ರೆ-1(ಗ್ರಾಮ ನಡ್ಸಾಲು)(3ನೇ ಬಾರಿ ಪ್ರಕಟಣೆ ಹತ್ತಿರದ ಗ್ರಾಮದವರು ಅರ್ಜಿ ಸಲ್ಲಿಸಬಹುದಾಗಿದೆ), ಗುಡ್ಡೆಅಂಗಡಿ (ಗ್ರಾಮ ಉದ್ಯಾವರ), ಶಂಕರಪುರ (ಗ್ರಾಮ ಮೂಡಬೆಟ್ಟು), ಎಲ್ಲೂರು ಮಹಿಳಾ ಮಂಡಲ ಉಳ್ಳೂರು) ಅಂಗನವಾಡಿ ಸಹಾಯಕಿ ಹುದ್ದೆಗೂ, ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
 
 
18 ರಿಂದ 35 ವರ್ಷದೊಳಗಿನ ಗರಿಷ್ಟ ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರುವ ಕಾರ್ಯಕರ್ತೆಯರಿಗೂ, ಕನಿಷ್ಟ 4 ನೇ ತರಗತಿ ಮತ್ತು ಗರಿಷ್ಠ 9 ನೇ ತರಗತಿ ತೇರ್ಗಡೆಯಾಗಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜೂನ್ 6 ರೊಳಗೆ ಸಲ್ಲಿಸತಕ್ಕದ್ದು.
 
 
 
ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನೆ ಉಡುಪಿ ಕಚೇರಿಯಲ್ಲಿರಿಸಿದ ಟೆಂಡರು ಪೆಟ್ಟಿಗೆಯಲ್ಲಿ ಅರ್ಜಿಗಳನ್ನು ಹಾಕಲು ಜೂನ್ 6 ಕೊನೆಯ ದಿನಾಂಕ, ತೆರೆವಿರುವ ಅಂಗನವಾಡಿ ಕೇಂದ್ರಗಳ ಅಭ್ಯರ್ಥಿಗಳಿಗಿರಬೇಕಾದ ಅರ್ಹತೆ, ಅರ್ಜಿ ಸಲ್ಲಿಸುವ ನಮೂನೆ ಮತ್ತಿತರ ವಿವರಗಳನ್ನೊಳಗೊಂಡ ಪ್ರಕಟಣೆಯನ್ನು ಸಂಬಂಧ ಪಟ್ಟ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಪ್ರೈಮರಿ ಹೆಲ್ತ್ ಸೆಂಟರ್ ಗಳಲ್ಲಿ, ಗ್ರಾಮ ಲೆಕ್ಕಿಗ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here