ಅಂಗನವಾಡಿಯಲ್ಲಿ ಹುದ್ದೆ ಖಾಲಿ ಇದೆ

0
439

 
ಉಡುಪಿ ಉದ್ಯೋಗ ವಾರ್ತೆ
ಉಡುಪಿ ತಾಲೂಕಿನ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನೆಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡಿ(ಗ್ರಾಮ ಚೇರ್ಕಾಡಿ), ಹೈಕಾಡಿ (ಗ್ರಾಮ ಹಿಲಿಯಾಣ), ಉದ್ಬವರಾಮ ಮಂದಿರ (ಗ್ರಾಮ ಮಣೂರು), ಹೇರಾಡಿ (ಗ್ರಾಮ ಹೇರಾಡಿ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆಗೆ 18 ರಿಂದ 35 ವರ್ಷದೊಳಗಿನ ಕನಿಷ್ಠ 4 ನೇ ತರಗತಿ ಮತ್ತು ಗರಿಷ್ಠ 9 ನೇ ತರಗತಿ ತೇರ್ಗಡೆಯಾಗಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
 
ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಕಚೇರಿಯಲ್ಲಿರಿಸಿದ ಟೆಂಡರು ಪೆಟ್ಟಿಗೆಯಲ್ಲಿ ಅರ್ಜಿಗಳನ್ನು ಹಾಕಲು ಜೂನ್ 6 ಕೊನೆಯ ದಿನಾಂಕ, ತೆರೆವಿರುವ ಅಂಗನವಾಡಿ ಕೇಂದ್ರಗಳ ಅಭ್ಯರ್ಥಿಗಳಿಗಿರಬೇಕಾದ ಅರ್ಹತೆ, ಅರ್ಜಿ ಸಲ್ಲಿಸುವ ನಮೂನೆ ಮತ್ತಿತರ ವಿವರಗಳನ್ನೊಳಗೊಂಡ ಪ್ರಕಟಣೆಯನ್ನು ತಾಲೂಕಿನ ಬ್ರಹ್ಮಾವರ ವಿಶೇಷ ತಹಶೀಲ್ದಾರರ ಕಚೇರಿ, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಬ್ರಹ್ಮಾವರ, ತಾಲೂಕು ಪಂಚಾಯತ್ ಕಚೇರಿ, ಸಂಬಂಧ ಪಟ್ಟ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಪ್ರೈಮರಿ ಹೆಲ್ತ್ ಸೆಂಟರ್ಗಳಲ್ಲಿ, ಗ್ರಾಮ ಲೆಕ್ಕಿಗ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ.
 
 
ಹೆಚ್ಚಿನ ವಿವರಗಳಿಗಾಗಿ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 08202562244

LEAVE A REPLY

Please enter your comment!
Please enter your name here