ಅಂಗಣಕ್ಕೆ ಎಸ್ ಡಿ ಎಂ ಕ್ರೀಡಾ ತಾರೆಯರ ಹೆಸರು

0
241

ವರದಿ: ಚೈತನ್ಯ ಕುಡಿನಲ್ಲಿ
ಇಲ್ಲಿನ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿಪೂರ್ವ ವಿದ್ಯಾರ್ಥಿನಿಯರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದ ಅಂಗಣಗಳಿಗೆ ಕಾಲೇಜಿನ ಕ್ರೀಡಾ ಸಾಧಕಿಯರ ಹೆಸರಿಡುವ ಮೂಲಕ ಎಸ್ ಡಿ ಎಂ ವಿದ್ಯಾಸಂಸ್ಥೆ ವೈಶಿಷ್ಟ್ಯತೆ ಮೆರೆದಿದೆ.
 
 
ಕ್ರೀಡಾಕೂಟದಲ್ಲಿ ಒಟ್ಟು ನಾಲ್ಕು ಅಂಗಣಗಳಿದ್ದು, ಇವುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ತಾರೆಯರಾದ ನೇತ್ರಾವತಿ, ನೇಹ, ರಶ್ಮಿ ಹಾಗು ವಿನಿತಾ ಅವರ ಹೆಸರನ್ನು ಇಡಲಾಗಿದೆ. ಇದರಲಲಿ ನೇತ್ರಾವತಿ ಹಾಗು ನೇಹ ಅವರು ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಪಂದ್ಯಾಟದಲ್ಲಿ ಕ್ರಮವಾಗಿ ಎರಡು ಬಾರಿ ಬೆಳ್ಳಿ ಹಾಗು ಎರಡು ಬಾರಿ ಕಂಚಿನ ಪದಕವನ್ನು ಪಡೆದುದಲ್ಲದೆ, ಇಬ್ಬರೂ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಾಲ್ ಬ್ಯಾಡ್ಮಿಟನ್ನಲ್ಲಿ ಮೂರು ಬಾರಿ ಚಿನ್ನದ ಪದಕ ಪಡೆದ ರಶ್ಮಿ, ‘ಸ್ಟಾರ್ ಆಫ್ ಇಂಡಿಯಾ’ ಗೌರವಕ್ಕೆ ಪಾತ್ರರಾಗಿರುತ್ತಾರೆ.
 
 
ಇನ್ನು ವಿನಿತಾ ಅವರು ಜಪಾನ್ನಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಪಂದ್ಯಾಟದಲ್ಲಿ ಬೆಳ್ಳಿ ಪದಕವನ್ನು ಪಡೆದುದಲ್ಲದೆ, ಯುನಿವರ್ಸಿಟಿಯಲ್ಲಿ ತಮ್ಮ ಹೆಸರಿನಲ್ಲಿ ದಾಖಲೆ ಬರೆದಿರುತ್ತಾರೆ. ಹೀಗೆ ಎಸ್ ಡಿ ಎಂ ಹೆಸರನ್ನು ಅಂತರಾಷ್ಟ್ರೀಯಮಟ್ಟಕ್ಕೆ ಕೊಂಡೊಯ್ದ ಕ್ರೀಡಾ ಸಾಧಕಿಯರ ಹೆಸರನ್ನು ಅಂಗಣಗಳಿಗೆ ಇಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಸ್ಡಿಎಂ ವಿದ್ಯಾಸಂಸ್ಥೆ.

LEAVE A REPLY

Please enter your comment!
Please enter your name here