ʻಕೈಲಾಸʼದ ವಿಶೇಷ ಹಲಸು!

0
2458

ವೇಣೂರು: ಹೌದು…ಇದು ಕೈಲಾಸದ ವಿಶೇಷ ಹಲಸು… ಬರೋಬ್ಬರಿ ೫೩.೫ಕೆಜಿ ತೂಕ… ಇಂತಹ ಹಲಸು ಈ ತನಕ ಇವರು ಕಂಡಿಲ್ಲ… ಇವರೊಬ್ಬ ಆದರ್ಶ ಕೃಷಿಕ. ಸ್ವಂತ ಶ್ರಮ ವಹಿಸಿ ಉತ್ತಮ ಕೃಷಿ ನಡೆಸುತ್ತಿದ್ದಾರೆ. ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಹತ್ತು ಹಲವು ಕೃಷಿಯನ್ನು ತಮ್ಮ ಜಮೀನಿನಲ್ಲಿ ಬೆಳೆದು ಸಾಧಿಸಿ ತೋರಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ʻಕೈಲಾಸʼ ಮನೆಯ ಶಿವ ಪ್ರಸಾದ್‌ ಅವರ ತೋಟದಲ್ಲಿರುವ ಹಲಸಿನ ಮರ ಇದೀಗ ಈ ವಿಶೇಷತೆಗೆ ಸಾಕ್ಷಿಯಾಗಿದೆ. ಮೊಟ್ಟಮೊದಲ ಬಾರಿಗೆ ಬೃಹತ್‌ ಗಾತ್ರದ ಹಲಸೊಂದು ಮೂಡಿಬಂದಿದೆ. ಇದರ ತೂಕ ಬರೋಬ್ಬರಿ ೫೩.೫ಕೆ.ಜಿ… ಇದೀಗ ಇದರ ಹಣ್ಣು ತಿನ್ನುವ ಹಂಬಲದಲ್ಲಿ ಇವರಿದ್ದಾರೆ…! ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಶಿವಪ್ರಸಾದ್‌ ಅವರ ೯೪೪೯೧೦೪೨೪೨ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here