Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

79.5ಕೋಟಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ, ಶಂಕುಸ್ಥಾಪನೆ

#cm#moodbidri#abhaychandra#jain

ತಾಲೂಕು ಘೋಷಣೆಯನಂತರ ಮೊದಲಬಾರಿಗೆ ಮುಖ್ಯಮಂತ್ರಿ ಭೇಟಿ; ಯು.ಜಿ.ಡಿಗೆ ಅಸ್ತು
ನಮ್ಮ ಪ್ರತಿನಿಧಿ ವರದಿ
ಹೊಸ ತಾಲೂಕಾಗಿ ಮೂಡಬಿದಿರೆಯ ಘೋಷಣೆ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಬಿದಿರೆಗೆ ಭೇಟಿನೀಡಿ 79.5ಕೋಟಿ ರುಪಾಯಿಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಹಲವು ನೂತನ ಕಾರ್ಯಕ್ರಮಗಳ ಶಿಲಾನ್ಯಾಸ ಗೈದರು. ರವಿವಾರ ಸಾಯಂಕಾಲ ಮೂಡಬಿದಿರೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂಡಬಿದಿರೆಯ ಮೆಸ್ಕಾಂ ವಿಭಾಗೀಯ ಕಚೇರಿಯನ್ನು ಉದ್ಘಾಟಿಸಿದ ಬಳಿಕ, ಗಾಂಧೀ ಪಾರ್ಕ್  ಆವರಣದಲ್ಲಿ ನಿರ್ಮಾಣಗೊಂಡ ಸ್ಕೇಟಿಂಗ್ ರಿಂಗ್ ಉದ್ಘಾಟಿಸಿದರು.ಮೂಡಬಿದಿರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ಕೇಟಿಂಗ್ ಟ್ರಾಕ್ ಹಾಗೂ ಅಭಿವೃದ್ಧಿಹೊಂದಿರರುವ ಗಾಂಧೀಪಾರ್ಕ್  ಪರಿಸರವನ್ನು ವೀಕ್ಷಿಸಿದರು.
ಮೂಡಬಿದಿರೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ಯು.ಜಿ.ಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿದ ಮುಖ್ಯಮಂತ್ರಿಗಳು ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಹಣಬಿಡುಗಡೆಗೊಳಿಸುವ ಭರವಸೆ ನೀಡಿದರು. ಮೂಡಬಿದಿರೆಯ ಜನಸಂಖ್ಯೆ, ವಿದ್ಯಾರ್ಥಿಗಳ ಸಂಖ್ಯೆಗಳನ್ನು ಮನಗಂಡು ಈ ಯೋಜನೆ ಅನುಷ್ಠಾನಗೊಳಿಸುವ ಭರವಸೆನೀಡಿದರು. ನೂತನ ತಾಲೂಕಾಗಿರುವ ಮೂಡಬಿದಿರೆ ಹೊಸ ತಾಲೂಕಾಗಿ ತನ್ನ ಕಾರ್ಯವನ್ನು ಈ ತಿಂಗಳಿನಿಂದಲೇ ಆರಂಭಿಸಲಿದೆ ಎಂದು ಘೋಷಿಸಿದರು. ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು.
ರಾಜ್ಯಸರಕಾರದಿಂದ ಕೋಟಿ ಕೋಟಿ ನೆರವು: ಅಭಯಚಂದ್ರ ಜೈನ್
ಮೂಲಭೂತ ವ್ಯವಸ್ಥೆಗೆ ರಾಜ್ಯಸರಕಾರ ವಿಶೇಷ ಒತ್ತು ನೀಡುತ್ತಿದೆ.ನುಡಿದಂತೆಯೇ ನಡೆವ ಮುಖ್ಯಮಂತ್ರಿಗಳು ಮೂಡಬಿದಿರೆ ವಿಧಾನ ಸಭಾ ಕ್ಷೇತ್ರಕ್ಕೆ 500ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಒಂದು ವರ್ಷದಲ್ಲಿಯೇ ಮೂಡಬಿದಿರೆಯ ಬೈಪಾಸ್ ಯೋಜನೆ ಪೂರ್ಣಗೊಂಡಿದ್ದು ಅದರ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳು ಒದಗಿಸಿದ್ದು ದೇಶದ ಇತಿಹಾಸದಲ್ಲಿಯೇ 750ರಷ್ಟು ಬೃಹತ್ ಸಂಖ್ಯೆಯ ಕ್ರೀಡಾಪಟುಗಳಿರುವ ಏಕೈಕ ತಾಲೂಕು ಕೇಂದ್ರ ಮೂಡಬಿದಿರೆಯಾಗಿದೆ.

#cm#moodbidri#abhaychandra#jain#mescom

ಇಲ್ಲಿ ಕ್ರೀಡಾಳುಗಳ ಅವಶ್ಯಕತೆಗನುಗುಣವಾಗಿ ಸಿಂಥೆಟಿಕ್ ಟ್ರಾಕ್, ಮಲ್ಟಿಜಿಮ್, ಸ್ವಿಮ್ಮಿಂಗ್ ಪೂಲ್,ಗರಡಿಮನೆ, ಸ್ಕೇಟಿಂಗ್ ಯಾರ್ಡ್ ಗಳ ವ್ಯವಸ್ಥೆ ಮಾಡಲಾಗಿದೆ ಶ್ರೀಕ್ಷೇತ್ರ ಬಪ್ಪನಾಡಿನ ಯಾತ್ರಿ ನಿವಾಸಕ್ಕೆ ರಾಜ್ಯ ಸರಕಾರದಿಂದ 1ಕೋಟಿ ನೆರವು ನೀಡಲಾಗುತ್ತಿದೆ. ಕಾಂಕ್ರೀಟ್ ರಸ್ತೆಯ ನಿರ್ಮಾಣಕ್ಕೆ 50ಲಕ್ಷ ಅನುದಾನ ಒದಗಿಸಲಾಗಿದೆ ಎಂದರು. ಕಟೀಲು ಕ್ಷೇತ್ರದಲ್ಲೂ ಯಾತ್ರಿನಿವಾಸ ನಿರ್ಮಾಣಕ್ಕೆ ಒಂದೂಕಾಲು ಕೋಟಿ ಅನುದಾನ ಒದಗಿಸಲಾಗಿದೆ . ರಾಜ್ಯದ ಜನಮೆಚ್ಚಿದ ಮುಖ್ಯಮಂತ್ರಿಗಳು ನುಡಿದಂತೆ ನಡೆಯುತ್ತಿದ್ದಾರೆಂದು ಶಾಸಕ ಅಭಯಚಂದ್ರ ಜೈನ್ ಶ್ಲಾಘಿಸಿದರು.

ಮೂಡಬಿದಿರೆಯ ಇತಿಹಾಸ ಪ್ರಸಿದ್ಧ ಸ್ವರಾಜ್ಯ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಿತು. ಮೂಡಬಿದಿರೆ ಹಾಗೂ ಆಸುಪಾಸಿನ ಗ್ರಾಮಗಳಿಂದ ಅಭಿಮಾನಿಗಳು ಆಗಮಿಸಿದ್ದರು ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ರಮಾನಾಥ ರೈ, ಆಸ್ಕರ್ ಫೆನಾಂಡೀಸ್, ಬ್ಲೋಸಂ ಫೆರ್ನಾಡೀಸ್, ಸಚಿವ ಯು.ಟಿ.ಖಾದರ್, ಸಚಿವ ಪ್ರಮೋದ್ ಮಧ್ವರಾಜ್, ಮುಖ್ಯ ಸಚೇತಕ ಐವನ್ ಡಿ’ಸೋಜ, ಎಂ.ಎನ್.ರಾಜೇಂದ್ರ ಕುಮಾರ್,ಮಿಜಾರು ಗುತ್ತು ಆನಂದ ಆಳ್ವ, ಮೊಯ್ದಿನ್ ಬಾವಾ, ಎಂ.ಎ.ಗಫೂರ್, ಎ.ಸಿ.ಭಂಡಾರಿ, ಬಿ.ಎಚ್.ಖಾದರ್, ಹರಿಣಾಕ್ಷಿ ಸುವರ್ಣ, ಸುರೇಶ್ ಪ್ರಭು, ಡಾ.ಎಂ.ಮೋಹನ ಆಳ್ವ, ಶಶಿಕಾಂತ್, ಹರೀಶ್ ಕುಮಾರ್ ಮೊದಲಾದವರಿದ್ದರು.

ಭಾವುಕರಾದ ಅಭಯ
ಅಧ್ಯಕ್ಷೀಯ ಭಾಷಣ ಮಾಡಿದ ಶಾಸಕ ಕೆ.ಅಭಯಚಂದ್ರಜೈನ್ ತಮ್ಮ ಭಾಷಣದ ವೇಳೆ ಭಾವುಕರಾದರು. ಮಂತ್ರಿಭಾಗ್ಯ ನನಗೆ ಬಯಸದೇಬಂದದ್ದು. ಮುಖ್ಯಮಂತ್ರಿಗಳು ಕರೆದುನೀಡಿದ ಪದವಿ ಎಂದು ಭಾವುಕರಾಗಿ ನುಡಿದರು.
ಚಿತ್ರಗಳು: ಅನಿತ್ ಡಿಜಿಟಲ್ಸ್ ಮಾರೂರು.