Headlines

ಇಳೆಯು ಕಾದಿದೆ ಮಳೆಗಾಗಿ… * ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ *

6ಕೃತಿಗಳ ಅನಾವರಣ ಸಾಧಕರ ಸನ್ಮಾನ

#kantavara#kannada#sangha#kantavarotsava

ನಮ್ಮ ಪ್ರತಿನಿಧಿ ವರದಿ
ಅದ್ದೂರಿಯಾಗಿ ನಡೆಯಿತು ಕಾಂತಾವರೋತ್ಸವ

ಕನ್ನಡ ಸಂಘ ಕಾಂತಾವರ ಇದರ 41ರ ಸಂಭ್ರಮ ಮತ್ತು ಕಾಂತಾವರ ಉತ್ಸವ 2017ಇದರ ಮೊದಲ ದಿನದ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವದ ಶುಭಾವಸರದಲ್ಲಿ ಕಾಂತಾವರದಲ್ಲಿ ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸಂಘದಲ್ಲಿನ ದತ್ತಿಪ್ರಾಯೋಜಕತ್ವದ 2017ರ ಸಾಲಿನ ಪ್ರಶಸ್ತಿ ಪ್ರದಾನ ಮತ್ತು ನೂತನ 6 ಕೃತಿಗಳ ಅನಾವರಣ ಕಾರ್ಯಕ್ರಮ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ಆಸಕ್ತ ಕನ್ನಡ ಬಾಂಧವರ ಸಮ್ಮುಖದಲ್ಲಿ ನಡೆಯಿತು.
ರಮಾನಂದ ಘಾಟೆಯವರ ಸಮಗ್ರ ಕತೆಗಳು(ಡಾ.ಬಿ.ಜನಾರ್ದನ ಭಟ್), ರಸಿಕ ಪುತ್ತಿಗೆ ಅವರ ಮಂತ್ರ ತಂತ್ರ ಸಿದ್ಧಾಂತ ಅನುಭವಗಳು(ಡಾ.ಬಿ.ಜನಾರ್ದನ ಭಟ್), ಡಾ.ನಾ.ಮೊಗಸಾಲೆ ಅವರ ಲೇಖನಗಳ ಸಂಗ್ರಹ ಶರಣರ ನುಡಿಹೆಜ್ಜೆ ನಡೆಗೆಜ್ಜೆ, ಡಾ.ನಾ.ಮೊಗಸಾಲೆ ಅವರ ಆತ್ಮವೃತ್ತಾಂತ ಬಯಲಬೆಟ್ಟ (ದ್ವಿತೀಯ ಮುದ್ರಣ), ಮತ್ತು ಕಾಂತಾವರದ ಕಾಂತಾ-ರವ ಡಾ.ನಾ ಮೊಗಸಾಲೆ(ಬೆಳಗೋಡು ರಮೇಶ್ ಭಟ್) ಕೃತಿಯೂ ಸೇರಿದಂತೆ ಸುಧಾಕರ ಚತುವರ್ೇದಿ ಅವರ ಸಾಹಿತ್ಯ ಕೃತಿಯನ್ನು ಅನಾವರಣಗೊಳಿಸಲಾಯಿತು.

#kantavara#kannada#sangha#kantavarotsava#day1
ಡಾ.ತಮಿಳ್ ಸೆಲ್ವಿ ಅವರಿಗೆ ಕನರ್ಾಟಕ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ, ಪ್ರೊ.ಎಂ.ರಾಮಚಂದ್ರ ಕಾರ್ಕಳ ಅವರಿಗೆ ವಿದ್ವತ್ ಪರಂಪರಾ ಪುರಸ್ಕಾರ, ಪ್ರೊ.ಎನ್.ಟಿ.ಭಟ್ ಉಡುಪಿ ಇವರಿಗೆ ಕಾಂತಾವರ ಅನುವಾದ ಸಾಹಿತ್ಯ ಪುರಸ್ಕಾರ, ಪ್ರೊ.ಸಿ.ನಾಗಣ್ಣ ಮೈಸೂರು ಇವರಿಗೆ ಕಾಂತಾವರ ಸಾಹಿತ್ಯ ಪುರಸ್ಕಾರ, ಡಾ.ಜನಾರ್ದನ ಭಟ್ ಬೆಳ್ಮಣ್ ಅವರಿಗೆ ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರದಾನಿಸಿ ಗೌರವಿಸಿದರು.
ಕಾಂತಾವರ ಕನ್ನಡ ಸಂಘವು ಕನ್ನಡ ಸೇವೆಯನ್ನು ಅತ್ಯಂತ ಗೌರವಯುತವಾಗಿ ನ್ಯಾಯಯುತವಾಗಿ ನಡೆಸುತ್ತಿದೆ ಇದು ಸ್ತುತ್ಯಾರ್ಹ ಎಂದು ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಅಭಿಪ್ರಾಯಿಸಿದರು.

ಹಿರಿಯ ಸಾಹಿತಿ ಪ್ರೊ.ಜಿ.ಡಿ.ಜೋಶಿ ಮುಂಬೈ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು. ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಸರೋಜಿನಿ ನಾಗಪ್ಪಯ್ಯ ಮೇನಾಲ ಕಾರ್ಯಕ್ರಮ ನಿರ್ವಹಿಸಿ ಬಾಬು ಶೆಟ್ಟಿ ನಾರಾವಿ ವಂದಿಸಿದರು.