Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

30ನೇವಾರದ ಕ್ಲೀನ್ ಅಪ್ ಮೂಡಬಿದಿರೆ

#javaner#bedra#cleanup#30week

ಮೂಡಬಿದಿರೆಗೆ ಸ್ವಾಗತಕೋರುವ ಹಂಡೇಲು ಸುತ್ತಿನಲ್ಲಿ ಸ್ವಚ್ಛತೆಯ ಕಾರ್ಯ
ಮೂಡಬಿದಿರೆ: ಕಳೆದ 29ವಾರಗಳಿಂದ ನಿರಂತರವಾಗಿ ಮೂಡಬಿದಿರೆ ಪರಿಸರದಲ್ಲಿ ಸ್ವಚ್ಛತೆಯನ್ನು ನಡೆಸುತ್ತಿರುವ ಮೂಡಬಿದಿರೆಯ ಪ್ರತಿಷ್ಠಿತ ಸಂಘಟನೆ `ಜವನೆರ್ ಬೆದ್ರ’ದ ನೇತೃತ್ವದಲ್ಲಿ ಮೂಡಬಿದಿರೆಗೆ ಸ್ವಾಗತಕೋರುವ ಹಂಡೇಲು ಸುತ್ತಿನಲ್ಲಿ ಭಾನುವಾರ 30ನೇ ವಾರದ ಸ್ಪಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ಆಳ್ವಾಸ್ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು,ಪುತ್ತಿಗೆ ಗ್ರಾಮ ಪಂಚಾಯತ್ ಸಹಭಾಗಿತ್ವ ನೀಡಿದ್ದವು. ಭಾನುವಾರ ಬೆಳಗ್ಗೆ ಸುಮಾರು 3ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ, ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ಪಚ್ಛತಾ ಅಭಿಯಾನ ಕೈಗೊಳ್ಳಲಾಯಿತು.

#javaner#bedra#cleanup#moodbidri

ಪಂಚಾಯತ್ ಎಚ್ಚರ ವಹಿಸಲಿದೆ: ಪುತ್ತಿಗೆ ಪಂಚಾಯತ್ ವ್ಯಾಪ್ತಿಗೊಳಪಟ್ಟ ಹಂಡೇಲು ಪರಿಸರದಲ್ಲಿ ನಿರಂತರ ಕಸ , ತ್ಯಾಜ್ಯಗಳನ್ನು ಸುರಿಯುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಹಲವು ಬಾರಿ ಸೂಚನಾ ಫಲಕ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ಸುರಿಯುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಪಂಚಾಯತ್ ಸದಸ್ಯ ಗಿರೀಶ್ ನೀಡಿದರು.

#javaner#bedra#cleanup

ಸ್ವಚ್ಛತೆ ಬೇಕು-ಅಮರ್: ಮನೆ ಮನೆಗಳಲ್ಲಿ ಧಾರ್ಮಿಕ ಕಾರ್ಯಗಳ ಸಂದರ್ಭದಲ್ಲಿ ನಾವು ಹೇಗೆ ಸ್ಪಚ್ಛತೆಯಬಗ್ಗೆ ಕಾಳಜಿ ವಹಿಸುತ್ತೇವೆಯೋ ಅಂತಹ ಕಾಳಜಿ ಸಾರ್ವಜನಿಕ ಸಮಾರಂಭಗಳಲ್ಲೂ ಮೂಡಬೇಕಾಗಿದೆ. ಜನತೆ ತಮ್ಮ ತಮ್ಮ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಇಡೀ ಸಮಾಜ ಸ್ವಚ್ಛವಾಗುವಂತಾಗಲು ಮುತುವರ್ಜಿ ವಹಿಸಬೇಕಾಗಿದೆ ಎಂದು ಜವನೆರ್ ಬೆದ್ರ ಸಂಘಟನೆಯ ರೂವಾರಿ ಅಮರ್ ಕೋಟೆ ಅಭಿಪ್ರಾಯಿಸಿದರು.
ಆಳ್ವಾಸ್ ಪದವಿ ಕಾಲೇಜಿನ ಎಸ್.ಸಿ.ಸಿ. ಅಧಿಕಾರಿ ರಾಜೇಶ್ ಶುಭ ಹಾರೈಸಿದರು. ಪುತ್ತಿಗೆ ಪಂಚಾಯತ್ನ ನಾಗವರ್ಮ ಜೈನ್, ಚಂದ್ರಹಾಸ್ ನಾಯಕ್, ರಾಜೇಂದ್ರ ಜಿ, ಸುನಿಲ್ ಪಣಪಿಲ, ರಾಜೇಶ್ ಪೂಜಾರಿ, ಸಂಪತ್ ಪೂಜಾರಿ, ನಾರಾಯಣ ಪದುಮಲೆ, ರಾಜೇಶ್ ದೇವಾಡಿಗ,ನಿತ್ಯಾನಂದ ಶೆಟ್ಟಿ ಮೊದಲಾದವರಿದ್ದರು.

ಪ್ರೇರಣೆ: ಜವನೆರ್ ಬೆದ್ರ ಸಂಘಟನೆಯ ಸ್ವಚ್ಛತಾ ಅಭಿಯಾನ ಮೂಡಬಿದಿರೆಯ ಹಲವು ಸಂಘಟನೆಗಳಿಗೆ ಪ್ರೇರಣೆಯಾಗಿವೆ. ಇಂದು ಮೂಡಬಿದಿರೆಯ ಹಲವು ರಾಜಕೀಯ ಪಕ್ಷಗಳೂ ಸೇರಿದಂತೆ ಹಲವಾರು ಮಂದಿ ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತಿದ್ದು ಇದು ಹೀಗೆ ಮುಂದುವರಿಯಲಿ ಎಂಬ ಆಶಯ ನಮ್ಮದಾಗಿದೆ.