Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

28ನೇ ವಾರದ ಸ್ವಚ್ಛತಾ ಅಭಿಯಾನ

#javaner#bedra#moodbidri#cleanup2

ಠೀಕಾಕಾರರಿಗೆ ನೇರ ಉತ್ತರ ನೀಡಿದ ಅಮರ್ ಕೋಟೆ
ಮೂಡಬಿದಿರೆ: ಜವನೆರ್ ಬೆದ್ರ ಸಂಘಟನೆಯ ಆಶ್ರಯದಲ್ಲಿ ಕ್ಲೀನ್ ಅಪ್ ಮೂಡಬಿದಿರೆ ಅಭಿಯಾನದಂಗವಾಗಿ 28ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ಅಶ್ವತ್ಥಪುರ ಪರಿಸರದಲ್ಲಿ ನಡೆಯಿತು. ತೆಂಕಮಿಜಾರು ಗ್ರಾಮ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಸಾಂಸ್ಕೃತಿಕ ಕಲಾವೇದಿಕೆ ಸಂತೆಕಟ್ಟೆ ಅಶ್ವತ್ಥಪುರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಶ್ವತ್ಥಪುರ ಸಂಘಟನೆಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದವು.

#javaner#bedra#moodbidri

ಕಳೆದ 27ವಾರಗಳಿಂದ ಮೂಡಬಿದಿರೆ ಪರಿಸರದಲ್ಲಿ ಅತ್ಯದ್ಭುತವಾಗಿ ಸ್ವಚ್ಛತಾ ಅಭಿಯಾನ ಜವನೆರ್ ಬೆದ್ರ ಸಂಘಟನೆಯಿಂದ ನಡೆಯುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಬೆಂಬಲ ದೊರೆಯುತ್ತಿದೆ. ಜವನೆರ್ ಬೆದ್ರ ಸಂಘಟನೆಯ ರೂವಾರಿ ಅಮರ್ ಕೋಟೆ, ತೆಂಕಮಿಜಾರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ,ಶಾಂತಾರಾಮ್ ಶೆಟ್ಟಿ, ರಾಜೇಂದ್ರ ಜಿ, ಕಿರಣ್ ಕೋಟ್ಯಾನ್,ಹರಿಪ್ರಸಾದ್,ರಂಜಿತ್ ಶೆಟ್ಟಿ, ಸಂಪತ್ ಪೂಜಾರಿ, ಶುಭಕರ್, ಅನಿಲ್ ಆಚಾರ್ಯ, ನಿತ್ಯಾನಂದ, ನಾರಾಯಣ ಪೊದುವಾಳ್ ಮೊದಲಾದವರಿದ್ದರು.

#javaner#bedra#moodbidri#cleanup

ನಮ್ಮ ಶಕ್ತಿ ಹೆಚ್ಚಿದೆ-ಅಮರ್: ಜವನೆರ್ ಬೆದ್ರ ಸಂಘಟನೆಯ ಸ್ವಚ್ಛತಾ ಅಭಿಯಾನಕ್ಕೆ ಠೀಕಿಸುವ ಮಂದಿಯಿಂದಾಗಿ ನಮ್ಮ ಶಕ್ತಿ ಇನ್ನಷ್ಟು ಹೆಚ್ಚಿದೆ. ಯಾವುದೇ ಅಪಹಾಸ್ಯಗಳಿಗೆ ನಾವು ಬೆಲೆ ನೀಡುವುದಿಲ್ಲ. ಪ್ರಾಮಾಣಿಕವಾಗಿ ಸ್ವಚ್ಛತೆಯ ಕಾರ್ಯಮಾಡುವುದು ನಮ್ಮ ಗುರಿ ಎಂದು ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ ಹೇಳಿದರು. ಯಾವ ಪ್ರಚಾರಕ್ಕೋ, ಆಮಿಷಕ್ಕೋ ಇದನ್ನು ಮಾಡುತ್ತಿಲ್ಲ. ಸಮಾಜದ ಕೆಲಸ ಎಂಬ ಹಿನ್ನಲೆಯಲ್ಲಿ ಮಾಡಲಾಗುತ್ತಿದೆ ಎಂದವರು ಹೇಳಿದರು.