Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ

2javaner bedrad

ನಮ್ಮ ಪ್ರತಿನಿಧಿ ವರದಿ

ಮೂಡಬಿದಿರೆ: ಯಾವ ರಾಜಕೀಯ ಒತ್ತಡವೂ ಇಲ್ಲದೆ, ಸ್ವಚ್ಛತೆಯ ದೃಷ್ಠಿಕೋನವೊಂದನ್ನೇ ಇರಿಸಿಕೊಂಡು ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಸತತವಾಗಿ ನಡೆಸಿಕೊಂಡು ಬರುತ್ತಿರುವ `ಕ್ಲೀನ್ ಅಪ್ ಮೂಡಬಿದಿರೆ’ ಕಾರ್ಯಕ್ರಮ ಭಾನುವಾರ ಗಾಂಧೀನಗರ ಪರಿಸರದಲ್ಲಿ ನಡೆಯಿತು.
27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಕಾರ್ಯಕ್ರಮಕ್ಕೆ ಸ್ಥಳೀಯ ಸತ್ಯನಾರಾಯಣ ಸೇವಾಸಮಿತಿಯ ಕಾರ್ಯಕರ್ತರು ಸಾಥ್ ನೀಡಿದರು.

ಗಾಂಧೀನಗರ ಪರಿಸರದುದ್ದಕ್ಕೂ ಅವ್ಯವಸ್ಥಿತವಾಗಿದ್ದ ರಸ್ತೆ,ಚರಂಡಿಗಳನ್ನು ಸ್ವಚ್ಛಗೊಳಿಸಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತೆ ನಡೆಸಲಾಯಿತು. ಭಾರತೀಯ ಸೇನೆಯ ಮಾಜಿ ಯೋಧ ರಾಜೇಂದ್ರ ಜಿ ಉಪಸ್ಥಿತರಿದ್ದು ಜವನೆರ್ ಬೆದ್ರ ಸಂಘಟನೆಯ ಈ ನಿರಂತರ ಕಾರ್ಯ ಶ್ಲಾಘನಾರ್ಹವಾದುದು. ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿವಹಿಸುವುದು ಅತೀ ಅಗತ್ಯ ಎಂದರು.ಸತ್ಯನಾರಾಯಣ ಸೇವಾ ಸಮಿತಿಯ ಪ್ರಮುಖರಾದ ವಿಶ್ವನಾಥ್ ದೇವಾಡಿಗ,ಹರೀಶ್ ದೇವಾಡಿಗ,ಹರೀಶ್ ಎಂ ಕೆ., ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಪ್ರಮುಖರಾದ ಶ್ಯಾಮ್ ಪ್ರಸಾದ್ ಪರಾಡ್ಕರ್, ಕಿರಣ್ ಕೋಟ್ಯಾನ್,ದಯಾನಂದ ಕುಲಾಲ್, ಅಜಿತ್ ಪ್ರಸಾದ್ ಎಂ.ಸಿ., ರಂಜಿತ್ ಶೆಟ್ಟಿ, ಅನಿಲ್ ಆಚಾರ್ಯ,ಶಿವಪ್ರಸಾದ್, ನಾರಾಯಣ ಪಡುಮಲೆ,ಶುಭಕರ್ ಪೂಜಾರಿ,ರಾಜೇಶ್ ದೇವಾಡಿಗ ಮೊದಲಾದವರಿದ್ದರು.ಸುಮಾರು 50ಕ್ಕೂ ಅಧಿಕ ಕಾರ್ಯಕರ್ತರು ಸ್ವಚ್ಛತೆಯ ಕಾರ್ಯ ನೆರವೇರಿಸಿದರು.
ಒಗ್ಗೂಡಿ ಕಾರ್ಯನಿರ್ವಹಿಸೋಣ: ಸೋಶಿಯಲ್ ಮೀಡಿಯಾ ಮೂಲಕ ಜವನೆರ್ ಬೆದ್ರ ಸಂಘಟನೆಯ ಸ್ವಚ್ಛತಾ ಕಾರ್ಯವನ್ನು ಟೀಕಿಸುತ್ತಾ ಬಂದವರಿಗೆ ಬಹಿರಂಗವಾಗಿ ಈ ಉತ್ತಮ ಕಾರ್ಯಕ್ಕೆ ವಾರದಲ್ಲಿ ಒಂದು ಗಂಟೆ ಮೀಸಲಿಡೋಣ;ನೀವೂ ನಮ್ಮೊಂದಿಗೆ ಕೈಜೋಡಿಸಿ ಎಂದು ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ ಆಹ್ವಾನನೀಡಿದರು.
ಸರ್ವಜನರ ಶ್ಲಾಘನೆ: ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆಯ ಸ್ವಚ್ಛತಾ ಕಾರ್ಯಕ್ಕೆ ಸರ್ವ ಜನರ ಶ್ಲಾಘನೆ ವ್ಯಕ್ತವಾಗುತ್ತಿದೆ. ನಿರಂತರ 27ವಾರಗಳಿಂದ ಮೂಡಬಿದಿರೆಯ ಗಲ್ಲಿ ಗಲ್ಲಿಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಸಂಘಟನೆ ನಡೆಸುತ್ತಿರುವುದಕ್ಕೆ ಸವತ್ರ ಶ್ಲಾಘನೆ ವ್ಯಕ್ತವಾಗುತ್ತಿದೆ. ಕೇವಲ ಪ್ರಚಾರ, ಫೋಟೋಗಾಗಿ ಈ ಕಾರ್ಯಮಾಡದೆ ಚರಂಡಿ,ಗಬ್ಬುನಾರುವ ಪ್ರದೇಶಗಳನ್ನೂ ಲೆಕ್ಕಿಸದೆ ಸ್ವಚ್ಛತೆಯಲ್ಲಿ ಪ್ರಾಮಾಣಿಕವಾಗಿ ತೊಡಗಿರುವ ಈ ಸಂಘಟನೆಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.