Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

2017ರ 5ನೇ ತಿಂಗಳು ಮೇ ಭವಿಷ್ಯ ತಿಳಿಯಿರಿ…

astrology vaarte

ಮೇಷ
ಈ ಮಾಸ ಕೆಲಸಕಾರ್ಯಗಳು ಉತ್ತಮವಾಗಿರುತ್ತದೆ. ಖರ್ಚಿನಲ್ಲಿ ಹಿಡಿತವಿರಲಿ. ಇತರರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ನಿಮಗೆ ಒಳ್ಳೆಯದಲ್ಲ. ಆರೋಗ್ಯದಲ್ಲಿ ತೊಂದರೆ ಇರುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುತ್ತಾರೆ. ಜವಾಬ್ದಾರಿ ನಿಭಾಯಿಸುವ ಭರದಲ್ಲಿ ಸಾಮಾಜಿಕ ಜೀವನ, ಬಂಧುಗಳನ್ನು ಮರೆಯಬೇಡಿ. ವೃತ್ತಿಯಲ್ಲಿ ಜಯಕಾಣುವಿರಿ. ಪ್ರೇಮಪ್ರಕರಣದಲ್ಲಿ ಜಯ.

 
ವೃಷಭ
ಈ ಮಾನ ಸಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಶೀಘ್ರ ನಿಮಗೆ ಲಾಭ ಉಂಟಾಗುತ್ತದೆ. ನಿಮ್ಮ ಜೀವನಶೈಲಿಯ ಸುಧಾರಣೆಗೆ ನೀವು ಪ್ರಯತ್ನಿಸಬೇಕಿದೆ. ನ್ಯಾಯಾಲಯದಲ್ಲಿ ಜಯ ಲಭಿಸುತ್ತದೆ. ಸಂಬಂಧಿಕರಿಂದ ಸಹಾಯ ಪಡೆಯುವಿರಿ. ಪ್ರೇಮಿಗಳಿಗೆ ಉತ್ತಮ ಮಾಸ. ಸ್ರ್ತೀಯರಿಂದ ಸಹಾಯ ದೊರಕುತ್ತದೆ. ಉದ್ಯೋಗದಿಂದ ಬಡ್ತಿ ದೊರೆಯುತ್ತದೆ. ತಂದೆಯ ಆರೋಗ್ಯ ಬಗ್ಗೆ ಗಮನ ಹರಿಸಿರಿ.

 

 
ಮಿಥುನ
ಮಹತ್ವದ ಕೆಲಸವೊಂದು ಕೂಡ ಪೂರ್ಣಗೊಳ್ಳಲಿದೆ. ಸ್ತ್ರೀ ವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಹಿರಿಯರ ಸಲಹೆ ಪಡೆಯಿರಿ. ವಾಗ್ವಾದಗಳಿಂದ ದೂರವಾಗಿ.

 

 

ಕರ್ಕಾಟಕ
ಸ್ವತ್ತು ವಿವಾದಗಳು ಬಗೆಹರಿಯುವುದರಿಂದ ಮನೋಲ್ಲಾಸ. ದೇವರ ದರ್ಶನದಿಂದ ಮನಶ್ಶಾಂತಿ ಹೊಸ ಐಡಿಯಾಗಳು ದೊರೆಯುತ್ತವೆ. ಧನ ಲಾಭ ಹೊಸ ಹೊಸ ಐಡಿಯಾಗಳು ದೊರೆಯುತ್ತವೆ.ಸಹಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಉತ್ತಮ ಧನಲಾಭವಾಗಲಿದೆ.

 

 

ಸಿಂಹ
ಈ ತಿಂಗಳು ಬಂಧುಗಳ ಸಹಾಯದಿಂದ ಕೆಲಸಕಾರ್ಯಗಳು ನೆರವೇರುತ್ತದೆ. ವಾಹನ ಖರೀದಿ ಯೋಗವಿದೆ. ಪಿತ್ರಾಜಿತ ಆಸ್ತಿಗಾಗಿ ಕಲಹ, ವಿದೇಶ ಪ್ರಯಾಣ ಯೋಗವಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರೀಕ್ಷಿಸಲಾಗಿದೆ. ಹೀಗಾಗಿ, ನಿಮ್ಮ ಆಹಾರದ ಬಗ್ಗೆ ಕಾಳಜಿ ಇರಲಿ. ಆಕಸ್ಮಿಕ ಧನಪ್ರಾಪ್ತಿ. ಶತ್ರುಗಳನ್ನು ಜಯಿಸುವಿರಿ. ಉತ್ತಮ ವಸ್ತ್ರ ಖರೀದಿಸುವಿರಿ. ಅಗಾಗ್ಗೆ ಮಾನಸಿಕ ಶಾಂತಿ ಕಳೆದುಕೊಳ್ಳುವಿರಿ. ಕೆಲವರಿಗೆ ಸಂತಾನಭಾಗ್ಯವೂ ಇದೆ.

 
ಕನ್ಯಾ
ವ್ಯಾಪಾರ ವಹಿವಾಟುಗಳಲ್ಲಿ ಉನ್ನತಿ. ದಿಢೀರ್ ಪ್ರಯಾಣ ಅನುಕೂಲಕರ. ಬುದ್ದಿಜೀವಿಗಳ ಸಮಾಗಮಕ್ಕೆ ಕಾತುರ. ಹಳೆಯ ಮಿತ್ರನ ಭೇಟಿ. ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ. ಸರಕು ಸಾಗಾಣಿಕೆದಾರರಿಗೆ, ಟ್ರಾವೇಲ್ಸ್ ಮಾಲೀಕರಿಗೆ ಉತ್ತಮ ಲಾಭವಾಗಲಿದೆ.

 

 
ತುಲಾ
ನೀವು ಏನು ಮಾಡಬೇಕೆಂದಿರುವಿರೋ ಅದನ್ನು ನೀವು ನೆರವೇರಿಸುವಿರಿ, ಹೆಚ್ಚು ಕೆಲಸವಿಲ್ಲದಿರುವುದರಿಂದ ನೀವು ನೀವಾಗಿಯೇ ಹೆಜ್ಜೆ ಇರಿಸುತ್ತೀರಿ.ಮಕ್ಕಳ ಚಟುವಟಿಕೆಗಳಿಂದ ಮನೆಯಲ್ಲಿ ನೆಮ್ಮದಿ. ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಖರೀದಿ ಸಂತಸದಾಯಕವಾಗಿರುತ್ತದೆ.

 

 
ವೃಶ್ಚಿಕ
ಶಾಸ್ತ್ರ, ಸಂಗೀತ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.ವಿವಾದಗಳಿಂದ ದೂರವಿರಲು ಪ್ರಯತ್ನಿಸಿ.

 

 
ಧನು
ಬಂಧುಗಳ ಮಧ್ಯೆ ವಿರಸ ಹೆಚ್ಚಾಗುತ್ತದೆ. ರಾಜಕೀಯ ರಂಗದವರಿಗೆ ಅವಕಾಶಗಳು ಹೆಚ್ಚಾಗುತ್ತವೆ.ಅನಗತ್ಯ ವೆಚ್ಚ ಮಾಡುವುದನ್ನು ನಿಲ್ಲಿಸಿ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆ ಉದ್ಯೋಗಿಗಳಿಗೆ ತಮ್ಮ ಅಭಿಲಾಷೆ ಈಡೇರುವುದಿಲ್ಲ.

 

 

ಮಕರ
ನಿಮ್ಮ ಕೆಲಸಗಳು ನಿಧಾನವಾಗಿ ಸಾಗಿದರೂ ಸಫಲವಾಗಲಿವೆ. ವಿದೇಶಿ ಪ್ರವಾಸ ಯೋಗವಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಆತ್ಮವಿಶ್ವಾಸದೊಂದಿಗೆ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ಮನೆಯಲ್ಲಿ ಸಂತಸದ ವಾತಾವರಣ.

 

 

ಕುಂಭ
ಈ ತಿಂಗಳು ನೀವು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು. ವ್ಯವಹಾರ ಪಾಲುದಾರಿಕೆಯಲ್ಲಿ ಒಳಗೊಳ್ಳುವ ಮೊದಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸಬಹುದು. ಸಂತಾನ ಲಾಭವಿದೆ. ವಿವಾಹ ಯೋಗವಿದೆ. ಅನಿರೀಕ್ಷಿತ ಧನ ಲಾಭವಿದೆ. ಸಾಲದ ವ್ಯವಹಾರ ಮಾಡದಿರಿ. ಈ ತಿಂಗಳು ನಿಮಗೆ ನರದೌರ್ಬಲ್ಯ ಕಾಡಬಹುದು.

 
ಮೀನ
ಕಾನೂನು ವಿಷಯಗಳು ಮತ್ತು ವಿದೇಶಿ ನೆಲಕ್ಕೆ ಸಂಬಂಧಿಸಿದ ವಿಷಯಗಳು ಆಗ ಪರಿಹಾರಗೊಳ್ಳಲಿವೆ. ನಿಮ್ಮ ಬಾಕಿ ಸಂದಾಯವನ್ನೂ ಮರಳಿ ಪಡೆದುಕೊಳ್ಳುವ ನಿರೀಕ್ಷೆಯಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ.ವಿದೇಶಿ ಜನರೊಂದಿಗೆ ಸಂಪರ್ಕವಿರುತ್ತದೆ. ಕಾಲೆಳೆಯುವ ಜನರಿಂದ ದೂರವಿರಿ. ಸರ್ಕಾರದಿಂದ ಸಹಾಯ ದೊರಕುತ್ತದೆ. ಆಸ್ತಿಗೆ ಹಕ್ಕುದಾರರು ತಕರಾರು ಮಾಡಬಹುದು.