Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

2017ರ 2ನೇ ತಿಂಗಳು ಫೆಬ್ರವರಿ ಭವಿಷ್ಯ ತಿಳಿಯಿರಿ…

astrology vaarte

ಮೇಷ
ಈ ಮಾಸ ಕೆಲಸಕಾರ್ಯಗಳು ಉತ್ತಮವಾಗಿರುತ್ತದೆ. ಖರ್ಚಿನಲ್ಲಿ ಹಿಡಿತವಿರಲಿ. ಇತರರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ನಿಮಗೆ ಒಳ್ಳೆಯದಲ್ಲ. ಆರೋಗ್ಯದಲ್ಲಿ ತೊಂದರೆ ಇರುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುತ್ತಾರೆ. ಜವಾಬ್ದಾರಿ ನಿಭಾಯಿಸುವ ಭರದಲ್ಲಿ ಸಾಮಾಜಿಕ ಜೀವನ, ಬಂಧುಗಳನ್ನು ಮರೆಯಬೇಡಿ. ವೃತ್ತಿಯಲ್ಲಿ ಜಯಕಾಣುವಿರಿ. ಪ್ರೇಮಪ್ರಕರಣದಲ್ಲಿ ಜಯ.

 

 

ವೃಷಭ
ಈ ಮಾಸ ನಿಮಗೆ ಬಾಳಸಂಗಾತಿಯೊಂದಿಗೆ ಮನಸ್ತಾಪವಾಗುತ್ತದೆ. ಶಿಸ್ತನ್ನು ರೂಢಿಸಿಕೊಳ್ಳಿ, ಯೋಜನೆ ರೂಪಿಸಿಕೊಳ್ಳಿ, ಅಂದುಕೊಂಡಂತೆ ಎಲ್ಲ ಕೆಲಸಗಳನ್ನು ನಿಭಾಯಿಸಿ. ಬರಹಗಾರರು, ಪ್ರಕಾಶಕರಿಗೆ ಉತ್ತಮ ಲಾಭವಿದೆ. ಸಮಾಜದಲ್ಲಿ ಕೀರ್ತಿ ಗೌರವ ಲಭ್ಯವಾಗುತ್ತದೆ. ಉದ್ಯೋಗಸ್ಥರಿಗೆ ವ್ಯಾಪಾರದಲ್ಲಿ ಲಾಭವಿದೆ. ಹತ್ತಿರರದ ಸ್ಥಳಗಳಿಗೆ ಪ್ರವಾಸ ಮಾಡುವಿರಿ. ಅಪರಿಚಿತರನ್ನು ನಂಬಬೇಡಿ.

 

 

ಮಿಥುನ
ಈ ತಿಂಗಳ ಎಲ್ಲಾ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿದೆ. ಸದ್ಯಕ್ಕೆ ಹೋಸ ಯೋಜನೆಗಳು ಬೇಡ. ಸಂಗಾತಿಯ ವಿಚಾರದಲ್ಲಿ ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ. ಕೆಲವೊಂದು ಗುಪ್ತ ಪ್ರಣಯಗಳಲ್ಲಿ ಸಿಲುಕುವಿರಿ. ಕೆಲವರಿಗೆ ಶುಭವಾರ್ತೆ ಕೇಳಿಬರುತ್ತದೆ. ಆಕಸ್ಮಿಕಧನ ಲಾಭವಿರುತ್ತದೆ. ಮದುವೆ ಸಮಾರಂಭಕ್ಕೆ ಓಡಾಟ.

 

 

ಕರ್ಕಾಟಕ
ಈ ತಿಂಗಳ ನಿಮಗೆ ಜೀವನ ವೃತ್ತಿಯಲ್ಲಿ ಯಶಸ್ಸು. ಯಾರಿಂದಲೂ ಏನೂ ನಿರೀಕ್ಷಿಸಬೇಡಿ. ಮಾಡುತ್ತಿರುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ. ಬಂಧು-ಮಿತ್ರರೊಂದಿಗೆ ಉತ್ತಮ ಬಾಂಧವ್ಯ. ಸಂಗಾತಿ-ಮಕ್ಕಳೊಂದಿಗೆ ಉತ್ತಮ ಬಾಂಧವ್ಯ. ಮನೆಯಲ್ಲಿ ಮಂಗಲ ಕಾರ್ಯಗಳು ನಡೆಯುತ್ತದೆ. ತಂದೆ-ತಾಯಿಯ ಮಾತನ್ನ ಗೌರವಿಸಿ. ಪ್ರೇಮಿಗಳಿಗೆ ಉತ್ತಮ ಮಾನ. ವಿದೇಶ ಪ್ರಯಾಣದಿಂದ ಶುಭವಾಗಲಿದೆ.

 
ಸಿಂಹ
ನಿಮ್ಮ ಎಲ್ಲ ಪೂರ್ಣಗೊಂಡಿರದ ಕೆಲಸಗಳನ್ನು ಸ್ನೇಹಿತನ ಸಹಾಯದಿಂದ ಮರುಸ್ಥಾಪಿಸಲ್ಪಡುತ್ತದೆ ಮತ್ತು ಪೂರ್ಣಗೊಳ್ಳುತ್ತದೆ. ಈ ಹಿಂದೆ ನೀವು ಮಾಡಿರುವ ಕಠಿಣ ಪರಿಶ್ರಮವು ಈಗ ಫಲ ನೀಡುತ್ತದೆ; ಜೂನ್‌ನಂತರ ನಿಮ್ಮ ಯಶಸ್ಸಿನ ದರ ಹೆಚ್ಚುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾಸವಾಗಿರುತ್ತದೆ. ಚಿನ್ನಾಭರಣ, ಭೂಮಿ, ಮನೆ ಖರೀದಿ.

 

 

ಕನ್ಯಾ
ಈ ತಿಂಗಳ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಶಕ್ತಿ ಮತ್ತು ಉತ್ಸಾಹವಾಗಿರಲಿದೆ. ಆಶ್ಚರ್ಯಕರವೆಂದರೆ, ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಕೆಲವರಿಗೆ ಸ್ತ್ರೀಯರಿಂದ ತೊಂದರೆಯುಂಟಾಗುತ್ತದೆ. ಶುಭಕಾರ್ಯ ಮಾಡಲು ಮನಸ್ಸು ಬರುತ್ತದೆ. ಪ್ರತಿಸ್ಪರ್ಧಿಗಳಿಂದ ಅಡೆತಡೆ. ವಿದೇಶ ಪ್ರಯಾಣಕ್ಕೆ ಯತ್ನ. ಕೆಲವರ ವಿರೋಧದಿಂದ ಮಾನಸಿಕ ಅಶಾಂತಿ.

 

 
ತುಲಾ
ಕಠಿಣ ಪರಿಶ್ರಮದಿಂದ ನೀವು ಹಣ ಮಾಡುತ್ತೀರಿ. ಹಲವು ಅಂಶಗಳನ್ನು ಉತ್ತಮಗೊಳಿಸಲು ಪಾಲಕರೂ ನಿಮಗೆ ಸಹಾಯ ಮಾಡುತ್ತಾರೆ. ಹೊಸ ಕೆಲಸದ ಯೋಜನೆಗಳನ್ನು ಮಾಡಲಾಗುತ್ತದೆ, ಇದು ನಿಮಗೆ ಯಶಸ್ಸು ನೀಡುತ್ತದೆ. ಹಾಗೆಯೇ, ನೀವು ತೀರ್ಥಯಾತ್ರೆಗೆ ತೆರಳುವ ಅವಕಾಶವೂ ಇದೆ. ನಿಮ್ಮೊಳಗಿರುವ ಶೌರ್ಯದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

 

 

ವೃಶ್ಚಿಕ
ನಿಮ್ಮ ಅದೃಷ್ಟವನ್ನು ಸುಧಾರಿಸಿಕೊಳ್ಳಲು ಹಲವು ಅವಕಾಶಗಳನ್ನು ನೀವು ಪಡೆಯುತ್ತೀರಿ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಸಮತೋಲನವನ್ನು ನಿರ್ವಹಿಸುವುದು ಉತ್ತಮ. ನಿಮ್ಮ ಪ್ರೇಮಿಗೆ ಸ್ವಲ್ಪ ಸಮಯ ಮೀಸಲಿಡಿ ಮತ್ತು ಹೊರಗೆ ಸುತ್ತಾಡಿ. ಆರೋಗ್ಯ ವಿಚಾರದಲ್ಲಿ, ನೀವು ನಿಜವಾಗಿಯೂ ಎಚ್ಚರ ವಹಿಸಬೇಕು. ನ್ಯಾಯಲಯದಲ್ಲಿ ಜಯ ಸಿಗುತ್ತದೆ. ಕೆಲವರಿಗೆ ಪ್ರೇಮವಿವಾಹವಾಗಲಿದೆ.

 

 

ಧನು
ನೀವು ಆದಾಯದ ಹೊಸ ಮೂಲಗಳನ್ನು ಪಡೆಯುತ್ತೀರಿ. ಹೂಡಿದ ಹಣವು ಉತ್ತಮ ಲಾಭಗಳನ್ನೂ ನೀಡುತ್ತದೆ. ಷೇರು ಮಾರುಕಟ್ಟೆ ಅಥವಾ ಆಸ್ತಿಯಲ್ಲಿ ಹೂಡಿಕೆಯೂ ನಿಮಗೆ ಲಾಭ ನೀಡಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಶ್ರಮಕ್ಕೆ ತಕ್ಕ ಫಲ ದೊರಕುತ್ತದೆ. ತಂದೆ ಹಾಗೂ ಸಹಾಯಕರಿಂದ ನೀವು ಗೌರವ ಹಾಗೂ ಬೆಂಬಲ ಪಡೆಯುತ್ತೀರಿ. ಬಂಧುಗಳಿಗೆ ನೆರವಾಗುವಿರಿ. ಮನೆಯಲ್ಲಿ ಸಂತಸದ ವಾತಾವರಣವಿದೆ.

 

 

ಮಕರ
ದೂರದೇಶದಿಂದ ಶುಭಸಮಾಚಾರ ಬರುತ್ತದೆ. ನಿಮ್ಮೊಳಗಿರುವ ಶೌರ್ಯದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಶುಭಕಾರ್ಯಗಳಿಗೆ ಹಣಖರ್ಚು ಮಾಡುವಿರಿ.ಸಿನಿಮಾ ನಟ-ನಟಿಯರಿಗೆ ಇದು ಉತ್ತಮ ಮಾಸವಾಗಿದೆ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಸಮತೋಲನವನ್ನು ನಿರ್ವಹಿಸುವುದು ಉತ್ತಮ. ನಿಮ್ಮ ಪ್ರೇಮಿಗೆ ಸ್ವಲ್ಪ ಸಮಯ ಮೀಸಲಿಡಿ ಮತ್ತು ಹೊರಗೆ ಸುತ್ತಾಡಿ. ಆರೋಗ್ಯ ವಿಚಾರದಲ್ಲಿ ಎಚ್ಚರ ವಹಿಸಬೇಕು.

 

 

ಕುಂಭ
ಈ ತಿಂಗಳು ಗೃಹದಲ್ಲಿ ಮಂಗಳ ಕಾರ್ಯ ನಡೆಯುತ್ತದೆ. ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ನಿಮ್ಮ ಯಶಸ್ಸಿನ ದರ ಹೆಚ್ಚುತ್ತದೆ. ನಿಮ್ಮ ವ್ಯಾಪಾರವನ್ನು ವೃದ್ಧಿಸುವ ಅವಕಾಶವನ್ನು ಪಡೆಯುತ್ತೀರಿ. ನೀವು ನಿಮ್ಮ ಐಷಾರಾಮಿ ಚಟುವಟಿಕೆಗಳಿಗೆ ನೀವು ವೆಚ್ಚ ಮಾಡಬೇಕಾದೀತು. ಕೆಲವರಿಗೆ ಸಂತಾನ ಭಾಗ್ಯವೂ ಇದೆ. ಸ್ನೇಹಿತರಿಂದ ಲಾಭವಿದೆ. ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ ಚರ್ಚಿಸಿ.

 

 

ಮೀನ
ಕಾನೂನು ವಿಷಯಗಳು ಮತ್ತು ವಿದೇಶಿ ನೆಲಕ್ಕೆ ಸಂಬಂಧಿಸಿದ ವಿಷಯಗಳು ಆಗ ಪರಿಹಾರಗೊಳ್ಳಲಿವೆ. ನಿಮ್ಮ ಬಾಕಿ ಸಂದಾಯವನ್ನೂ ಮರಳಿ ಪಡೆದುಕೊಳ್ಳುವ ನಿರೀಕ್ಷೆಯಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ.ವಿದೇಶಿ ಜನರೊಂದಿಗೆ ಸಂಪರ್ಕವಿರುತ್ತದೆ. ಕಾಲೆಳೆಯುವ ಜನರಿಂದ ದೂರವಿರಿ. ಸರ್ಕಾರದಿಂದ ಸಹಾಯ ದೊರಕುತ್ತದೆ. ಆಸ್ತಿಗೆ ಹಕ್ಕುದಾರರು ತಕರಾರು ಮಾಡಬಹುದು.