Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

2017ರ ಮೊದಲ ತಿಂಗಳು ಜನವರಿ ಭವಿಷ್ಯ ತಿಳಿಯಿರಿ…

astrology vaarte

ಮೇಷ
ಈ ಮಾಸದ ಕೆಲಸಗಳಲ್ಲೂ ಮಿಶ್ರಫಲವಿದೆ. ಉದ್ಯಮಿಗಳು ಆದಾಯದ ಕೆಲವು ಹೊಸ ಮೂಲಗಳನ್ನು ಹೊಂದಿದ್ದಾರೆ. ಕೆಲಸಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಪ್ರವಾಸಗಳನ್ನು ನೀವು ಮಾಡುತ್ತೀರಿ. ವರ್ಷದ ಆರಂಭದಲ್ಲಿ ಪ್ರೇಮ ವಿಚಾರದಲ್ಲಿ ಸಮಸ್ಯೆ ಎದುರಿಸಿದರೆ, ಚಿಂತಿಸಬೇಡಿ. ನೀವೆಣಿಸಿದಂತೆಯೇ ಎಲ್ಲವೂ ನಡೆಯುತ್ತದೆ. ಆದರೆ ಸೋಮರಿತನದಿಂದ ದೂರವಿರಿ. ಆರೋಗ್ಯದ ಬಗ್ಗೆ ನಿಗಾ ಇರಲಿ. ದಾಂಪತ್ಯ ಜೀವನ ಸುಖವಾಗಿರುತ್ತದೆ.

 
ವೃಷಭ
ಈ ಮಾನ ಸಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಶೀಘ್ರ ನಿಮಗೆ ಲಾಭ ಉಂಟಾಗುತ್ತದೆ. ನಿಮ್ಮ ಜೀವನಶೈಲಿಯ ಸುಧಾರಣೆಗೆ ನೀವು ಪ್ರಯತ್ನಿಸಬೇಕಿದೆ. ನ್ಯಾಯಾಲಯದಲ್ಲಿ ಜಯ ಲಭಿಸುತ್ತದೆ. ಸಂಬಂಧಿಕರಿಂದ ಸಹಾಯ ಪಡೆಯುವಿರಿ. ಪ್ರೇಮಿಗಳಿಗೆ ಉತ್ತಮ ಮಾಸ. ಸ್ರ್ತೀಯರಿಂದ ಸಹಾಯ ದೊರಕುತ್ತದೆ. ಉದ್ಯೋಗದಿಂದ ಬಡ್ತಿ ದೊರೆಯುತ್ತದೆ. ತಂದೆಯ ಆರೋಗ್ಯ ಬಗ್ಗೆ ಗಮನ ಹರಿಸಿರಿ.

 

 

ಮಿಥುನ
ಉತ್ತಮ ಸಾಧನೆಯ ಪರಿಣಾಮವು ನಿಮ್ಮ ವೃತ್ತಿ ಜೀವನದ ಮೇಲೆ ಕಾಣುತ್ತದೆ. ಪ್ರಯಾಣ ನಡೆಸಲು ಉದ್ದೇಶಿಸಿದ್ದರೆ ಈ ವರ್ಷ ಉತ್ತಮವಾಗಿರುತ್ತದೆ. ತೀರ್ಥಯಾತ್ರೆಗೆ ತೆರಳುವ ಸಾಧ್ಯತೆಯೂ ಇದೆ. ಪತಿ-ಪತ್ನಿಯರಲ್ಲಿ ಒಮ್ಮತವಿರುತ್ತದೆ. ವಾಹನ ಖರೀದಿ ಯೋಗವಿದೆ. ಆಕಸ್ಮಿಕ ಧನಪ್ರಾಪ್ತಿ. ಆಗಾಗ ಮನಶಾಂತಿ ಕಳೆದುಕೊಳ್ಳುವಿರಿ. ವ್ಯಾಪಾರಿಗಳು ಮೊಸ ಹೋಗುವ ಸಂಭವವಿದೆ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಇದೆ.

 

 

ಕರ್ಕಾಟಕ
ಈ ಮಾಸ ನಿಮಗೆ ಅತ್ಯುತ್ತಮವಾಗಿರುತ್ತದೆ. ಸರ್ಕಾರಿ ಇಲಾಖೆಗಳಿಂದ ಲಾಭ ನಿರೀಕ್ಷಿಸಲಾಗಿದ್ದು, ಇದರಿಂದ ನಿಮ್ಮ ಗೌರವ ಹೆಚ್ಚುತ್ತದೆ. ಪ್ರೇಮಿಗಳಿಗೆ ಈ ವರ್ಷ ಸಾಮಾನ್ಯವಾಗಿರಲಿದೆ. ಯಾವುದೇ ಕೆಲಸದಲ್ಲೂ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಸಿನಿಮಾ ನಟ-ನಟಿಯರಿಗೆ, ಬಟ್ಟೆ ವ್ಯಾಪಾರಿಗಳಿಗೆ, ಅಮದು-ರಫ್ತು ವ್ಯಾಪ್ಯಾರಸ್ಥರಿಗೆ ಈ ಮಾಸ ಲಾಭದಾಯಕ.

 

 
ಸಿಂಹ
ಈ ತಿಂಗಳು ಬಂಧುಗಳ ಸಹಾಯದಿಂದ ಕೆಲಸಕಾರ್ಯಗಳು ನೆರವೇರುತ್ತದೆ. ವಾಹನ ಖರೀದಿ ಯೋಗವಿದೆ. ಪಿತ್ರಾಜಿತ ಆಸ್ತಿಗಾಗಿ ಕಲಹ, ವಿದೇಶ ಪ್ರಯಾಣ ಯೋಗವಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರೀಕ್ಷಿಸಲಾಗಿದೆ. ಹೀಗಾಗಿ, ನಿಮ್ಮ ಆಹಾರದ ಬಗ್ಗೆ ಕಾಳಜಿ ಇರಲಿ. ಆಕಸ್ಮಿಕ ಧನಪ್ರಾಪ್ತಿ. ಶತ್ರುಗಳನ್ನು ಜಯಿಸುವಿರಿ. ಉತ್ತಮ ವಸ್ತ್ರ ಖರೀದಿಸುವಿರಿ. ಅಗಾಗ್ಗೆ ಮಾನಸಿಕ ಶಾಂತಿ ಕಳೆದುಕೊಳ್ಳುವಿರಿ. ಕೆಲವರಿಗೆ ಸಂತಾನಭಾಗ್ಯವೂ ಇದೆ.

 

 

ಕನ್ಯಾ
ಈ ತಿಂಗಳು ನಿಮ್ಮ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಈ ವರ್ಷ ಆರೋಗ್ಯ ಸ್ವಲ್ಪ ಏರುಪೇರಾಗಬಹುದು. ಮಾನಸಿಕ ಒತ್ತಡವನ್ನು ದೂರವಿಡಲು ನೀವು ಖುಷಿಯಾಗಿರಬೇಕು. ಕುಟುಂಬದಲ್ಲಿ ವ್ಯಥಾ ಕಲಹ ಉಂಟಾಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಯೋಚಿಸಿ. ಸಾರ್ವಜನಿಕ ವಲದಲ್ಲಿ ಅವಮಾನ, ನಿಂದನೆ ಸಾಧ್ಯತೆ. ಈ ತಿಂಗಳ ನೀವು ತಾಳ್ಮೆಯಿಂದ ವರ್ತಿಸಿದರೆ ಎಲ್ಲವೂ ಸುಗಮಬಾಗುತ್ತದೆ.

 

 
ತುಲಾ
ಈ ತಿಂಗಳು ನೀವು ವೈಯಕ್ತಿಕ ಸಂಬಂಧಗಳನ್ನು ಉತ್ತಮವಾಗಿಡಲು, ನೀವು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಈ ವರ್ಷದಲ್ಲಿ ತಾಯಿಯೊಂದಿಗಿನ ಸಂಬಂಧ ಉತ್ತಮವಾಗಿರಬೇಕು. ಸಂಗಾತಿಯನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಒಂದು ಪ್ರವಾಸವನ್ನು ಯೋಜಿಸಿ. ಎಲ್ಲಾ ಕೆಲಸ-ಕಾರ್ಯಗಳಲ್ಲಿ ಅಶಾಮತಿ, ತಿರುಗಾಟ ಮುಂತಾದ ಅಶುಭ ಫಲವಿರುತ್ತದೆ. ಅಜೀರ್ಣ ಬಾಧೆ ಕಾಡುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಯಶಸ್ಸು ಸಾಧಿಸುತ್ತಾರೆ. ಬರಹಗಾರರು, ಮುದ್ರಕರು, ಪ್ರಕಾಶಕರುಗಳಿಗೆ ಉತ್ತಮ ಮಾಸವಾಗಿರುತ್ತದೆ.

 

 
ವೃಶ್ಚಿಕ
ಈ ತಿಂಗಳ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಸಹೋದ್ಯೋಗಿಗಳ ಜತೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ನಿಮ್ಮ ಪತ್ನಿ ಅನಾರೋಗ್ಯಕ್ಕೆ ತುತ್ತಾಗಬಹುದು. ಆಫ್ತ ಸ್ನೇಹಿತರ ಮುಖಾಂತರ ನಿಮಗೆ ಸಹಾಯವಾಗಲಿದೆ. ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿ. ಹಲವಾರು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಅತ್ತೆ-ಮಾವ ನಿಮಗೆ ಸಹಾಯ ಮಾಡುತ್ತಾರೆ.

 

 
ಧನು
ಈ ತಿಂಗಳು ಅವಿವಾಹಿತರಿಗೆ ವಿವಾಹ ಯೋಗ ಬಂದರೂ ಅಡೆತಡೆ ಇರುತ್ತದೆ. ಪ್ರಯಾಣದಿಂದ ನಷ್ಟ. ಪ್ರೇಮ ಸಂಬಂಧದಲ್ಲಿ ತಪ್ಪು ತಿಳಿವಳಿಕೆಯನ್ನು ದೂರವಿಡಿ. ಇಲ್ಲವಾದರೆ ಸಮಸ್ಯೆ ಕಂಡುಬರುತ್ತದೆ. ಯಾರನ್ನಾದರೂ ತಕ್ಷಣಕ್ಕೆ ತೀರ್ಮಾನಿಸಬೇಡಿ. ಇದು ಇತರರ ಭಾವನೆಗಳ ಮೇಲೆ ಪ್ರಭಾವ ಬೀರಬಹುದು. ಆರೋಗ್ಯದ ಬಗ್ಗೆ ಗಮನ ವಹಿಸಿ. ಅಪಘಾತದ ಸೂಚನೆಗಳಿವೆ. ವರಮಾನಕ್ಕೆ ತಕ್ಕಂತೆ ಖರ್ಚು ಮಾಡಿ. ಸ್ವಂತಮನೆ ಮತ್ತು ವಾಹನ ಖರೀದಿ ಯೋಗವಿದೆ.

 

 

ಮಕರ
ಈ ತಿಂಗಳು ಕೆಲಸ-ಕಾರ್ಯಗಳು ನಿಮ್ಮ ನಿರೀಕ್ಷೆಯಂತೆ ಫಲ ಸಿಗಲಿದೆ. ನಾನಾ ಕಡೆಯಿಂದ ಧನ ಸಹಾಯ ಬರುತ್ತದೆ. ಶುಭ-ಕಾರ್ಯಗಳಿಗೆ ಹಣ ಖರ್ಚಾಗುತ್ತದೆ. ಸರ್ಕಾರದಿಂದ ಸಹಾಯ ದೊರಕುತ್ತದೆ. ದಾಂಪತ್ಯ ಜೀವನ ಸುಖವಾಗಿರುತ್ತದೆ. ದೈವಾನುಗ್ರಹವಿದೆ. ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಆದರೆ ನಿಮ್ಮ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರದಿಂದ ಇರಬೇಕು.

 

 
ಕುಂಭ
ಈ ತಿಂಗಳ ನೀವು ಶುಭ-ಅಶುಭ ಫಲಗಳನ್ನು ಪಡೆಯುವಿರಿ. ಅನುಪಯುಕ್ತ ವಾದಗಳಿಗೆ ಗಮನ ನೀಡಬೇಡಿ. ಷೇರು ಮಾರುಕಟ್ಟೆಯಿಂದ ದೂರವಿರಿ. ವಿದೇಶ ಪ್ರಯಾಣದಿಂ ಲಾಭವಿದೆ. ಯಾವಾಗಲೂ ಮನಸ್ಸು ಚಿಂತಿಯಿಂದಿರುತ್ತದೆ. ಇತರರಿಗೆ ಉಪಕಾರ ಮಾಡುತ್ತೀರಿ. ಮಿತ್ರರು ನಿಮ್ಮನ್ನು ವಂಚಿಸಬಹುದು. ಪ್ರಗತಿಗೆ ಅನೇಕ ಅವಕಾಶಗಳು ದೊರೆಯುತ್ತದೆ. ಪ್ರೇಮಿಗಳಿಗೆ ತೊಂದರೆ ಇರುತ್ತದೆ.

 

 
ಮೀನ
ಈ ತಿಂಗಳು ವಿದೇಶ ಪ್ರಯಾಣದಿಂದ ಅನುಕೂಲವಿದೆ. ಸಂಗಾತಿಯ ಅನಾರೋಗ್ಯದಿಂದ ಮಾನಸಿಕ ನೆಮ್ಮದಿ ಕೆಡುತ್ತದೆ. ಮಕ್ಕಳ ಸಾಧನೆಯಿಂದ ಸಂತಸ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶವಿದೆ. ಸಾಲಗಾರರಿಗೆ ಕಿರುಕುಳ, ಆರೋಗ್ಯ ಏರುಪೇರು ಉಂಟಾಗುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ. ಆದಾಯ ಚೆನ್ನಾಗಿದ್ದರೂ ಖರ್ಚು ಅಧಿಕವಾಗಿರುತ್ತದೆ. ಸಾಮಾಜಿಕ ಕಾರ್ಯದಲ್ಲಿ ಸಮಯ ಕಳೆವಿರಿ.