Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಮನೆಗೊಂದು ಮರವಿರಲಿ…

#vandemataram#bank#moodbidri#parisaradina

ನಮ್ಮ ಪ್ರತಿನಿಧಿ ವರದಿ
ಅರಣ್ಯನಾಶ ಮತ್ತು ಪರಿಸರ ಮಾಲಿನ್ಯಗಳಿಂದಾಗಿ ಶುದ್ಧ ನೀರು ಮತ್ತು ಗಾಳಿಯ ಕೊರತೆ ಉಂಟಾಗಿದೆ. ಭವಿಷ್ಯದ ಹಿತ ದೃಷ್ಠಿಯಿಂದ ಇಂದೇ ಪ್ರತೀ ಮನೆಗೊಂದು ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆಯಬೇಕಾಗಿದೆ ಎಂದು ವಂದೇಮಾತರಂ ಸಹಕಾರಿ ಬ್ಯಾಂಕ್ನ ನಿರ್ದೇಶಕ ಜಿ.ಕೆ.ಭಟ್ ಕರೆನೀಡಿದರು.
ಮೂಡಬಿದಿರೆ ಪ್ರಾಂತ್ಯದಲ್ಲಿ ಶ್ರೀನಿಧಿ ಸ್ವ ಸಹಾಯ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಜೀವನಜ್ಯೋತಿ ಸ್ವ ಸಹಾಯ ಸಂಘದ ಪ್ರಬಂಧಕ ಸುನಂದ ಸಮಾರಂಭ ಉದ್ಘಾಟಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರಿಯಾಂಕಳನ್ನು ಸನ್ಮಾನಿಸಲಾಯಿತು. ವಿಜಯ ಕಾರ್ಯಕ್ರಮ ನಿರ್ವಹಿಸಿದರು. ಸುಲೋಚನ ವರದಿ ವಾಚಿಸಿದರು. ಮೇಲ್ವಿಚಾರಕ ಅಶೋಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಲತಿ ಸ್ವಾಗತಿಸಿದರು.ಶಶಿಕಲಾ ವಂದಿಸಿದರು.