Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ!

#moodbidri #main ganesh

ನಮ್ಮ ಪ್ರತಿನಿಧಿ ವರದಿ 

ಮೂಡಬಿದಿರೆಯ ಪ್ರತಿಷ್ಠಿತ ಸಂಘಟನೆ ಜವನೆರ್ ಬೆದ್ರ ಭಾನುವಾರ ಮೂಡಬಿದಿರೆಯ ಪ್ರಮುಖ ಬೀದಿಗಳನ್ನು ಸ್ವಚ್ಛಪಡಿಸಿ ಕಸದ ಬುಟ್ಟಿಗಳನ್ನಿಟ್ಟು ಸ್ವಚ್ಛಹಾದಿಯಲ್ಲಿ ಗಣೇಶನ ವಿಗ್ರಹ ವಿಸರ್ಜನೆ ಮೆರವಣಿಗೆಗೆ ವ್ಯವಸ್ಥೆ ಕಲ್ಪಿಸಿತ್ತು. ದುರದೃಷ್ಠವಶಾತ್ `ಹುಲಿ’ಗಳ ಆರ್ಭಟದಿಂದಾಗಿ ರಸ್ತೆಯಲ್ಲಿ ಕಸದ ರಾಶಿ ಬಿದ್ದಿತ್ತು. ತಕ್ಷಣ ಜಾಗೃತವಾದ ಜವನೆರ್ ಬೆದ್ರ ಸಂಘಟನೆ ಸಂಬಂಧಪಟ್ಟವರಿಗೆ ಮನವಿ ಮಾಡಿತು. ಸ್ವಚ್ಚ‍ಮೂಡಬಿದಿರೆಯಲ್ಲಿ ಸ್ವಚ್ಛರಸ್ತೆಯಲ್ಲಿ `ಭಗವಂತ’ನ ಮೆರವಣಿಗೆಗೆ ಈ ರೀತಿಯ ತೊಂದರೆ ನೀಡುವುದು ಸರಿಯಲ್ಲ ಎಂಬ ವಿನಂತಿ ಮಾಡಿತ್ತು. ತಕ್ಷಣ ಎಚ್ಚೆತ್ತ ಮೂಡಬಿದಿರೆ ಪುರಸಭೆ ಆ ಭಾಗದಲ್ಲಿ ಹುಲಿ ಘರ್ಷನೆಗೆ ಸಿಡಿದ ಪಟಾಕಿಗಳನ್ನು ಸಂಗ್ರಹಿಸಿ ರಸ್ತೆ ಸ್ವಚ್ಛವಾಗಿಡುವ ಪ್ರಯತ್ನ ನಡೆಸಿತು. ಭಗವಂತನ ಆಟದೆದುರು ಯಾವುದೂ ಇಲ್ಲ ಅಲ್ವೇ…? ಭಗವಂತನಿಚ್ಛೆ ಬೇರೆಯೇ ಆಗಿತ್ತು. ವರುಣನ ಕೃಪೆಯಾಯಿತು. ರಸ್ತೆ ಮತ್ತಷ್ಟು ಸ್ವಚ್ಛವಾಯಿತು. ಭಗವಂತ ಸಾಗುವ ಹಾದಿ ನೀರಿನಿಂದ ಸ್ವಚ್ಛವಾಯಿತು. ಒಟ್ಟಿನಲ್ಲಿ ಜವನೆರ್ ಬೆದ್ರದ ಕಾಳಜಿಯನ್ನು ಭಗವಂತ ಸ್ವೀಕರಿಸಿದ್ದ  ಎಂಬುದು ಮತ್ತೊಮ್ಮೆ ಸಾಬೀತಾಯಿತು…!

ಅಲ್ಲಲ್ಲಿ ಕಸದ ಬುಟ್ಟಿ: ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಕ್ಲೀನ್ ಅಪ್ ಮೂಡಬಿದಿರೆ ಎಂಬ ಮಹತ್ಕಾರ್ಯದ ಮೂಲಕ ಜನಾನುರಾಗಿಯಾಗಿದ್ದಾರೆ. ಭಾನುವಾರ ಮೂಡಬಿದಿರೆಯ ಪ್ರಮುಖ ರಸ್ತೆಯನ್ನು ಸ್ವಚ್ಛ  ಪಡಿಸಿ ಗಣೇಶನ ವಿಗ್ರಹ ಮೆರವಣಿಗೆಯ ಸಂದರ್ಭ ಯಾವೊಂದು ಕಸ ತ್ಯಾಜ್ಯಗಳಿರಬಾರದೆಂಬ ಕಾಳಜಿ ವಹಿಸಿದ್ದಾರೆ. ಮೂಡಬಿದಿರೆಯ ಬೀದಿಯಲ್ಲಿ ಅಲ್ಲಲ್ಲಿ ಕಸದ ದೊಡ್ಡ ದೊಡ್ಡ ತೊಟ್ಟಿಗಳನ್ನಿಟ್ಟು ಜನತೆ ಕಸ ತ್ಯಾಜ್ಯಗಳನ್ನು ತೊಟ್ಟಿಗಳಲ್ಲಿ ಹಾಕುವ ವಿನಂತಿ ಮಾಡಿದ್ದಾರೆ. ಮಾದರೀ ಕಾರ್ಯ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.