Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಹಳ್ಳಿಮದ್ದು: ನುಗ್ಗೆಕಾಯಿ

vaarte_health_image niggekai

ಆರೋಗ್ಯ ವಾರ್ತೆ:

ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳ್ಳುಳ್ಳ ಕಾಯಿಪಲ್ಲೆ. ಇದು ಆರೋಗ್ಯವರ್ಧಕ ತರಕಾರಿ.  ನುಗ್ಗೆಕಾಯಿಯಲ್ಲಿ ಆರೋಗ್ಯವನ್ನು ಹೆಚ್ಚಿಸುವ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾದ ಹಲವಾರು ಖನಿಜಗಳು, ಪ್ರೋಟೀನುಗಳು, ವಿಟಮಿನ್‌ಗಳು ಮತ್ತು ಕರಗುವ ನಾರು ಇದೆ. “Moringa Oleifera” ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ನುಗ್ಗೆಕಾಯಿಯನ್ನು ಹಿಂದಿಯಲ್ಲಿ ಷಾಜಾನ್ ಎಂದೂ ಕರೆಯುತ್ತಾರೆ. ಇಂಗ್ಲಿಷಿನ ಮೋರಿಂಗಾ ಎಂಬ ಹೆಸರು ತಮಿಳಿನ ಮುರುಂಗಾಯಿ ಎಂಬ ಪದದಿಂದ ಬಂದಿದೆ. ಆದರೆ ನುಗ್ಗೆಕಾಯಿ ಮೊದಲು ತಮಿಳುನಾಡಿನಲ್ಲಲ್ಲ, ಭಾರತದ ನೈರುತ್ಯ ಭಾಗದಲ್ಲಿ ಮೊದಲು ಬೆಳೆಯಲಾಯಿತು. ನುಗ್ಗೆಯ ಕಾಯಿ, ಹೂವು, ಬೀಜ ಮತ್ತು ಎಲೆಗಳು ಸೇವನೆಗೆ ಅರ್ಹವಾಗಿದ್ದು ಫೈಟೋ ನ್ಯೂಟ್ರಿಯೆಂಟುಗಳೆಂಬ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ.

ನುಗ್ಗೆ ಸೊಪ್ಪಿನಲ್ಲಿ ಇರುವ ಆಹಾರಾಂಶಗಳ ಬಗ್ಗೆ ನಿಮಗೆ ಗೊತ್ತೇ?

  • ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ
  • ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ
  • ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ
  • ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್‌ ಎ
  • ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
  • ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
  • ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್‌[]

 

 

ಫ್ಲೂ ಜ್ವರ ಮತ್ತು ಶೀತವನ್ನು ಕಡಿಮೆಗೊಳಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಗರ್ಭವತಿಯರಿಗೆ ಅತ್ಯುತ್ತಮ ಆಹಾರವಾಗಿದೆ

ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

ಮೂಳೆಗಳು ದೃಢವಾಗುವ ಗತಿಯನ್ನು ತೀವ್ರಗೊಳಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ

ಗಂಟಲು ಮತ್ತು ಚರ್ಮದ ಸೋಂಕುಗಳಿಂದ ಗರಿಷ್ಟ ರಕ್ಷಣೆ ಪಡೆದಂತಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಲು ಕಾರಣವಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವದಿಂದಲೂ ರಕ್ಷಿಸುತ್ತದೆ.

ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ

ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.

ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.

ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.

ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.

ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚಿದರೆ ಅದು ನಾಶವಾಗುತ್ತದೆ.