Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…!

#swarajya#maidan#moodbidri#karnataka

ರಕ್ಷಣಾ ಇಲಾಖೆ ಸ್ವಾಧೀನ ಪಡಿಸಲಿದೆಯೇ  ಮೂಡಬಿದಿರೆ ಸ್ವರಾಜ್ಯ ಮೈದಾನವನ್ನು….?!

ವಾರ್ತೆ.ಕಾಂ ವಿಶೇಷ: ಹರೀಶ್ ಕೆ.ಆದೂರು
ಮೂಡಬಿದಿರೆಯ ಪ್ರತಿಷ್ಠಿತ ಸ್ವರಾಜ್ಯ ಮೈದಾನ ಮತ್ತೆ ಮೊದಲಿನ ರೂಪ ತಾಳಲಿದೆಯೇ…? 29ಎಕ್ಕರೆ ಪ್ರದೇಶಕ್ಕೆ ಬೇಲಿ ಬೀಳಲಿದೆಯೇ…? ಈಗಿರುವ 400ಮೀಟರ್ ಸಿಂಥೆಟಿಕ್ ಟ್ರಾಕ್, ಮಲ್ಟಿ ಜಿಮ್, ಈಜುಕೊಳ, ಆಸು ಪಾಸಿನ ಮನೆಗಳು ಎಲ್ಲವೂ ಇತಿಹಾಸದ ಪುಟ ಸೇರುತ್ತದೆಯೇ…? ಈ ಎಲ್ಲಾ ಪ್ರಶ್ನೆಗಳು ಉದ್ಭವಿಸಿದೆ…
ಈ ಪ್ರಶ್ನೆ ಹಾಗೂ ಸಂಶಯವನ್ನು ಕೆದಕುತ್ತಾ ಹೋದಂತೆ `ಇದು ಆಗುವುದು ಬಹುತೇಕ ಖಚಿತ’ಎಂಬ ಅಂಶ ಸ್ಪಷ್ಟವಾಗುತ್ತಾ ಸಾಗುತ್ತದೆ. ಹೌದು…ಸ್ವರಾಜ್ಯ ಮೈದಾನದ ಇತಿಹಾಸವನ್ನೊಮ್ಮೆ ಅವಲೋಕಿಸ ಹೊರಟಾಗ ಒಂದರಹಿಂದೊಂದರಂತೆ ಮಾಹಿತಿಗಳು ಹೊರಬರುತ್ತವೆ…ಅವೆಲ್ಲವೂ `ಸ್ವರಾಜ್ಯಮೈದಾನ’ದ ರೂಪಾಂತರ ವಿಚಾರವನ್ನು ಒಪ್ಪುವುದಕ್ಕೆ ಕಷ್ಟವಾಗುವಂತೆ ಮಾಡುತ್ತಿವೆ. ಇದೀಗ ರಕ್ಷಣಾ ಇಲಾಖೆ ಈ ಮೈದಾನ `ತಮ್ಮದು’ಎಂದು ಸಾಬೀತು ಪಡಿಸುವ ಸಾಹಸದಲ್ಲಿದ್ದಾರೆ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಕಲೆಹಾಕಿ ಸ್ವಾಧೀನ ಪಡಿಸುವ ನಿಟ್ಟಿನಲ್ಲಿ ಕಾಯರ್ೋನ್ಮುಖರಾಗಿದ್ದಾರೆಂಬ ಸ್ಪೋಟಕ ಮಾಹಿತಿ `ವಾರ್ತೆ.ಕಾಂ ‘ಗೆ ಲಭ್ಯವಾಗಿದೆ.

ಏನು ಹೇಳುತ್ತದೆ ಇತಿಹಾಸ!?
1962ರಲ್ಲಿ ಮಿಲಿಟರಿ ತಾತ್ಕಾಲಿಕ ಕ್ಯಾಂಪ್ ಇದೇ ಸ್ವರಾಜ್ಯ ಮೈದಾನದಲ್ಲಿ ನಡೆದಿತ್ತು. ಯುದ್ದದ ಸಂದರ್ಭದಲ್ಲಿ ಮಿಲಿಟರಿ ಪಡೆಗಳ ಕ್ಯಾಂಪ್ 29ಎಕ್ಕರೆಗಳ ವಿಸ್ತಾರವಾದ ಸ್ವರಾಜ್ಯಮೈದಾನದಲ್ಲಿ ಮಾಡಲಾಗಿತ್ತು. ಈ ಬಗ್ಗೆ ಆರ್.ಟಿ.ಸಿ.ಯಲ್ಲಿ ಎನ್ ಚಾಟ್ ಮೆಂಟ್ ಗ್ರೌಂಡ್ ಎಂದು ದಾಖಲಾಗಿತ್ತು. ತದನಂತರದಲ್ಲಿ ಕೈಬರಹದ ಆರ್.ಟಿ.ಸಿ.ಗಳಲ್ಲಿ `ಮಿಲಿಟ್ರಿ’ಗ್ರೌಂಡ್ ಎಂದು ನಮೂದಾಗಿದ್ದವು.
ಕಳೆದ ಹಲವು ವರುಷಗಳ ಹಿಂದೆ ಧಾರ್ಮಿಕ ಕಾರ್ಯಗಳು, ಬೃಹತ್ ಸಭೆ ಸಮಾರಂಭಗಳು, ರಾಜಕೀಯ ಕಾರ್ಯಕ್ರಮಗಳು, ವಿವಿಧ ಸಾರ್ವಜನಿಕ ಕ್ರೀಡೆಗಳು ಇವೆಲ್ಲವೂ ಇದೇ ಬೃಹತ್ `ಸ್ವರಾಜ್ಯ ಮೈದಾನ’ದಲ್ಲಿ ನಡೆಯುತ್ತಿದ್ದವು. ಸಾರ್ವಜನಿಕವಾಗಿ ಗಣರಾಜ್ಯೋತ್ಸವದ ಆಚರಣೆ, ಸ್ವಾತಂತ್ರ್ಯೋತ್ಸವ ಆಚರಣೆಯೂ ಇದೇ ಮೈದಾನದಲ್ಲಿ ನಡೆದಿದ್ದು ಇಂದಿಗೂ ಹಲವು ಮಂದಿ ನೆನಪಿಸುತ್ತಾರೆ. ಐತಿಹಾಸಿಕ ರೆಡಿಯೋ ಪೆವಿಲಿಯನ್ ಕೂಡಾ ಇದೇ ಮೈದಾನದಲ್ಲಿತ್ತು ಎಂಬುದು ಗಮನಾರ್ಹ. ಸಾರ್ವಜನಿಕರು ಈ ಮೈದಾನದಲ್ಲಿ ಕುಳಿತು ರೇಡಿಯೋ ಕಾರ್ಯಕ್ರಮ ಆಲಿಸುತ್ತಿದ್ದರಂತೆ…

 

ಅಭಿವೃದ್ಧಿ…
2004 ರಲ್ಲಿ ಮೂಡಬಿದಿರೆಯಲ್ಲಿ ಅಖಿಲ ಭಾರತ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನ `ನಭೂತೋ’ಎಂಬಂತೆ ನಡೆದು ಇತಿಹಾಸ ಸೃಷ್ಟಿಸಿದ್ದೂ ಇದೇ ಮೈದಾನದಲ್ಲಿ ಎಂಬುದು ಗಮನಾರ್ಹ. ನೆನೆಗುದಿಗೆ ಬಿದ್ದಿದ್ದ `ಸ್ವರಾಜ್ಯ’ಮೈದಾನಕ್ಕೊಂದು ಕಾಯಕಲ್ಪ ನೀಡಿ ಅಲ್ಲೊಂದು ಬೃಹತ್ ಕಾರ್ಯಕ್ರಮ ನಡೆಯುವಂತಾಗಿದ್ದು ಪ್ರಶಂಸೆಗೆ ಪಾತ್ರವಾಗಿದ್ದು ಇಂದಿಗೆ ಇತಿಹಾಸ.
ಏತನ್ಮಧ್ಯೆ ಸ್ವರಾಜ್ಯ ಮೈದಾನದ ಕಬಳಿಕೆಯಾಗುತ್ತಿರುವ ಭೀತಿ ಆವರಸಿತೊಡಗಿತು. ಮೂಡಬಿದಿರೆಯ ಶಾಸಕ ಕೆ.ಅಭಯಚಂದ್ರ ಜೈನ್ ಅವರ ಮುತುವರ್ಜಿ ಯಿಂದಾಗಿ ಸ್ವರಾಜ್ಯ ಮೈದಾನದ ಅಭಿವೃದ್ದಿಗೆ ಚಿಂತನೆ ನಡೆಸಲಾಯಿತು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಭೂಕಬಳಿಕೆಯಿಂದ ಸ್ವರಾಜ್ಯ ಮೈದಾನ ಉಳಿಸುವ ಬಗ್ಗೆ ವಿನಂತಿಸಿದ್ದೂ ಆಯಿತು. ಜಿಲ್ಲಾಧಿಕಾರಿಗಳು ರಕ್ಷಣಾ ಇಲಾಖೆಗೆ ಪತ್ರ ಬರೆದು ಮೈದಾನದ ಬಗ್ಗೆ ಉಲ್ಲೇಖಿಸಿ ಈ ಬಗ್ಗೆ ದಾಖಲಾತಿ ಕೋರಿದ್ದಾರೆಂಬ ಮಾಹಿತಿ ಲಭ್ಯವಾಗುತ್ತದೆ. ಆದರೆ ಸೂಕ್ತ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಗೆ ಈ ಮೈದಾನವನ್ನು `ಉಸ್ತುವಾರಿ’ನೆಲೆಯಲ್ಲಿ ಹಸ್ತಾಂತರ ಮಾಡಲಾಯಿತೆಂಬ ಮಾಹಿತಿ ಲಭ್ಯವಾಗುತ್ತದೆ.

swarajya maidan1
ತದನಂತರ ಇಲ್ಲಿ 400ಮೀಟರ್ ಸಿಂಥೆಟಿಕ್ ಟ್ರಾಕ್ ಇರುವ ಕ್ರೀಡಾಂಗಣವಾಗಿ ಪರಿವರ್ತನೆಯಾಯಿತು. ಮಲ್ಟಿಜಿಮ್ ನಿರ್ಮಾಣವಾಯಿತು, ಈಜುಕೊಳ ನಿರ್ಮಾಣಗೊಂಡಿತು. ಹಲವು ಅಭಿವೃದ್ಧಿಗಳು ಈ ಮೈದಾನದಲ್ಲಾಯಿತು. ಸುಸಜ್ಜಿತ ಕ್ರೀಡಾ ಮೈದಾನವಾಗಿ ಇದು ಬದಲಾವಣೆಹೊಂದಿತು.

ಮತ್ತೆ ರಕ್ಷಣಾ ಇಲಾಖೆಗೆ…?
ಮೈದಾನ ಮತ್ತೆ ರಕ್ಷಣಾ ಇಲಾಖೆಯ ಸ್ವಾಧೀನಕ್ಕೆ ಹೋಗಲಿದೆಯೇ…? ಈ ಪ್ರಶ್ನೆ ಇದೀಗ ದಟ್ಟವಾಗತೊಡಗಿದೆ. ಕಳೆದ ಶುಕ್ರವಾರ ರಕ್ಷಣಾ ಇಲಾಖೆಯ ಅಧಿಕಾರಿಗಳು ಸ್ವರಾಜ್ಯ ಮೈದಾನಕ್ಕೆ ತೆರಳಿ ಸರ್ವೇ ಕಾರ್ಯ ನಡೆಸಿದ್ದಾರೆ. 29ಎಕ್ಕರೆ ಭೂ ಪ್ರದೇಶ ಹೊಂದಿರುವ ಮಾರ್ಪಾಡಿ ಗ್ರಾಮದ ಸರ್ವೇ ನಂಬ್ರ 123ರ ಮೈದಾನ ಭೂಮಿ ಮತ್ತೆ ತಮ್ಮ ವ್ಯಾಪ್ತಿಗೆ ಒಳಪಡುವಂತೆ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೇ ಇಲಾಖೆಯವರು ಸರ್ವೇ ನಡೆಸಿದ್ದಾರೆ. ಕಂದಾಯ ಇಲಾಖೆಯೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳನ್ನೂ ಸಂಪರ್ಕಿಸಿದ್ದಾರೆ.ಇದೀಗ ರಕ್ಷಣಾ ಇಲಾಖೆ ಸ್ವರಾಜ್ಯ ಮೈದಾನ ತಮ್ಮ ಸುಪದರ್ಿಗೆ ಸೇರಿದ್ದು ಎಂಬ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಿ ನ್ಯಾಯದ ಮೊರೆ ಹೋಗಿದೆ .
ಏನಾಗಬಹುದು…?
ಸಿಂಥೆಟಿಕ್ ಟ್ರಾಕ್ , ಪೆವಿಲಿಯನ್, ಮಲ್ಟಿಜಿಮ್, ಈಜುಕೊಳ ಸೇರಿದಂತೆ 29ಎಕ್ಕರೆಗಳ ಸಂಪೂರ್ಣ ಸ್ವರಾಜ್ಯ ಮೈದಾನ ರಕ್ಷಣಾ ಇಲಾಖೆಯ ಸುಪರ್ದಿಗೆ ಹೋಗುವ ಸಾಧ್ಯತೆಯಿದೆ. ಈ ಭೂಮಿ ರಕ್ಷಣಾ ಇಲಾಖೆಯದ್ದೆಂದು ಸಾಬೀತಾದಲ್ಲಿ ಇಲಾಖೆ ಈ ಭೂಮಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡು ಬೇಲಿ ಹಾಕಿ ಭದ್ರ ಪಡಿಸುವ ಸಾಧ್ಯತೆಯಿದೆ. ತಾತ್ಕಾಲಿಕ ನೆಲೆಯಲ್ಲಿ ನಿರ್ಮಾಣಗೊಂಡ ಮಾರುಕಟ್ಟೆ ಸಹಿತ, ಬಿ.ಎಸ್.ಎನ್.ಎಲ್ ಟವರ್, ಪರಿಸರದ ಮನೆಗಳು , ಅಕ್ರಮಿತ ಭೂ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ.

ಹೋರಾಟ ನಡೆಯುವದೇ…?
ಅಭಿವೃದ್ಧಿ ಹೊಂದಿದ ಸ್ವರಾಜ್ಯ ಮೈದಾನದ ಯಥಾ ಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಯುವ ಸಾಧ್ಯತೆಯಿದೆ. ಆದರೆ ಇದು ಎಷ್ಟರಮಟ್ಟಿಗೆ ಫಲಪ್ರದವಾಗಬಹುದು ಎಂಬುದು ಪ್ರಶ್ನಾರ್ಹ ಅಂಶ. ಒಂದೊಮ್ಮೆ ರಕ್ಷಣಾ ಇಲಾಖೆಯದ್ದೇ ಎಂದು ಸಾಬೀತಾದಲ್ಲಿ ಯಾವ ಹೋರಾಟದಿಂದಲೂ ಉಳಿಸಿಕೊಳ್ಳುವುದು ಕಷ್ಟಸಾಧ್ಯವೇ ಸರಿ.