Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018

#swachasarvekshan#modi

ಸ್ಟೂಡೆಂಟ್ ರಿಪೋರ್ಟರ್: ಮಾಹಿತಿ

ಹೌದು…ಭಾರತ ಇಂದು ಸ್ವಚ್ಛ ಭಾರತದ ಕನಸು ‌ನನಸಾಗುವ ಸಮಯ ಬಂದಿದೆ. ಪ್ರತಿಯೊಬ್ಬನ ಮನದಲ್ಲೂ ಸ್ವಚ್ಚತೆಯನ್ನು ಕಾಪಾಡಬೇಕು ಎಂಬ ಚಿಂತನೆಯನ್ನು ಮನದಲ್ಲಿಟ್ಟುಕೊಂಡಿದ್ದಾನೆ. ಹೀಗಾಗಿ ಮುಂದೊಂದು ದಿನ ಭಾರತ ಸ್ವಚ್ಛ ಭಾರತವಾಗಿ ನಿಲ್ಲುವುದು ನೂರಕ್ಕೆ ನೂರು ಸತ್ಯ.

ಇದಕ್ಕೆಲ್ಲಾ ಕಾರಣ, ಅಕ್ಟೋಬರ್ 02ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು ಸ್ವಚಗೊಳಿಸಿ,ಸ್ವಚ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ .ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಕೊಳಚೆ, ಕಸ-ಕಡಿಗಳನ್ನು ನೋಡಿ ತಾವೇನು ಮಾಡಲಾಗುವುದಿಲ್ಲ ಎಂಬ ಜನರಲ್ಲಿ ಹೊಸ ಚಿಂತನೆಯನ್ನು ಮತ್ತು ಸ್ಪೂರ್ತಿಯನ್ನು ಬಿತ್ತಿ ತಮ್ಮ ಪ್ರದೇಶಗಳನ್ನು ತಾವೇ ಸ್ವಚ್ಚವನ್ನಾಗಿ ಮಾಡಿ ಇಟ್ಟುಕೊಳ್ಳಬಹುದು ಎಂಬುದನ್ನು ಮಾಡಿ ತೋರಿಸುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮೀಣ ಸ್ವಚ್ಛತೆಯನ್ನು ತಿಳಿಯಲು ಸ್ವಚ್ಛ ‌ಸರ್ವೇಕ್ಷಣ ಗ್ರಾಮೀಣ ಅಭಿಯಾನ
ಗ್ರಾಮೀಣ ನೈರ್ಮಲ್ಯ ‌,ಕುಡಿಯುವ ನೀರು, ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸುವ ‌ಸಲುವಾಗಿ‌‌ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕಾರ್ಯಕ್ರಮ ಅಗಸ್ಟ್ 1-2018ರಲ್ಲಿ ಪ್ರಾರಂಭವಾಗಿದೆ .ಶಾಲೆ,ಕಾಲೇಜ್, ಅರೋಗ್ಯ ಕೇಂದ್ರ, ಧಾರ್ಮಿಕ ‌ಸ್ಥಳ , ಸಂತೆ ಮುಂತಾದ ‌ಪ್ರದೇಶಗಳಿಗೆ ಕೇಂದ್ರ ಸರಕಾರದ ಸ್ವಚ್ಛ ‌ಭಾರತ ಮಿಷನ್‌ಯೋಜನೆಯ ತಂಡವೊಂದು ಅಗಮಿಸಲಿದ್ದು‌,ಗ್ರಾಮೀಣ ಜನರಿಗೆ ಎಷ್ಟರ ಮಟ್ಟಿಗೆ ಈ ಯೋಜನೆಯ ಮಾಹಿತಿಗಳು ತಿಳಿದಿವೆ ಪರಿಶೀಲಿಸಲಿದೆ.ಇದರಿಂದ ಆಯಾ ಆಯಾ ರಾಜ್ಯದ ಜಿಲ್ಲೆಗಳಿಗೆ ಶೇಕಡಾವಾರು ಮಾಹಿತಿಯ ಮೂಲಕ ಶ್ರೇಣಿಯನ್ನು ನೀಡಿ ರಾಜ್ಯದ ಅಭಿವೃದ್ಧಿ ಯಾವ ರೀತಿ ಆಗಿದೆ ಎಂಬುದನ್ನು ತಿಳಿಯುವ ಉದ್ದೇಶ ಹೊಂದಲಾಗಿದೆ.

ಆ್ಯಪ್ ನ ಮೂಲಕ ತಿಳಿಸಬಹುದು
ತಮ್ಮ ತಮ್ಮ ಗ್ರಾಮೀಣ ಪ್ರದೇಶದ ಸ್ವಚ್ಛತೆಯನ್ನು‌ ನೀಡಲು, ಎಸ್.ಎಸ್.ಜಿ18(SSG18) ಆ್ಯಪ್ ನ್ನು‌ ಡೌನ್‌ಲೋಡ್ ಮಾಡಿ ಅದರಲ್ಲಿ ‌ಕೇಳುವ ಸರಳ 8 ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ತಮ್ಮ ಜಿಲ್ಲೆಯ ಸ್ವಚ್ಛತೆಯ ಮಟ್ಟವನ್ನು ದೇಶದಲ್ಲಿಯೇ ಗುರುತಿಸುವಂತೆ ಮಾಡಬಹುದಾಗಿದೆ.

ದಿನೇಶ್. ಕೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ