Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಸೇವೆಯಲ್ಲಿ ಬದಲಾವಣೆ ತಂದ ಹೆಗ್ಗಳಿಕೆ ರೋಟರಿಯದ್ದು – ಡಾ.ಹೆಗ್ಗಡೆ

#rotary#suvarna#sambrama#chalane

ರೋಟರಿ ಸುವರ್ಣ ಸಂಭ್ರಮಕ್ಕೆ ಸಂಭ್ರಮದ ಚಾಲನೆ
ನಮ್ಮ ಪ್ರತಿನಿಧಿ ವರದಿ
ಮೂಡಬಿದಿರೆಯ ರೋಟರಿ ಕ್ಲಬ್ ಸುವರ್ಣ ಸಂಭ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶನಿವಾರ ಗೋಧೂಳಿಯ ಸಮಯದಲ್ಲಿ ಚಾಲನೆ ನೀಡಿದರು. ಮೂಡಬಿದಿರೆಯ ರೋಟರಿ ಕ್ಲಬ್ ಪ್ರವರ್ತಿತ ರೋಟರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಮಸ್ತ ರೋಟರಿ ಸಮಸ್ತ ಕುಟುಂಬದ ಉಪಸ್ಥಿತಿಯಲ್ಲಿ ಸುವರ್ಣ ಸಂಭ್ರಮಕ್ಕೆ ಚಾಲನೆ ದೊರಕಿತು.
ಸೇವೆಯಲ್ಲಿ ಬದಲಾವಣೆ ತಂದ ಹೆಗ್ಗಳಿಕೆ ರೋಟರಿ ಸಂಸ್ಥೆಗಿದೆ. ಹೊಸ ರೀತಿಯ ಪರಿವರ್ತನೆ, ಬದಲಾವಣೆಗಳನ್ನು ಪರಿಚಯಿಸಿದ ಕೀತರ್ಿ ರೋಟರಿ ಸಂಸ್ಥೆಗೆ ಸಲ್ಲಬೇಕಾಗಿದೆ ಎಂದು ಪೂಜ್ಯ ಹೆಗ್ಗಡೆ ಹೇಳಿದರು. ಹೃದಯ ಶ್ರೀಮಂತಿಕೆ, ಬೌದ್ಧಿಕ ವಿಶಾಲತೆ, ಚಿಂತನಾ ವಿಶಾಲತೆಗಳು ರೋಟರಿ ಸಂಸ್ಥೆಯ ಸದಸ್ಯರಿಗೆ ಲಭ್ಯವಾಗುತ್ತದೆ. ಸೇವೆಯ ಇನ್ನೊಂದು ಹೆಸರೇ ರೋಟರಿ ಎಂಬಂತಹ ರೀತಿಯಲ್ಲಿ ಹೊಸ ಪರಿವರ್ತನೆಯೊಂದನ್ನು ರೋಟರಿ ತಂದಿದೆ ಎಂದು ಹೆಗ್ಗಡೆ ಪ್ರಶಂಸಿದರು. ಸಮಾನತೆಯ ಅಂಶವನ್ನು ಸಾರಿದ ರೋಟರಿ ಸಂಸ್ಥೆಯು ವೈಯಕ್ತಿಕ ಬೆಳವಣಿಗೆಯೊಂದಿಗೆ ಸಾಮುದಾಯಿಕ ಬೆಳವಣಿಗೆಗೆ ಒತ್ತುನೀಡುತ್ತಿದೆ ಎಂದರು.

#rotaray club#moodbidri#srikanth#kamatth1
ಮೂಡಬಿದಿರೆ ರೋಟರಿ ಸಂಸ್ಥೆಯು ಸಮಾಜಕ್ಕೆ ಅತ್ಯವಶ್ಯಕವಾಗಿ ಬೇಕಾಗಿದ್ದ ರಕ್ತನಿಧಿ ಘಟಕವೊಂದನ್ನು ಸ್ಥಾಪಿಸಿದ್ದು ಪ್ರಶಂಸಾರ್ಹ ಎಂದರಲ್ಲದೆ, ಹೂಳು ತುಂಬಿರುವ ಕೆರೆಗಳ ಅಭಿವೃದ್ಧಿ ಪಡಿಸಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸಮಾಜಮುಖೀ ಕಾರ್ಯ ಮಾಡುತ್ತಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರೋಟರಿ ಕ್ಲಬ್ನ ವಿಶೇಷ ಯೋಜನೆಗಳಲ್ಲೊಂದಾದ ರೋಟಾಲೇಕ್ ನ ಮೂಲಕ ಅಭಿವೃದ್ಧಿ ಪಡಿಸಿದ ಮೊಹಲ್ಲಾ ಕಾಲೋನಿಯ ಪುರಾತನ ಕೆರೆಯ ಲೋಕಾರ್ಪಣೆ ಗೊಳಿಸಿದರು. ರೋಟರಿ ಪಿ. ಯು ಕಾಲೇಜಿಗೆ ಮೇಲ್ಛಾವಣಿ ಕಾಮಗಾರಿಗೆ ಇದೇ ಸಂದರ್ಭ ಸಾಂಕೇತಿಕ ಚಾಲನೆಯನ್ನು ನೀಡಲಾಯಿತು.

ರೋಟಾಲೆಟ್ ಯೋಜನೆಯಲ್ಲಿ ನಿರ್ಮಾಣಗೊಂಡ ನೂರು ಶೌಚಾಲಯಗಳ ಪೈಕಿ 98,99,100ನೇ ಶೌಚಾಲಯ ಸಹಿತ ಸ್ನಾನಗೃಹವನ್ನು ಫಲಾನುಭವಿಗಳಿಗೆ ನ್ಯಾಯಮೂರ್ತಿ ಜಸ್ಟಿಸ್, ಅಬ್ದುಲ್ ನಝೀರ್ ಹಸ್ತಾಂತರಿಸಿದರು. ಸುವರ್ಣಾವಸರದಲ್ಲಿರುವ ರೋಟರಿ ಕ್ಲಬ್ನ ಸಾಧನೆಯ ಹಾದಿಯನ್ನು ಡಾ. ಪುಂಡಿಕೈ ಗಣಪಯ್ಯ ಭಟ್ ತಿಳಿಸಿದರು.
ರೋಟರಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಅತ್ಯಂಗ ಸೂಕ್ಷ್ಮವಾಗಿ ಗಮನಿಸಿದಾಗ ಸಮಾಜಮುಖೀ ಸಾಧನೆಗಳ ಅರಿವಾಗುತ್ತದೆ. ಒಂದು ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ಮೂಡಬಿದಿರೆಯ ರೋಟರಿ ಕ್ಲಬ್ ಮಾಡುತ್ತಿದೆ ಎಂದು ನ್ಯಾಯಮೂರ್ತಿ  ಜಸ್ಟಿಸ್ ಅಬ್ದುಲ್ ನಝೀರ್ ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆ: ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಹೊರತಂದ `ಸುವರ್ಣ ಪಥ’ ಸ್ಮರಣ ಸಂಚಿಕೆಯನ್ನು ಸುರೇಶ್ ಚಂಗಪ್ಪ ಬಿಡುಗಡೆಗೊಳಿಸದರು.

ಸನ್ಮಾನ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಸಂಭ್ರಮದ ಪ್ರಯುಕ್ತ ರೋಟರಿಕ್ಲಬ್ ವತಿಯಿಂದ ಸಾಂಪ್ರದಾಯಿಕ ಸನ್ಮಾನ ನಡೆಸಲಾಯಿತು. ಇದೇ ಸಂದರ್ಭದಲ್ಲಿ ನ್ಯಾ.ಜಸ್ಟಿಸ್ ಅಬ್ದುಲ್ ನಝೀರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವಿನ್ಸೆಂಟ್ ಡಿ. ಕೋಸ್ತಾ, ಸುರೇಶ್ ಕೋಟ್ಯಾನ್,ಜೆ.ಜೆ ಪಿಂಟೋ,ಪ್ರಕಾಶಿನಿ ವಿನಯ ಹೆಗ್ಡೆ ಅವರನ್ನು ರೋಟರಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಡಾ.ಎಲ್.ಸಿ.ಸೋನ್ಸ್, ರತ್ನಾಕರ ಶೆಟ್ಟಿ, ಕೆ.ಅಮರನಾಥ ಶೆಟ್ಟಿ ಸೇರಿದಂತೆ ರೋಟರಿ ಸ್ಥಾಪಕ ಸದಸ್ಯರು, ಪೂವರ್ಾಧ್ಯಕ್ಷರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಡಾ. ಹರೀಶ್ ನಾಯಕ್, ಡಾ. ಮುರಲೀಕೃಷ್ಣ, ನಾರಾಯಣ ಪಿಎಂ, ಎ.ಕೆ ರಾವ್, ಹೈಕೋರ್ಟ್ಟ ನ್ಯಾಯಧೀಶರು ನ್ಯಾ ಬಿ.ವಿ ನಾಗರತ್ನ, ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ , ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ವಸಂತ ಶೆಣೈ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್ ಸ್ವಾಗತಿಸಿದರು. ಎಂ ಗಣೇಶ್ ಕಾಮತ್ , ಡಾ.ಮಮತಾ ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಮಹಮ್ಮದ್ ಆರೀಫ್ ವಂದಿಸಿದರು.
ಗಮನ ಸೆಳೆದ ಅಲಂಕಾರ
ಮೂಡಬಿದಿರೆಯ ರೋಟರಿ ಕ್ಲಬ್ನ ಸುವರ್ಣ ಸಂಭ್ರಮಾಚರಣೆಯ ಇಡೀ ಆವಣರ ಅತ್ಯಂತ ವೈವಿಧ್ಯವಾಗಿ ಶೃಂಗಾರಗೊಳಿಸಲಾಗಿತ್ತು. ವಿದ್ಯುತ್ ದೀಪಗಳ ಶೃಂಗಾರದೊಂದಿಗೆ ಪರಂಪರೆಯ ನೆನಪಿಸುವ ಆಕರ್ಷಕ ವೇದಿಕೆ ಎಲ್ಲರ ಗಮನ ಸೆಳೆಯುವಂತಾಯಿತು.
ರೋಟರಿ ಸಂಸ್ಥೆಯ ಸದಸ್ಯರ ಸಮವಸ್ತ್ರ ಎಲ್ಲರ ಆಕರ್ಷಣೆಗೆ ಪಾತ್ರವಾಯಿತು.