Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಸಿಹಿಗೆಣಸು ದೋಸೆ

vaarte dish.sweetpotot dosa

ವಾರ್ತೆ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
ಸಿಹಿಗೆಣಸು – 2, ಬೆಳ್ತಿಗೆ ಅಕ್ಕಿ – 1 ಲೋಟ, ತೆಂಗಿನ ಕಾಯಿ ತುರಿ – 1 ಕಪ್, ಒಣ ಮೆಣಸು – 4, ಉಪ್ಪು – ರುಚಿಗೆ ಬೇಕಷ್ಟು, ಹುಣಿಸೆ ಹುಳಿ – ನೆಲ್ಲಿಕಾಯಿ ಗಾತ್ರದಷ್ಟು, ಬೆಲ್ಲ – ಸಣ್ಣ ತುಂಡು, ಈರುಳ್ಳಿ – 1

 

 

 

ತಯಾರಿಸುವ ವಿಧಾನ
ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಸಿ ನಂತರ ಚೆನ್ನಾಗಿ ತೊಳೆದು ತೆಂಗಿನ ಕಾಯಿ ತುರಿ ಒಣಮೆಣಸು, ಉಪ್ಪು, ಹುಳಿ, ಬೆಲ್ಲ ಮತ್ತು ಈರುಳ್ಳಿ ಇವೆಲ್ಲವುಗಳನ್ನೂ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದ ಬರುವಷ್ಟು ನೀರಾಗಿರಲಿ. ಸಿಹಿಗೆಣಸನ್ನು ಚೆನ್ನಾಗಿ ತೊಳೆದು ತೆಳುವಾಗಿ ಗಾಲಿಯಾಕಾರದಲ್ಲಿ ಚಿಪ್ಸ್ ತರ ಕತ್ತರಿಸಿ ಇಟ್ಟುಕೊಳ್ಳಿ. ಒಲೆಯ ಮೇಲೆ ಕಾವಲಿ ಇಟ್ಟು ಕಾವಲಿ ಕಾದಾಗ ಕತ್ತರಿಸಿಟ್ಟ ಸಿಹಿಗೆಣಸುಗಳ ತುಂಡುಗಳನ್ನು ರುಬ್ಬಿಟ್ಟ ದೋಸೆ ಹಿಟ್ಟಿನಲ್ಲಿ ಮುಳುಗಿಸಿ ತೆಗೆದು ಕಾವಲಿಯಲ್ಲಿ ದೋಸೆಯಾಕಾರದಲ್ಲಿ ನೀಟಾಗಿ ಜೋಡಿಸಿ ಇಟ್ಟು ಮುಚ್ಚಿಡಿ. ಸ್ವಲ್ಪ ಕಾದಾಗ ಅದರ ಮೇಲೆ 2 ಚಮಚ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಸವರಿ ಮಗುಚಿ ಹಾಕಿ. ಎರಡೂ ಬದಿ ಕಾದ ನಂತರ ದೋಸೆಯು ಸವಿಯಲು ಸಿದ್ಧ.