Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಸಾವಿರ ಕಂಬದ ಬಸದಿಯ ಸ್ವಚ್ಛತೆ

#javaner#bedra#cleanup#moodbidri#35weekprogaram

35ನೇವಾರದ ಕ್ಲೀನ್ ಅಪ್ ಮೂಡಬಿದಿರೆ- ಸ್ವಾಮೀಜಿ,ಶಾಸಕರ ಭಾಗಿ

ಮೂಡಬಿದಿರೆ: ಯಾವೊಂದು ಆಮಿಷವೂ ಇಲ್ಲದೆ, ಸಮಾಜಮುಖೀ ಕಾರ್ಯದ ಮೂಲಕ ಸ್ವಚ್ಛಭಾರತ ಪರಿಕಲ್ಪನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮಹತ್ಕಾರ್ಯವನ್ನು ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಮಾಡುತ್ತಿದೆ. ಪ್ರಚಾರವಿಲ್ಲದೆ,ಕೇವಲ ಆಚಾರದ ಮೂಲಕ ಸಾಥ್ರ್ಯಕ್ಯಗೊಳಿಸುವ ಈ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಮೂಡಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದರು. ಮೂಡಬಿದಿರೆಯ ಇತಿಹಾಸ ಪ್ರಸಿದ್ಧಿಯ ಸಾವಿರ ಕಂಬದ ಬಸದಿಯ ಆವರಣದಲ್ಲಿ 35ನೇ ವಾರದ `ಕ್ಲೀನ್ ಅಪ್ ಮೂಡಬಿದಿರೆ’ಯೋಜನೆಯ ಸ್ವಚ್ಛತಾ ಅಭಿಯಾನವನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

 

#javaner#bedra#cleanup#moodbidri#35weekprogaram1

ಜವನೆರ್ ಬೆದ್ರ ಸಂಘಟನೆಯು ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿದೆ. ಸಮಾಜದ ಪ್ರತಿಯೊಬ್ಬರು ಜಾಗೃತರಾಗಿ ತಮ್ಮ ತಮ್ಮ ಪ್ರದೇಶವನ್ನು ಸ್ವಚ್ಛವಾಗಿಡುವ ಕಾರ್ಯ ಮಾಡಬೇಕೆಂದರು.
ಸಮಾಜ ಗುರುತಿಸಿದೆ: ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆಯ ಮಹತ್ಕಾರ್ಯವನ್ನು ಇಂದು ಸಮಾಜ ಗುರುತಿಸಿದೆ. ಊರನ್ನು ಸ್ವಚ್ಛಗೊಳಿಸುವ ಕೆಲಸ ಅಸಾಮಾನ್ಯವಾದದ್ದು. ಈ ಸಾಮಾಜಿಕ ಸೇವೆ ಬೆಲೆಕಟ್ಟಲಾಗದ್ದು ಎಂದು ಮೂಡಬಿದರೆ ಶಾಸಕ ಉಮಾನಾಥ್ ಎ ಕೋಟ್ಯಾನ್ ಅಭಿಪ್ರಾಯಿಸಿದರು.

 

#javaner#bedra#cleanup#moodbidri#35weekprogaram2

ನಾನೂ ಸದಸ್ಯ! : ಸಮಾಜಮುಖೀ ಕಾರ್ಯನಿರ್ವಹಿಸುತ್ತಿರುವ ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆಯ ಓರ್ವ ಸದಸ್ಯನಾಗಿ ನಾನಿದ್ದೇನೆ. ಇದು ನಮ್ಮ ಸಂಘಟನೆ ಎಂಬ ಖುಷಿ ನನಗಿದೆ. ಸಮಾಜಿಕ ಕೆಲಸಕ್ಕೆ ನಾವು ಯಾವತ್ತೂ ಸಿದ್ಧರಿದ್ದೇವೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.

 


ಐದರ ನಂಟು! : ಐದನೇ ವಾರ, ಹತ್ತನೇವಾರ, ಹದಿನೈದನೇ ವಾರ, ಇಪ್ಪತ್ತೈದನೇ ವಾರ ಇದೀಗ ಮೂವತ್ತೈದನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಉಮಾನಾಥ್ ಕೋಟ್ಯಾನ್ ಹೇಳಿದರು. ತನ್ಮೂಲಕ ತಮ್ಮ ಐದರ ನಂಟಿನ ವಿಚಾರವನ್ನು ಪ್ರಕಟಿಸಿದರು.
ಜವನೆರ್ ಬೆದ್ರ ಸಂಘಟನೆಯ ರೂವಾರಿ ಅಮರ್ ಕೋಟೆ, ರಾಷ್ಟ್ರೀಯ ಬಾಡಿಬಿಲ್ಡರ್ ಅನಿಲ್ ಮೆಂಡೋನ್ಸಾ, ಸಂಘಟನೆಯ ಉಪಾಧ್ಯಕ್ಷ ನಾಗವರ್ಮ, ಶುಭಕರ ಪೂಜಾರಿ, ಸುನಿಲ್ ಪಣಪಿಲ, ಶ್ಯಾಂ ಪ್ರಸಾದ್, ವಿಶ್ವನಾಥ್ ದೇವಾಡಿಗ, ಜೋಯ್ಲಸ್ ಡಿ’ಸೋಜ, ರಾಜೇಂದ್ರ ಜಿ, ಶರತ್, ಶಿವಪ್ರಸಾದ್, ರಂಜಿತ್ ಶೆಟ್ಟಿ, ನಾರಾಯಣ ಪದುಮಲೆ, ವಿದ್ಯಾನಂದ್, ಪ್ರಶಾಂತ್, ವಿಖ್ಯಾತ್ ಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.