Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಸಾಲು ಮಾಸ್ತರರ ಶಾಲೆಉಳಿಸಿದ ಭಟ್ ಮಾಸ್ತ್ರು!

#moodbidri#stignisius#school#exlcusive#report#vaarte

ವಾರ್ತೆ ವಿಶೇಷ:  ಹರೀಶ್ ಕೆ.ಆದೂರು.
“ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವಶಕ್ತಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಪ್ರಶಿಕ್ಷಿತರಾಗಬೇಕು. ಈ ಹಿನ್ನಲೆಯಲ್ಲಿ ಪ್ರಾಚೀನ ಗುರುಕುಲದ ವೇದ, ವಿಜ್ಞಾನ,ಯೋಗ, ಕೃಷಿ, ಕಲಾ ಕೌಶಲಗಳೆಂಬ ಐದು ಎಸಳುಗಳುಳ್ಳ ಪಂಚಮುಖೀ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ವರ್ತಮಾನದ ಜೀವನದ ಓಟಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಆಧುನಿಕ ಶಿಕ್ಷಣದ ಸ್ಪರ್ಶದೊಂದಿಗೆ ಪರಿಣಾಮಕಾರಿ ಶಿಕ್ಷಣ ನೀಡಲು ಮೂಡಬಿದಿರೆಯ ಹೊರವಲಯದಲ್ಲಿರುವ ಶಾಲೆಯೊಂದು ಸಜ್ಜಾಗಿದೆ. ಶತಮಾನೋತ್ಸವದತ್ತ ದಾಪುಗಾಲಿಡುವ ಮೂಡಬಿದಿರೆಯ ಕಡಲಕೆರೆ ಸೈಂಟ್ ಇಗ್ನೇಶಿಯಸ್ ಶಾಲೆ ಹೊಸ ಆಡಳಿತದೊಂದಿಗೆ ಪರಿಣಾಮಕಾರಿ ಶಿಕ್ಷಣ ನೀಡಲಣಿಯಾಗಿದೆ.”

 

ಅದು 1923ರ ಸಮಯ… ನಾವು ಅವಿದ್ಯಾವಂತರಾಗಿದ್ದರೂ ನಮ್ಮ ಮಕ್ಕಳಾದರೂ ಶಿಕ್ಷಣವಂತರಾಗಬೇಕೆಂಬ ಕನಸು ಕಂಡ ಹಿರಿಯರಿದ್ದ ಸಮಯ!. ಊರಿನ ಪುಟಾಣಿ ಮಕ್ಕಳು ವಿದ್ಯಾವಂತರಾಗಿ ದೇಶ ಕಟ್ಟುವ ಕಾರ್ಯ ನಡೆಸಲಿ ಎಂಬ ಸದುದ್ದೇಶ ಹೊಂದಿ ಸಾಲ್ವಡೋರ್ ಡಿ’ಸೋಜಾ ಮೂಡಬಿದಿರೆ ಸಮೀಪದ ಕಡಲ್ ಕೆರೆಯಲ್ಲಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ಸ್ಥಾಪಿಸಿದ್ದು ಇಂದಿಗೆ ಇತಿಹಾಸ. ತನ್ನ ಜೀವಮಾನವಿಡೀ ಬ್ರಹ್ಮಚಾರಿಯಾಗಿದ್ದುಕೊಂಡೇ ಶಾಲೆಯ ಅಭ್ಯುದಯಕ್ಕಾಗಿ ಅವರು ದುಡಿದರು. ಸಾಲು ಮಾಸ್ತರರ ಶಾಲೆ ಎಂದು ಪರಿಸರದಲ್ಲಿ ಜನಪ್ರಿಯತೆ ಪಡೆದ ಈ ಶಾಲೆ ಮೂಡಬಿದಿರೆಯ ಪ್ರಸಿದ್ಧ ಕನ್ನಡ ಮಾಧ್ಯಮ ಅನುದಾನಿತ ಶಾಲೆ ಎಂದರೆ ತಪ್ಪಲ್ಲ. ಮುಳಿಹುಲ್ಲಿನ ಛಾವಣಿ ಹೊಂದಿದ್ದ ಶಾಲೆಗೆ ಹಂಚಿನ ಸೂರು ಒದಗಿಸುವಲ್ಲಿ ಪರಿಶ್ರಮಿಸಿದವರು ಅಂದು ಶಿಕ್ಷಕರಾಗಿದ್ದ ಪಳಕಳ ಸೀತಾರಾಮ ಭಟ್.

ಆಧುನಿಕ ಶಿಕ್ಷಣ ವ್ಯವಸ್ಥೆ , ಆಂಗ್ಲ ಭಾಷಾ ಪ್ರಭಾವ, ಸರಕಾರದ ಧೋರಣೆಗಳಿಂದಾಗಿ ಸರಕಾರೀ ಕನ್ನಡ ಮಾಧ್ಯಮ ಶಾಲೆಗಳ ಮುಚ್ಚುವಿಕೆಯ ಪೆರೇಡ್ ನಡೆಯುತ್ತಿದ್ದರೂ ಈ ಶಾಲೆ ಮಾತ್ರ ಅಂತಹ ಆತಂಕದಿಂದ ಮುಕ್ತವಾಗಿ ನಿರುಮ್ಮಳವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಇಲ್ಲಿನ ಮುಖ್ಯ ಶಿಕ್ಷಕ ಜಯರಾಮ್ ಭಟ್ ಅವರೇ ಕಾರಣ ಎಂದರೆ ತಪ್ಪಲ್ಲ.

ಸುಂದರ ಬಾಳೇತೋಟ

ಸುಂದರ ಬಾಳೇತೋಟ

ಅವರ ಶಿಕ್ಷಣ ಪ್ರೇಮ, ಶಾಲೆಯ ಬಗೆಗಿರುವ ಅಪಾರ ಕಾಳಜಿಯಿಂದ ಶಿಕ್ಷಣ ಸಂಸ್ಥೆ ಉಳಿದಿದೆ. ಶಾಲೆಯ ಮಕ್ಕಳಲ್ಲಿ ತಮ್ಮ ಮಕ್ಕಳನ್ನು ಕಾಣುವ ಇವರ ನಿಸ್ವಾರ್ಥ ಸೇವೆಯ ಫಲವೇ ಇತಿಹಾಸ ಸೇರಬೇಕಾಗಿದ್ದ ಶಾಲೆ ಬೆಳಗುವಂತಾಯಿತು. ಇಂದು ಪರಿಸರದ 78ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಮುಖ್ಯಶಿಕ್ಷಕರ ಮುತುವರ್ಜಿಯಿಂದ ಶಾಲಾವರಣದಲ್ಲಿ ಸುಂದರ ಕೈತೋಟ ನಿರ್ಮಾಣವಾಗಿದೆ. ಬಸಳೆ, ಬಾಳೆ, ಚೀನಿ,ಕುಂಬಳ ಬಳ್ಳಿಗಳು ಸೊಂಪಾಗಿ ಬೆಳೆದುನಿಂತಿವೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಪೌಷ್ಠಿಕ ಆಹಾರ ನೀಡುವುದು ಕೂಡಾ ಮುಖ್ಯ ಎಂಬ ದೃಷ್ಠಿಯಿಂದ ಶಿಕ್ಷಕ ವೃಂದ ಕಾರ್ಯನಿರ್ವಹಿಸುತ್ತಿದೆ. ಕಳೆದ ಹಲವು ವರುಷಗಳಿಂದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಒಟ್ಟಾಗಿ ಉಪ್ಪಿನಕಾಯಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಹಲಸಿನ ಸೊಳೆಗಳನ್ನು ಉಪ್ಪಿನಲ್ಲಿ ಹಾಕಿಟ್ಟು ಸಂಗ್ರಹಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದೊಂದಿಗೆ ಜೀವನ ಶಿಕ್ಷಣ ಕಲಿಸುವ ಇಲ್ಲಿನ ಶಿಕ್ಷಕರ ಸೇವೆಯನ್ನು ಪರಿಸರದ ಪ್ರತಿಯೊಬ್ಬರೂ ಮನಸಾರೆ ಹೊಗಳುತ್ತಿದ್ದಾರೆ.

ಪ್ರೇರಣ ಶಕ್ತಿ ಮುಖ್ಯೋಪಾಧ್ಯಾಯ ಜಯರಾಮ್ ರಾವ್

ಪ್ರೇರಣ ಶಕ್ತಿ ಮುಖ್ಯೋಪಾಧ್ಯಾಯ ಜಯರಾಮ್ ರಾವ್

37ವರ್ಷಗಳ ಸುದೀರ್ಘ ಸೇವೆ
ಈ ಅನುದಾನಿತ ಹಿರಿಯ ಪ್ರಾಧಮಿಕ ಶಾಲೆಯ ಮುಖ್ಯೋಪಾಧ್ಯಾಯರು ಬಿ.ಜಯರಾಮ್ ರಾವ್. ಕಳೆದ 37ವರುಷಗಳಿಂದ ಈ ಶಾಲೆಯಲ್ಲಿ ಸೇವೆಗೈಯುತ್ತಿದ್ದಾರೆ. ಶಾಲೆ ಉಳಿಯಬೇಕು, ಬೆಳೆಯಬೇಕೆಂಬ ದೃಷ್ಠಿಯಿಂತ ಅವಿರತ ದುಡಿಯುತ್ತಿದ್ದಾರೆ. ಬಹುಪಾಲು ಸಮಯವನ್ನು ಶಾಲೆಯ ಅಭಿವೃದ್ಧಿಗಾಗಿಯೇ ವಿನಿಯೋಗಿಸುವ ಇವರ ಸೇವೆಯನ್ನು ಗೌರವಿಸಲೇ ಬೇಕು.
ಹತ್ತು ಹಲವು ಸಮಸ್ಯೆಗಳಿದ್ದರೂ ಸೇವಾಂಜಲೀ ಎಜುಕೇಷನ್ ಟ್ರಸ್ಟ್ ಸಂಸ್ಥೆಯು ಅತ್ಯಂತ ಕಾಳಜಿಯಿಂದ ಈ ಶಿಕ್ಷಣ ಸಂಸ್ಥೆಯನ್ನು ಮುಂದುವರಿಸುತ್ತಾ ಬಂದಿದ್ದು ಪ್ರಸ್ತುತ ಪ್ರೇರಣಾ ಸೇವಾ ಟ್ರಸ್ಟ್ ಮೂಡಬಿದಿರೆ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದೆ. ಕನ್ನಡ ಶಾಲೆ ಉಳಿಯಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಶಿಕ್ಷಣಾಭಿವೃದ್ಧಿಗೆ ಟೊಂಕ ಕಟ್ಟಿದೆ. ತನ್ಮೂಲಕ ಅನುದಾನಿತ ಹಿರಿಯ ಪ್ರಾಧಮಿಕ ಶಾಲೆಯನ್ನು ಮಾದರೀ ಕನ್ನಡ ಮಾಧ್ಯಮ ಶಾಲೆಯನ್ನಾಗಿ ಉಳಿಸಿ ಬೆಳೆಸುವ ಕೈಕಂರ್ಯಕ್ಕೆ ಬಲ ದೊರೆತಂತಾಗಿದೆ.
ಏನೇನಿದೆ…?
ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆ
ಕನ್ನಡ ಮಾಧ್ಯಮದ ಶಿಕ್ಷಣ
ತಜ್ಞರಿಂದ ಆಂಗ್ಲಭಾಷಾ ವಿಶೇಷ ಬೋಧನೆ
ಸ್ಫೋಕನ್ ಇಂಗ್ಲೀಷ್ ವಿಶೇಷ ತರಬೇತಿ
ತಜ್ಞರಿಂದ ಕಂಪ್ಯೂಟರ್ ತರಬೇತಿ
ಯೋಗ, ಪ್ರಾಣಾಯಾಮ, ಭಗವದ್ಗೀತೆ, ಸಂಸ್ಕೃತ ಸುಭಾಷಿತಗಳ ಬೋಧನೆ
ಕಡಿಮೆ ಸಾಮಥ್ರ್ಯವಿರುವ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ವಿಶೇಷ ಗಮನ
ಮಧ್ಯಾಹ್ನದ ಭೋಜನ ವ್ಯವಸ್ಥೆ
ಶಾಲಾ ವಾಹನ ವ್ಯವಸ್ಥೆ
ನಾಲ್ಕು ಎಕ್ಕರೆ ಜಾಗ – ವಿಶಾಲ ಆಟದ ಮೈದಾನ

 

ಇಂದು ದೀಕ್ಷಾ ವಿಧಿ
ಸೈಂಟ್ ಇಗ್ನೇಷಿಯಸ್ ಶಾಲೆ ಕಡಲಕೆರೆ ಮೂಡಬಿದಿರೆ ಇಲ್ಲಿ ಮೇ 31ರಂದು ದೀಕ್ಷಾವಿಧಿ ಹಾಗೂ ಪ್ರೇರಣಾ ಶಿಶುಮಂದಿರದ ಪ್ರಾರಂಭೋತ್ಸವ ಬೆಳಗ್ಗೆ 10.30ಕ್ಕೆ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲಭಾರತ ಸಂಯೋಜಕ್, ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದೀಕ್ಷಾ ವಿಧಿ ಪ್ರಬೋಧನ ನಡೆಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಅಭಯಚಂದ್ರ ಜೈನ್, ಲೆಕ್ ಪರಿಶೋಧಕ ರಘುಪತಿ ಭಟ್, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಉದ್ಯಮಿ ಡಿ.ವೇದವ್ಯಾಸ ಕಾಮತ್, ಉದ್ಯಮಿ ಎಮ್ ನರೇಶ್ ಶೆಣೈ ಭಾಗವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘಚಾಲಕ ಎಮ್.ವಾಸುದೇವ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.