Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಸಾರ್ಥಕ ಸೇವೆಗೆ ಧನ್ಯತೆಯ ಭಾವ…

#rotaray club#moodbidri#srikanth#kamatth

ಸುವರ್ಣಸಂಭ್ರಮದಲ್ಲಿ ಮೂಡಬಿದಿರೆಯ ರೋಟರಿಕ್ಲಬ್

ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ-ಮೂಡಬಿದಿರೆಗೆ ಮೂಡಬಿದಿರೆಯೇ ಸಂಭ್ರಮದಲ್ಲಿ ಭಾಗಿ

ಮೂಡಬಿದಿರೆ : ರೋಟರಿ ಜಿಲ್ಲೆ 3180ಇದರ ಪ್ರತಿಷ್ಠಿತ ರೋಟರಿ ಕ್ಲಬ್ ಮೂಡಬಿದಿರೆ ತನ್ನ ಸಾರ್ಥಕ 50ವರ್ಷಗಳ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ.  ಜ.6ರಂದು ವಿಜೃಂಭಣೆಯಿಂದ ಸುವರ್ಣ ಸಂಭ್ರಮ ನಡೆಯಲಿದೆ. 4ಗಂಟೆಗೆ ರೋಟರಿಕ್ಲಬ್ ಮೂಡಬಿದಿರೆ ಇದರ ಸುವರ್ಣ ಸಂಭ್ರಮದ ಕೊಡುಗೆಯಾದ ಆಳ್ವಾಸ್ ಸಹಭಾಗಿತ್ವದ ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್ ಉದ್ಘಾಟನೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೆರವೇರಿಸುವರು. ಸುಪ್ರೀಮ್ ಕೋರ್ಟ್ಟ ನ್ಯಾಯಾಧೀಶ ಅಬ್ದುಲ್ ನಜೀರ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸುವರ್ಣ ಸಂಭ್ರಮದ ಲಾಂಛನ

ಸುವರ್ಣ ಸಂಭ್ರಮದ ಲಾಂಛನ

ಸಂಜೆ 5ಗಂಟೆಗೆ ಮೂಡಬಿದಿರೆಯ ರೋಟರಿ ಪಿ.ಯು.ಕಾಲೇಜಿನ ಆವರಣದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸುವರು. ರೋಟರಿಕ್ಲಬ್ ಪ್ರಾಯೋಜಿಸಿರುವ ರೋಟಾಲೆಟ್ ಕಾರ್ಯಕ್ರಮದಲ್ಲಿ 100ನೇ ಫಲಾನುಭವಿಗೆ ಶೌಚಾಲಯ ಹಸ್ತಾಂತರ ನಡೆಯಲಿದೆ. ರೋಟಾಲೇಕ್ ಕಾರ್ಯಕ್ರಮದನ್ವಯ 15ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಂಡ ಕರೆಗಳ ಉದ್ಘಾಟನೆ ನಡೆಯಲಿದೆ.
ಮೂಡಬಿದಿರೆ ರೋಟರಿ ಪಿ.ಯು.ಕಾಲೇಜಿಗೆ ನೀಡಿರುವ 8ಲಕ್ಷ ಮೌಲ್ಯದ ಶೌಚಾಲಯ ಸಂಕೀರ್ಣ ಉದ್ಘಾಟನೆಗೊಳ್ಳಲಿದೆ. ಪಟ್ಟಾಭಿಷೇಕದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಹಾಗೂ ಮೂಡಬಿದಿರೆಯಲ್ಲಿ ಹುಟ್ಟಿ ಸುಪ್ರೀಂ ಕೋರ್ಟ್ಟಲ್ಲಿ ನ್ಯಾಯಾಧೀಶಾದ ಎಸ್.ಅಬ್ದುಲ್ ನಜೀರ್ ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯವೂ ನಡೆಯಲಿದೆ.

ರೋಟರಿಕ್ಲಬ್ ಮೂಡಬಿದಿರೆ ಇದರ ಕ್ರಿಯಾಶೀಲ ಅಧ್ಯಕ್ಷ ಶ್ರೀಕಾಂತ್ ಕಾಮತ್

ರೋಟರಿಕ್ಲಬ್ ಮೂಡಬಿದಿರೆ ಇದರ ಕ್ರಿಯಾಶೀಲ ಅಧ್ಯಕ್ಷ ಶ್ರೀಕಾಂತ್ ಕಾಮತ್

ಕಳೆದ 50ವರ್ಷಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಗಣ್ಯರನ್ನು ಇದೇ ಸಂದರ್ಭ ಗೌರವಿಸಿ ಸನ್ಮಾನಿಸಲಾಗುತ್ತದೆ. ರೋಟರಿ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಾಮತ್, ನಾರಾಯಣ ಪಿ.ಎಂ, ಎ.ಕೆ.ರಾವ್, ಬಾಹುಬಲಿ ಪ್ರಸಾದ್, ಪುಂಡಿಕಾಯ್ ಗಣಪಯ್ಯ ಭಟ್,ಡಾ.ಮುರಳೀಕೃಷ್ಣ,ಯತಿಕುಮಾರ್ ಸ್ವಾಮಿ ಗೌಡ,ಜಯರಾಮ್ ಕೋಟ್ಯಾನ್, ಕುಮಾರ್ ಎ ಎಂ,ಮೊಹಮ್ಮದ್ ಶರೀಫ್ ಮೊದಲಾದವರು ಸುವರ್ಣಮಹೋತ್ಸವ ಸಿದ್ದತೆಗಳನ್ನು ವೀಕ್ಷಿಸಿದರು.
ತಳಿರು ತೋರಣ
ಸುವರ್ಣ ಸಂಭ್ರಮದಲ್ಲಿರುವ ರೋಟರಿ ಸಂಸ್ಥೆಯ ತನ್ನ ವಿದ್ಯಾಸಂಸ್ಥೆಗಳನ್ನು ಅತ್ಯಂತ ಸುಂದರವಾಗಿ ಶೃಂಗರಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಿದೆ. ಬೃಹತ್ ಸ್ವಾಗತ ಕಮಾನು ನಿರ್ಮಾಣಗೊಂಡಿದೆ. ಧರ್ಮಸ್ಥಳದ ಧರ್ಮದಶರ್ಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ನ್ಯಾಯಾಧೀಶ ಅಬ್ದುಲ್ ನಜೀರ್ ಅವರ ಭಾವಚಿತ್ರವನ್ನೊಳಗೊಂಡ ಬೃಹತ್ ಕಟೌಟ್ಗಳು ರಾರಾಜಿಸುತ್ತಿವೆ. ಸುಮಾರು 5ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ರೋಟರಿ ಸಂಸ್ಥೆಯದ್ದು.
ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್
ಅತ್ಯಂತ ವ್ಯವಸ್ಥಿತ ರೀತಿಯ ಒಂದು ಸಾವಿರ ಬ್ಯಾಗ್ ಬ್ಲಡ್ ಸ್ಟೋರೇಜ್ ಸಾಮಥ್ರ್ಯದ ಆಳ್ವಾಸ್ -ರೋಟರಿ ಬ್ಲಡ್ ಬ್ಯಾಂಕ್ ಸುವರ್ಣ ಸಂಭ್ರಮದ ಕೊಡುಗೆಯಾಗಿ ಇಂದು ಲೋಕಾರ್ಪಣೆಯಾಗಲಿದೆ. ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯಲ್ಲಿ ಈ ಬ್ಲಡ್ ಬ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಂಜೆ 4ಗಂಟೆಗೆ ಸರಿಯಾಗಿ ಬ್ಲಡ್ ಬ್ಯಾಂಕ್ ಉದ್ಘಾಟಿಸುವರು. ಜೆ.ಎಸ್.ಅಬ್ದುಲ್ ನಝೀರ್ ಉಪಸ್ಥಿತರಿರುವರು