Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಸರ್ಕಾರ ಕಣ್ಣೀರೊರೆಸಲಿ…

#student#reporter#vaarte#specail#story#siddakatte#govt degree college
ಸ್ಟೂಡೆಂಟ್ ರಿಪೋರ್ಟರ್ : ವಿಶೇಷ ವರದಿ
ಕರಿಮೆಣಸು ಎಂಬುದು ಇಂದಿನ ರೈತರ ಒಂದು ಸಾಮಾನ್ಯ ಬೆಳೆಯಾಗಿದೆ. ಈ ಬೆಳೆಯು ರೈತರನ್ನು ಸಮಾಜದಲ್ಲಿ ಆರ್ಥಿಕವಾಗಿ ಸ್ಥಿರವಾಗಿ ನಿಲ್ಲುವಂತೆ ಮಾಡಿತ್ತು. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ವ್ಯವಸ್ಥೆಗಳಾದ ಬೋರ್ವೆಲ್ ಕೆರೆ ಹಾಗೂ ಯಂತ್ರೋಪಕರಣಗಳ ವ್ಯವಸ್ಥೆಯನ್ನು ಕರಿಮೆಣಸಿನ ಮಾರಾಟವಾದ ಹಣದಿಂದ ಮಾಡಿಕೊಳ್ಳಲು ಸಾಧ್ಯವಾಯಿತು. ಒಂದು ಸಂತೋಷದಾಯಕ ವಿಷಯವೇನೆಂದರೆ ಈ ಬೆಳೆಗೆ ಕೋತಿಗಳು ನವಿಲುಗಳು ಹಾಗೆ ಇತರೆ ಯಾವ ಪ್ರಾಣಿ ಪಕ್ಷಿ ಯಿಂದಲೂ ದೊಡ್ಡಮಟ್ಟದ ತೊಂದರೆ ಆಗುವುದಿಲ್ಲ.
s-l300
ಅಂದುಕೊಂಡಂತೆ ಆಗಿಲ್ಲ…
ಆದರೆ ರೈತರ ಪರಿಶ್ರಮಕ್ಕೆ ಬೆಲೆ ಇಳಿಕೆ ಮೂಲ ಅಡಚಣೆಯಾಗಿದೆ. ತಾವು ಬೆಳೆದ ಬೆಳೆಗೆ ಸರಿಯಾದ ಮಾರಾಟ ಬೆಲೆ ದೊರೆಯುತ್ತಿಲ್ಲ. ಸುಮಾರು ದಿವಸಗಳ ಹಿಂದೆ ಕರಿಮೆಣಸಿನ ಒಂದು ಕೆಜಿ ಮಾರುಕಟ್ಟೆ ಧಾರಣೆಯು ಸುಮಾರು ಆರುನೂರು ರಿಂದ ಎಂಟುನೂರು ರುಪಾಯಿಯವರೆಗೆ ತಲುಪಿತ್ತು .ತಾವು ಬೆಳೆದ ಬೆಳೆಗೆ ಉತ್ತಮ ಪ್ರತಿಫಲ ದೊರೆಯುತ್ತಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಸಾಲಗಳನ್ನು ಮರುಪಾವತಿ ಮಾಡಿ ಕೃಷಿಗೆ ಅಗತ್ಯ ಸೌಲಭ್ಯಗಳನ್ನು ಮಾಡಿಕೊಂಡರು. ಆದರೆ ದೌರ್ಭಾಗ್ಯವೆಂದರೆ ರೈತರ ಈ ಆನಂದ ತುಂಬಾ ದಿವಸ ಉಳಿಯಲಿಲ್ಲ. ಕಾರಣ ರೈತರು ಬೆಳೆದ ಬೆಳೆಗೆ ಮಧ್ಯವರ್ತಿಗಳೇ  ವೈರಿಯಾದರು. ಕರಿಮೆಣಸಿನ ಗುಣಮಟ್ಟವನ್ನು ಕಡಿಮೆ ಮಾಡಿ ಹೊರ ದೇಶಗಳಿಗೆ ಮಾರಾಟ ಮಾಡಿದರು. ಪರಿಣಾಮವಾಗಿ ಕರಿಮೆಣಸನ್ನು ಹೊರದೇಶಗಳು ನಿರಾಕರಿಸುವಂತಾಯಿತು . ರೈತರ ಪಾಲಿಗೆ ಇದೊಂದು  ದೊಡ್ಡ  ಹೊಡೆತವನ್ನೇ ನೀಡಿತು. ಕರಿಮೆಣಸಿನ ಮಾರುಕಟ್ಟೆ ಧಾರಣೆಯು ಅರ್ಧದಷ್ಟು ಇಳಿಕೆ ಕಂಡಿತು. ರೈತರ ಸಂತೋಷದ ಹಿಂದೆ ಆಘಾತವೇ ನಿಂತಿತ್ತು . ಯಾರ ತಪ್ಪಿನ ಫಲ ಯಾರಿಗೋ ಶಿಕ್ಷೆಯನ್ನು ನೀಡಿತು. ರೈತರ ಈ ಸಮಸ್ಯೆಗೆ ಸರಕಾರ  ಬೆಂಬಲ ಬೆಲೆ ನೀಡಬೇಕು. ತನ್ಮೂಲಕ ರೈತರ ಬಾಳಿನಲ್ಲಿ ಬೆಳಕಾಗಬೇಕು

 

ಜಯಾನಂದ 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ಧಕಟ್ಟೆ