Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್

#alvas nudisiri 2018#vaartenews

ನಮ್ಮ ಪ್ರತಿನಿಧಿ ವರದಿ
ಮೂಡಬಿದಿರೆ: ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಡಾ.ಮಲ್ಲಿಕಾ ಎಸ್ ಘಂಟಿ ಹಾಗೂ ಉದ್ಘಾಟಕರಾಗಿ ಡಾ.ಷ.ಶೆಟ್ಟರ್ ಆಯ್ಕೆಯಾಗಿದ್ದಾರೆ ಎಂದು ಸಮ್ಮೇಳನದ ರೂವಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 16,17 ಮತ್ತು 18ರಂದು 15ನೇ ವರ್ಷದ ಆಳ್ವಾಸ್ ನುಡಿಸಿರಿ ಅತ್ಯಂತ ವಿಜೃಂಭಣೆಯಿಂದ ಮೂರು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ ಎಂದರು.

sha shettar2

ಪ್ರಧಾನ ಪರಿಕಲ್ಪನೆ: ಕರ್ನಾಟಕದರ್ಶನ-ಬಹುರೂಪಿ ಆಯಾಮಗಳು
ಪ್ರತಿವರ್ಷದಂತೆ ಈ ವರ್ಷವೂ ಆಳ್ವಾಸ್ ನುಡಿಸಿರಿಯು ಪ್ರಧಾನ ಪರಿಕಲ್ಪನೆಯೊಂದನ್ನು ಮುಂದಿಟ್ಟುಕೊಂಡು ಸಮ್ಮೇಳನವನ್ನು ಆಯೋಜಿಸಿಕೊಂಡಿದೆ. ಈ ಬಾರಿಯ ಪ್ರಧಾನ ಪರಿಕಲ್ಪನೆ: ‘ಕರ್ನಾಟಕದರ್ಶನ- ಬಹುರೂಪಿ ಆಯಾಮಗಳು’ಎಂಬುದು. ಕರ್ನಾಟಕದ ಲಿಖಿತ ಹಾಗೂ ಮೌಖಿಕ ಇತಿಹಾಸಗಳನ್ನು ಅವಲೋಕಿಸುವಾಗ ಕರ್ನಾಟಕತ್ವವನ್ನು ರೂಪಿಸಿದ ವೈವಿಧ್ಯಮಯ ಕಾಣ್ಕೆಗಳು, ಐತಿಹ್ಯಗಳು, ಚರಿತ್ರೆ, ತಾತ್ವಿಕತೆ ಮುಂತಾದವು ಅಗಾಧವಾಗಿ ನಮ್ಮನ್ನು ಸೆಳೆಯುತ್ತವೆ.

m ghanti

ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ, ಶೈಕ್ಷಣಿಕ, ಧಾರ್ಮಿಕವೇ ಮುಂತಾದ ವಿಚಾರಗಳಲ್ಲೂ ಅವುಗಳ ವೈವಿಧ್ಯಮಯ ಸಾಧ್ಯತೆಗಳು ದೃಗ್ಗೋಚರವಾಗುತ್ತವೆ. ಈ ಎಲ್ಲಾ ಸಾಧ್ಯತೆಗಳು ಕಾಲದಿಂದ ಕಾಲಕ್ಕೆ ಕನ್ನಡ ನಾಡನ್ನುಕಟ್ಟುತ್ತಾ ಸುಧಾರಣೆಗೆ ಒಳಪಡಿಸುತ್ತಾ ಕರ್ನಾಟಕದ ಅನನ್ಯತೆ ಹಾಗೂ ಅಸ್ಮಿತೆಗಳನ್ನು ಆಂತರಿಕವಾಗಿಯೂ ಬಹಿರಂಗವಾಗಿಯೂ ಜೀವಂತವಿರಿಸಿವೆ. ಈ ತೆರನಾದಜೀವಂತಿಕೆಯಿಂದಲೇ  ಕರ್ನಾಟಕದ ಈ ಬಹುರೂಪತ್ವಕ್ಕೆ ಗೌರವ ಪ್ರಾಪ್ತವಾಗಿದೆ. ಈ ಬಗೆಯ ಬಹುರೂಪತ್ವಕ್ಕೆಕಾರಣವಾದ ಅಂಶಗಳನ್ನು ಸ್ಥೂಲವಾಗಿ ಗುರುತಿಸಿ ಅವುಗಳ ಅನನ್ಯತೆಯನ್ನು ಚರ್ಚೆಗೊಡ್ಡುವ ಹಾಗೂ ಮರುವಿವೇಚನೆಗೊಳಪಡಿಸಿ ಮಥಿಸುವ ಮೂಲಕ ಬರಬಹುದಾದ ಅಮೃತವನ್ನಾಗಲೀ ಹಾಲಾಹಲವನ್ನೇ ಆಗಲೀ ಮತ್ತೊಮ್ಮೆ ನಿಕಷಕ್ಕೊಡ್ಡುವ ಪ್ರಯತ್ನವಿದು ಎಂದವರು ತಿಳಿಸಿದರು.