Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಸಂಸದರೊಂದಿಗೆ ಮಾತುಕತೆ -ನಿರಾಶ್ರಿತ ಕೇಂದ್ರಗಳಿಗೆ ಭೇಟಿ

#madikeri#javaner bedra#moodbidri

ಪ್ರಕೃತಿ ವಿಕೋಪ ಸ್ಥಳಕ್ಕೆ ಭೇಟಿನೀಡಿದ ಜವನೆರ್ ಬೆದ್ರ ಸಂಘಟನೆ
ಮೂಡಬಿದಿರೆ:ನಿಜಾರ್ಥದಲ್ಲಿ ಸಮಾಜಸೇವೆ, ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ನಾವಿದ್ದೇವೆ ಎಂಬುದಕ್ಕೊಂದು ಸ್ಪಷ್ಟ ನಿದರ್ಶನ. ತೊಂದರೆಯಲ್ಲಿ ಸಿಲುಕಿದವರ ಕಣ್ಣೀರೊರೆಸುವ, ಸಹಾಯ ಹಸ್ತ ಚಾಚುವ ಮಹತ್ಕಾರ್ಯ.ಯಾವೊಂದು ಸ್ವಾರ್ಥವೂ ಇಲ್ಲದೆ ಜನತೆಯೊಂದಿಗೆ ಸ್ಪಂದನೆಯ ದನಿಯಾಗಿರುವ ಜವನೆರ್ ಬೆದ್ರ ಸಂಘಟನೆ ಮಡಿಕೇರಿಯ ಪ್ರಕೃತಿ ವಿಕೋಪ ಸ್ಥಳಕ್ಕೆ ತೆರಳಿ ಅಲ್ಲಿನ ವಾಸ್ತವಾಂಶಗಳ ಬಗ್ಗೆ ಕೂಲಂಕಶವಾಗಿ ಮಾಹಿತಿ ಕಲೆಹಾಕಿತು. ನಿಜಾರ್ಥದಲ್ಲಿ ಸೇವೆ ಹೇಗೆ ನೀಡಬಹುದು ಎಂಬ ಬಗ್ಗೆ ಚಿಂತನೆ ನಡೆಸಿತು. ಅಮರ್ ಬೆದ್ರ ಅಧ್ಯಕ್ಷತೆಯಲ್ಲಿರುವ ಈ ಸಂಘಟನೆಯು ಮಾದರೀ ಕಾರ್ಯ ಮಾಡಿದೆ. ಭಾನುವಾರ ದಿನಪೂರ್ತಿ ಮಡಿಕೇರಿಗಾಗಿ ಮೀಸಲಿಟ್ಟ ಈ ಸಂಘಟನೆ ಪ್ರಕೃತಿ ವಿಕೋಪದ ಹಲವು ಸ್ಥಳಗಳಿಗೆ ಭೇಟಿನೀಡಿ ಮಾಹಿತಿ ಕಲೆಹಾಕಿತು.  ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಸದಸ್ಯರಾದ ಅನಿಲ್ ಆಚಾರ್ಯ,ರಂಜಿತ್ ಶೆಟ್ಟಿ ನಿಯೋಗದಲ್ಲಿದ್ದರು.

#madikeri#javaner bedra#moodbidri1

ನೆರೆಯ ಕೊಡಗು ಜಿಲ್ಲೆ ಅಕ್ಷರಶಃ ಮಳೆ,ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ತೀವ್ರ ಸಮಸ್ಯೆಗೆ ಸಿಲುಕಿದ್ದು ಆ ಪ್ರದೇಶಗಳ ಸಾಕ್ಷಾತ್ ದರ್ಶನ ಹಾಗೂ ಗ್ರೌಂಡ್ ರಿಪೋರ್ಟ್  ಸಂಗ್ರಹಿಸಿ ಸೂಕ್ತ ಅಧ್ಯಯನ ನಡೆಸುವ ಹಿನ್ನಲೆಯಲ್ಲಿ ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಭಾನುವಾರ ಸ್ಥಳಕ್ಕೆ ತೆರಳಿತು. ಕೊಡಗು ಜಿಲ್ಲೆಯ ವಿಕೋಪ ಪರಿಸ್ಥಿತಿಯ ಹಲವು ಪ್ರದೇಶಗಳಿಗೆ ಭೇಟಿನೀಡಿದ ತಂಡ ಸ್ಥಳೀಯರು ಸಹಿತ ನಿರಾಶ್ರಿತರಿಂದ ಮಾಹಿತಿ ಕಲೆಹಾಕಿತು. ಸೇವಾ ಭಾರತಿ ನಿರಾಶ್ರಿತರ ಕೇಂದ್ರಕ್ಕೆ ತೆರಳಿ, ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿತು. ನಿರಾಶ್ರಿತರ ಕೇಂದ್ರದ ಕಚೇರಿ ಉಸ್ತುವಾರಿ ಶಿವಾಜಿ ಅವರೊಂದಿಗೆ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿತು. ಈಗಾಗಲೇ ಕೊಡಗಿನ ನಿರಾಶ್ರಿತರಿಗೆ ಸಾಕಷ್ಟು ಸಹಾಯ ಲಭಿಸುತ್ತಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಭಾರತಿ ಸಂಘಟನೆಯು ನಾಲ್ಕು ಪ್ರದೇಶಗಳಲ್ಲಿ ಕೇಂದ್ರ ತೆರೆದಿದ್ದು 560ಮಂದಿ ನಿರಾಶ್ರಿತರು ಈ ಕೇಂದ್ರಗಳಲ್ಲಿದ್ದಾರೆ.

ಆರಂಭದ ಒಂದೆರಡು ದಿನಗಳಲ್ಲಿ ಸೂಕ್ತ ವಸ್ತ್ರ ವ್ಯವಸ್ಥೆಗೆ ತೊಂದರೆಯಾಗಿದ್ದು ಆ.18ರಿಂದ ಸುವ್ಯವಸ್ಥಿತವಾಗಿ ಕೇಂದ್ರ ಕಾರ್ಯಾಚರಿಸುತ್ತಿದೆ. ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಪಟ್ಟಂತೆ ಸಂಪೂರ್ಣ ಕಾಳಜಿ ವಹಿಸಲಾಗುತ್ತಿದೆ. ಸ್ವಚ್ಛತೆ ಹಾಗೂ ಇನ್ನಿತರ ವ್ಯವಸ್ಥೆಗಳಿಗೆ ಆದ್ಯತೆ ನೀಡಿ ಅವರನ್ನು ನೋಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳಿಗೆ, ಪುರುಷರಿಗೂ ಕೇಂದ್ರದಲ್ಲಿ ಉತ್ತಮ ವ್ಯವಸ್ಥೆ ನೀಡಲಾಗುತ್ತಿದೆ ಎಂದರು. ಇದು ವಾಸ್ತವವೂ ಹೌದು. ಅವಶ್ಯ ವೈದ್ಯಕೀಯ ವ್ಯವಸ್ಥೆ, ಸ್ವಚ್ಛತೆ,ಸ್ನಾನ,ಬಿಸಿನೀರಿನ ವ್ಯವಸ್ಥೆ,ವಸ್ತ್ರ,ಆಹಾರ ಹೀಗೆ ಪ್ರತಿಯೊಂದು ವ್ಯವಸ್ಥೆಯನ್ನೂ ಮಾದರಿಯಾಗಿ ಕಲ್ಪಿಸಲಾಗುತ್ತಿದೆ. ಶಿಸ್ತುಬದ್ಧ ಜೀವನ ಕ್ರಮಕ್ಕೆ ಈ ಕೇಂದ್ರ ಮಾದರಿ ಎಂದರೆ ತಪ್ಪಾಗಲಾರದು. ಆ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇನ್ನೆರಡು ದಿನ ಮಾತ್ರ: ಈ ಕೇಂದ್ರ ಇನ್ನೆರಡು ದಿನಗಳ ಕಾಲ ಕಾರ್ಯಾಚರಿಸಲಿದೆ. ಮುಂದೆ ಸರಕಾರದ ಉಸ್ತುವಾರಿಯಲ್ಲಿ ನಿರಾಶ್ರಿತರು ಜೀವನ ನಡೆಸಲಿದ್ದಾರೆ ಎಂಬ ಮಾಹಿತಿ ಶಿವಾಜಿ ನೀಡಿದರು. ನಿರಾಶ್ರಿತರ ಕೇಂದ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಹಾರ ಪದಾರ್ಥಗಳು, ದಿನಸಿ,ವಸ್ತ್ರಗಳು ಪೂರೈಕೆಯಾಗುತ್ತಿದೆ. ದಾನಿಗಳ ನೆರವು ಬರಪೂರ ಲಭ್ಯವಾಗುತ್ತಿದೆ. ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದವರ ಮನೆಗಳಿಗೂ ಸೂಕ್ತ ವ್ಯವಸ್ಥೆಯನ್ನು ಪೂರೈಸಲಾಗುತ್ತಿದೆ ಎಂದು ಶಿವಾಜಿ ತಿಳಿಸಿದರು. ಸುಮಾರು 60ಕ್ಕೂ ಅಧಿಕ ಸ್ವಯಂ ಸೇವಕರು ಹಗಲಿರುಳೆನ್ನದೆ ನಿರಾಶ್ರಿತರ ಕೇಂದ್ರದೊಳಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಆಹಾರ ಪದಾರ್ಥ ಸರ್ಕಾರಿ ಕೇಂದ್ರಕ್ಕೆ: ದಾನಿಗಳು ನೀಡುತ್ತಿರುವ ಆಹಾರ ಪದಾರ್ಥ, ಅಗತ್ಯ ವಸ್ತುಗಳು ಈಗ ಸೇವಾ ಭಾರತಿ ಕೇಂದ್ರಕ್ಕೆ ಲಭ್ಯವಾಗುತ್ತಿಲ್ಲ. ಅದಕ್ಕೂ ಮೊದಲೇ ಸರಕಾರೀ ಸ್ವಾಮ್ಯದ ಕೇಂದ್ರಗಳಲ್ಲಿ ಅವುಗಳನ್ನು ವಶಪಡಿಸುವ ಕಾರ್ಯ ನಡೆಯುತ್ತಿದೆ. ಅಲ್ಲಿ ಅಸಮರ್ಪಕವಾಗಿ ಆಹಾರ,ವಸ್ತುಗಳನ್ನು ನಿರಾಶ್ರಿತರಿಗೆ ನೀಡುವ ಬಗ್ಗೆಯೂ ಅನೇಕ ಮಂದಿ ನೋವನ್ನು ವ್ಯಕ್ತಪಡಿಸಿದರು.
ಸ್ಮಶಾನ ಮೌನ: ಕೊಡಗಿನ ಪರಿಸರದಲ್ಲಿ ಸ್ಮಶಾನ ಮೌನ ತಲೆದೋರಿದೆ. ಅಕ್ಷರಶಃ ಕೊಡುಗು ಮೊದಲಿನ ಜೀವ ಕಳೆಯಲ್ಲಿಲ್ಲ. ಪ್ರತಿಯೊಬ್ಬರ ಮುಖದಲ್ಲೂ ದುಗುಡ,ದುಮ್ಮಾನ…ಮುಂದೇನು ಎಂಬ ಚಿಂತೆ…ಮಳೆಯೆಂದರೆ ಬೆಚ್ಚಿಬೀಳುವ ಪರಿಸ್ಥಿತಿ…ಎಲ್ಲಿನೋಡಿದರಲ್ಲಿ ಭಯದ ವಾತಾವರಣ..ಊರಿಗೆ ಊರೇ ಕೊಚ್ಚಿಹೋದ ನಿದರ್ಶನ. ಸಂಪರ್ಕಕ್ಕೆ ವ್ಯವಸ್ಥೆಯೇ ಇಲ್ಲ ಎಂಬ ಸ್ಥಿತಿ..ಚಿಕ್ಕ ದರೆಯಿಂದ ತೊಡಗಿ, ಬೃಹತ್ ಬೆಟ್ಟಗಳ ತನಕವೂ ಕುಸಿತ…ಎಲ್ಲಿನೋಡಿದರಲ್ಲಿ ಕೆಂಪು ಮಣ್ಣು…ಹಸಿರನ್ನು ನುಂಗಿದ ಮಣ್ಣಿನ ರಾಶಿ… ಸೇತುವೆ, ಹೊಳೆಗಳಲ್ಲಿ ಕಸದ್ದೇ ಕಾರುಬಾರು…ಒಟ್ಟಿನಲ್ಲಿ ಮನುಷ್ಯನ ಅತಿಯಾಸೆ, ಪ್ರಕೃತಿಯ ಮೇಲಣ ದೌರ್ಜನ್ಯ ಅಧಿಕವಾಗಿರುವುದೇ ಈ ದುರಂತಕ್ಕೆ ಕಾರಣ ಎಂಬುದು ಸ್ಪಷ್ಟವಾಗುತ್ತಿತ್ತು.
ಸಂಸದರೊಂದಿಗೆ ಸಂವಾದ: ಸಂಸದ ಪ್ರತಾಪ್ ಸಿಂಹರನ್ನು ಭೇಟಿಯಾದ ನಿಯೋಗ ವಸ್ತುಸ್ಥಿತಿಯ ವಿಮಶರ್ೆ ನಡೆಸಿತು. ದುರಂತದ ಕಾರಣ, ಪ್ರಸ್ತುತ ಸ್ಥಿತಿಗತಿಗಳ ಪರಾಮರ್ಶಿ ಕೈಗೊಂಡಿತು. ಮುಂದಿನದಿನಗಳಲ್ಲಿ ಅವಶ್ಯ ಸಂದರ್ಭದಲ್ಲಿ ಸಂಘಟನೆ ಸರ್ವ ರೀತಿಯ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿತು.