Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಸಂಯೋಜನಾ ದಕ್ಷತೆ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ

ಪಠ್ಯದಲ್ಲಿ ನಿಮಗೆ ‘ಅಲಿಪ್ತ ನೀತಿ’ ಎಂಬ ಒಂದು ನೀತಿಯ ವಿವರಣೆ ಬರುತ್ತದೆ. ಇದನ್ನು ಸಾಕಷ್ಟು ಮಂದಿ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿ ಶೀತಲ ಯುದ್ಧವು ನಡೆಯುತ್ತಿದ್ದಾಗ ಒಂದು ರಷ್ಯಾದ ಬಣ, ಇನ್ನೊಂದು ಅಮೆರಿಕದ ಬಣ ಇತ್ತು. ಇವೆರಡಕ್ಕೂ ಸೇರಿದ ರಾಷ್ಟ್ರಗಳೇ ಅಲಿಪ್ತ ರಾಷ್ಟ್ರಗಳು. ಅಂದರೆ ಅಲಿಪ್ತ ನೀತಿಯ ರಾಷ್ಟ್ರಗಳು ಜಗತ್ತಿನ ಆಗುಹೋಗುಗಳ ವಿಚಾರದಲ್ಲಿ ತಟಸ್ಥವಾಗಿರುತ್ತದೆ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುವವರೂ ಇದ್ದಾರೆ. ಆದರೆ ಅಲಿಪ್ತ ನೀತಿಯ ರಾಷ್ಟ್ರಗಳ ಧೋರಣೆ ಇದಲ್ಲ. ಜಾಗತಿಕ ವಿಚಾರಗಳಲ್ಲಿ ಅವು ತಟಸ್ಥವಾಗಿರುವುದಿಲ್ಲ. ಕ್ರಿಯಾಶೀಲವಾಗಿರುತ್ತದೆ. ಆದರೆ ರಷ್ಯದ ಪರವಾಗಿಯೂ ವ್ಯವಹರಿಸುವುದಿಲ್ಲ. ಅಮೆರಿಕದ ಪರವಾಗಿಯೂ ವ್ಯವಹರಿಸುವುದಿಲ್ಲ. ಬದಲು ಸ್ವತಂತ್ರ್ಯವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತವೆ. ಇದೇ ರೀತಿ ನಿತ್ಯ ಜೀವನದಲ್ಲಿ ಹೊಂದಾಣಿಕೆ ಎಂಬ ಪರಿಕಲ್ಪನೆಯೂ ತಪ್ಪಾಗಿ ಅರ್ಥೈಸಲ್ಪಟ್ಟಿದೆ. ಯಾವುದೇ ಸನ್ನಿವೇಶದಲ್ಲಿ ಎಲ್ಲದಕ್ಕೂ ಹೌದು ಎನ್ನುವುದನ್ನೇ ಹೊಂದಾಣಿಕೆ ಎಂದು ಭಾವಿಸುವುದು ತಪ್ಪು. ಎಲ್ಲ ಸನ್ನಿವೇಶದಲ್ಲಿಯೂ ತನಗೆ ಲಾಭ ಸಿಗುವಂತೆ ವರ್ತಿಸುವ ಅನುಕೂಲಸಿಂಧು ಪ್ರವೃತ್ತಿಯಾಗಲಿ, ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಪಲಾಯನವಾದವಾಗಲಿ ಹೊಂದಾಣಿಕೆ ಎನಿಸಿಕೊಳ್ಳುವುದಿಲ್ಲ. ಹೊಂದಾಣಿಕೆ ಎಂದೆ ಸನ್ನಿವೇಶದೊಂದಿಗಿನ ಸಂಯೋಜನೆಯಾಗಿದೆ.

 

 
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ವ್ಯಕ್ತಿತ್ವ ಇರುತ್ತದೆ. ಅದು ಒಳ್ಳೆಯ ವ್ಯಕ್ತಿತ್ವ ಇರಬಹುದು. ಕೆಟ್ಟ ವ್ಯಕ್ತಿತ್ವವಿರಬಹುದು. ವಿಕಾಸಗೊಂಡಿರದೆ ಇರುವ ವ್ಯಕ್ತಿತ್ವವೂ ಇರಬಹುದು. ಆದರೆ ವ್ಯಕ್ತಿತ್ವವಂತೂ ಇದ್ದೇ ಇರುತ್ತದೆ. ಯಾವುದೇ ಸನ್ನಿವೇಶದಲ್ಲಿ ತನ್ನ ವ್ಯಕ್ತಿತ್ವದ ತೊಡಗಿಸಿಕೊಳ್ಳುವಿಕೆಯ ಸ್ವರೂಪವೇ ಸಂಯೋಜನೆ. ವ್ಯಕ್ತಿಯು ಸಂಯೋಜಿಸುವ ಕ್ರಮದಲ್ಲಿ ಸಮರ್ಪಕತೆಯನ್ನು ಉಂಟುಮಾಡಿದರೆ ಆಗ ವ್ಯಕ್ತಿತ್ವದ ವಿಕಾಸವಾಗುತ್ತದೆ.

 

 

 
ವ್ಯಕ್ತಿತ್ವದ ಸಂಯೋಜನೆಯು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ನಡೆಯುತ್ತದೆ. ಸಮರ್ಪಕ ಸಂಯೋಜನೆಯುಂಟಾಗಬೇಕಾದರೆ ವ್ಯಕ್ತಿಯ ಅಗತ್ಯಗಳ ಪೂರೈಕೆ ಆಗಬೇಕು. ಅಂತಹ ಅಗತ್ಯಗಳುಎರಡು ರೂಪದಲ್ಲಿರುತ್ತದೆ. ಮೊದಲನೆಯದು ಭೌತಿಕ ಅಗತ್ಯಗಳು. ಆಹಾರ, ನೀರು, ಗಾಳಿ, ಭದ್ರತೆಗಳೆಲ್ಲ ಭೌತಿಕ ಅಗತ್ಯಗಳಾಗಿವೆ. ಎರಡನೆಯದು ಸಾಮಾಜಿಕ ಅಗತ್ಯಗಳು. ಪ್ರೀತಿ, ಕರುಣೆ, ಸ್ವಾತಂತ್ರ್ಯ ಮುಂತಾದ ತಾತ್ವಿಕ ಅಂಶಗಳು, ಜೀವನ ಮೌಲ್ಯಗಳು ಸಾಮಾಜಿಕ ಅಗತ್ಯಗಳಾಗಿವೆ. ವ್ಯಕ್ತಿತ್ವದ ವಿಕಾಸ ನಡೆಯುವುದು ಸಾಮಾಜಿಕ ಅಗತ್ಯಗಳಿಂದ. ಆದ್ದರಿಂದ ನಮ್ಮ ಸಾಮಾಜಿಕ ಅಗತ್ಯಗಳ ಗುರುತಿಸುವಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ವಿಮರ್ಶಾತ್ಮಕ, ಅರ್ಪಣಾ ಮನೋಭಾವ, ಸ್ನೇಹ, ಉತ್ಸಾಹ, ಹಾಸ್ಯ ಪ್ರವೃತ್ತಿ, ಮಾನಸಿಕ ಸಮತೋಲನ, ತಾಳ್ಮೆ ಮತ್ತು ಧೈರ್ಯ, ಸಮಾಜಸೇವೆ, ಆಲೋಚನಾ ಪ್ರವ್ರತ್ತಿ ಇವೆಲ್ಲ ಸಮರ್ಪಕ ಸಂಯೋಜನೆ ಏರ್ಪಡಿಸಿಕೊಳ್ಳಲು ಬೇಕಾದ ಗುಣ ಸ್ವಭಾವಗಳಾಗಿವೆ. ನಿಮ್ಮಲ್ಲಿ ಒಳ್ಳೆಯ ಗುಣಸ್ವಭಾವಗಳನ್ನು ಬೆಳೆಯಿಸಿಕೊಂಡು ಸಂಯೋಜನಾ ದಕ್ಷತೆಯನ್ನು ಹೆಚ್ಚಿಸಿಕೊಳ್ಳಿ.

ಅರವಿಂದ ಚೊಕ್ಕಾಡಿ

respose@vaarte.com