Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಸಂತೋಷದ ಸ್ವರೂಪ!

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಇಬ್ಬರು ಋಷಿಗಳು ತಪಸ್ಸು ಮಾಡಿದ ಕಥೆ ನಿಮಗೆ ಗೊತ್ತಾ? ಒಮ್ಮೆ ಇಬ್ಬರು ಋಷಿಗಳು ದೇವರನ್ನು ಕುರಿತು ಒಟ್ಟಿಗೆ ತಪಸ್ಸು ಮಾಡಿದರಂತೆ. ದೀರ್ಘಕಾಲದ ತಪಸ್ಸು ಮಾಡಿದ ನಂತರ ದೇವರು ಪ್ರತ್ಯಕ್ಷನಾದನಂತೆ. “ಭಕ್ತರೆ, ನಿಮ್ಮ ತಪಸ್ಸಿಗೆ ಮೆಚ್ಚಿದ್ದೇನೆ. ಏನು ಬೇಕೋ, ಕೇಳಿ” ಎಂದನಂತೆ. ಆಗ ಒಬ್ಬ ಋಷಿ, “ಅವನಿಗೆ ಏನೊ ಬೇಕೋ ಕೊಟ್ಟು ಬಾ. ನಂತರ ನನಗೇನು ಬೇಕೆಂದು ಕೇಳುತೇನೆ” ಎಂದನಂತೆ. “ಸರಿ” ಎಂದ ದೇವರು ಇನ್ನೊಬ್ಬ ಋಷಿಯ ಬಳಿ ಹೋದಂತೆ. “ಇಲ್ಲ, ಇಲ್ಲ ಅವನೇ ಹಿರಿಯ. ಮೊದಲು ಅವನಿಗೆ ಏನು ಬೇಕೋ ಕೊಡಬೇಕು” ಎಂದನಂತೆ.

 

 

ಆಗ ದೇವರು, “ಅವನಿಗೆ ಕೊಡೋಣವಂತೆ, ಈಗ ನಿನ್ನೆ ಬಳಿ ಬಂದಿದ್ದೇನಲ್ಲ. ನಿನಗೇನು ಬೇಕೆಂದು ಕೇಳು” ಎಂದನಂತೆ. ಈಗ ಋಷಿ ಬಹಳ ಯೋಚನೆ ಮಾಡಿ ಕೇಳಿದ “ದೇವರೇ, ಆ ಇನ್ನೊಬ್ಬ ಋಷಿಗೆ ಏನನ್ನು ಕೊಡುತ್ತಿಯೋ, ಅದನ್ನೇ ಅವನಿಗೆ ಕೊಟ್ಟಿದ್ದಕ್ಕಿಂತ ಎರಡು ಪಟ್ಟು ಜಾಸ್ತಿ ನನಗೆ ಕೊಡು” ಎಂದು ಕೇಳಿದನಂತೆ. “ಹಾಗೇ ಆಗಲಿ” ಎಂದ ದೇವರು ಆ ಇನ್ನೊಬ್ಬ ಋಷಿಯ ಬಳಿ ಹೋದ. ಈ ಋಷಿಗೆ ಈಗ ತುಂಬಾ ಪೇಚಾಟಕ್ಕಿಟ್ಟುಕೊಂಡಿತು. ತಾನು ಏನನ್ನೇ ಕೇಳಿದರೂ ಅದರ ಎರಡು ಪಟ್ಟು ಜಾಸ್ತಿ ಇನ್ನೊಬ್ಬನಿಗೆ ಸಿಗುತ್ತದೆ. ಎಲಾ ಇವನಾ! ಭಾರೀ ಬುದ್ಧಿವಂತ ಎಂದುಕೊಂಡಿದ್ದಾನೆ. ಮಾಡ್ತೇನೆ ಇವನಿಗೆ ಎಂದುಕೊಂಡ ಋಷಿ, “ದೇವರೇ, ನನಗೆ ಒಂದು ಕಾಲು, ಒಂದು ಕೈ, ಒಂದು ಕಣ್ಣು ಹೊರಟು ಹೋಗುವಂತೆ ಮಾಡು” ಎಂದನಂತೆ. ದೇವರು, ” ಹಾಗೇ ಆಗಲಿ” ಎಂದ. ಅವನ ಒಂದು ಕಾಲು, ಒಂದು ಕೈ, ಒಂದು ಕಣ್ಣು ಹೊರಟು ಹೋಯಿತು. ಆದರೂ ಅವನಿಗೆ ಸಂತೋಷ: ಇನ್ನೊಬ್ಬ ಋಷಿಯ ಎರಡು ಕಾಲುಗಳು, ಎರಡು ಕೈಗಳು ಮತ್ತು ಎರಡು ಕಣ್ಣುಗಳು ಹೊರಟು ಹೋದವಲ್ಲ, ಅದರಿಂದಾಗಿ ಅವನಿಗೆ ಸಂತೋಷ!

 

 

 
ಮನುಷ್ಯರೂ ಹೀಗೂ ಇರುತ್ತಾರೆ. ಅಥವಾ ಮನುಷ್ಯರು ಇರುವುದೋ ಹೀಗೆ. ಪಕ್ಕದವರಿಗೆ ಅಥವಾ ನಮಗೆ ಗೊತ್ತಿರುವ ಯಾರಿಗಾದರೂ ತೊಂದರೆಯಾದರೆ ನಮಗೆ ಏನೋ ಒಂದು ರೀತಿಯ ಸುಖಾನುಭವ ಆಗಲು ತೊಡಗುತ್ತದೆ! ಅಂತಹ ತೊಂದರೆಗಳು ಸ್ವಲ್ಪ ಒಳ್ಳೆಯ ಹೆಸರನ್ನು ತೆಗೆದುಕೊಂಡವರಿಗೆ ಆಗಿಬಿಟ್ಟರೆ ನಮಗಾಗುವ ಸುಖದ ಅನುಭವ ಇನ್ನೂ ಜಾಸ್ತಿಯಾಗುತ್ತದೆ. ನೀವಿದನ್ನು ಒಪ್ಪಿಕೊಳ್ಳದೆ ಇರಬಹುದು. ಆದರೆ ನಮಗೆ ಏನಾದರೂ ಬೇಕು ಎನಿಸಿದ್ದು ದೊರಕಿದಾಗ ಒಂದು ರೀತಿಯ ಸಂತೋಷ ಆಗುತ್ತದೆ. ಆದರೆ ನಮ್ಮ ಪಕ್ಕದವರಿಗೆ ಏನಾದರೂ ತೊಂದರೆ ಆದಾಗ ಅವರಿಗಾದ ತೊಂದರೆಯನ್ನು ನಾವು ಇನ್ನೊಬ್ಬರಿಗೆ ಹೇಳಲು ಉತ್ಸಾಹಿಗಳಾಗಿರುತ್ತೇವೆಯೋ? ನಿರುತ್ಸಾಹಿಗಳಾಗಿರುತ್ತೇವೆಯೋ? ಬಹುತೇಕರು ಇನ್ನೊಬ್ಬರಿಗೆ ಆದ ತೊಂದರೆಗಳನ್ನು ತುಂಬ ಉತ್ಸಾಹದಿಂದಲೇ ಎಲ್ಲರಿಗೂ ಹೇಳುತ್ತಾ ಬರುತ್ತಾರೆ. ಅಂದರೆ ಅದರಲ್ಲಿ ವಿಚಿತ್ರ ರೀತಿಯ ಸುಖ-ಸಂತೋಷದ ಅನುಭವ ಆಗುತ್ತದೆ. ನಮ್ಮ ವ್ಯಕ್ತಿತ್ವಸರಿಯಾಗಿಲ್ಲದಿರುವುದನ್ನೂ ಈ ಪ್ರವೃತ್ತಿಯು ಸೂಚಿಸುತ್ತದೆ.

 

 

ಅರವಿಂದ ಚೊಕ್ಕಾಡಿ
response@vaarte.com