Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ

#veerappa#moily#abhaychandra#jain

ಶ್ರವಣಬೆಳಗುಳ
ಐತಿಹಾಸಿಕ ಸ್ಥಳ ಶ್ರವಣ ಬೆಳಗುಳದ ಗೊಮ್ಮಟನಗರ ಸಭಾಮಂಟಪದಲ್ಲಿ ಸ್ವಸ್ತಿಶ್ರೀ ಚಾರುಕೀತರ್ಿ ಭಟ್ಟಾರಕ ಸ್ವಾಮೀಜಿಯವ ಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯ್ಲಿ ವಿರಚಿತ ಶ್ರೀಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು.
ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಮೊಯ್ಲಿ ಅವರು ರಚಿಸಿದ ಮಹಾಕಾವ್ಯಕ್ಕೆ ಮೂಲ ಪ್ರೇರಣೆ ಪೂಜ್ಯ ಶ್ರೀಗಳದ್ದಾಗಿದೆ. ಇದೊಂದು ಸಂಶೋಧನಾ ಯೋಗ್ಯವಾದ ಗ್ರಂಥವಾಗಿದೆ ಮಾತ್ರವಲ್ಲದ ಆಕರ ಗ್ರಂಥವಾಗಿಯೂ ಇದೆ ಎಂದು ವಿಶ್ಲೇಷಿಸಿದರು. ವಿಶ್ವಕವಿ ಕುವೆಂಪು ಅವರು ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ದರ್ಶನ ಪಡೆದು ಬಾಹುಬಲಿಯಿಂದ ಪ್ರೇರೇಪಣೆ ಪಡೆದು ಮಹಾಕಾವ್ಯ ರಚಿಸಿದರು. ಇದೀಗ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕಕ್ಕೂ ಮೊದಲು ಮೊಯ್ಲಿ ಅವರ ಕಾವ್ಯದಿಂದಾಗಿ ಅಕ್ಷರ ಅಭಿಷೇಕ ನಡೆದಂತಾಯಿತು ಎಂದು ಶ್ರವಣಬೆಳಗುಳದ ಪೀಠಾಧಿಪತಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಕೃತಿಕರ್ತ ವೀರಪ್ಪ ಮೊಯ್ಲಿ ಮಾತನಾಡಿ ಶ್ರೀಗಳ ಪ್ರೇರಣೆ ಹಾಗೂ ಆಶೀವರ್ಾದದಿಂದ ಈ ಕಾವ್ಯ ಸೃಷ್ಟಿಯಾಗಿದೆ. ಈ ಮಹಾಕಾವ್ಯದ ಸರ್ವ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ವಹಿಸಿದ್ದರು. ಅಹಿಂಸೆಯನ್ನು ಪಾಲಿಸುವ ಧರ್ಮವು ಮಹಾಶ್ರೇಷ್ಠವಾದುದು ಎಂದರು. ಎಲ್ಲಿ ಮಾನವೀಯತೆ,ಧಾರ್ಮಿಕ ಕಾರ್ಯಗಳು ನಡೆಯುತ್ತವೆಯೋ ಅಲ್ಲೆಲ್ಲಾ ಧರ್ಮ ಬೆಳೆಯುತ್ತಾ ಹೋಗುತ್ತದೆ ಎಂದರು.
ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಕೃತಿಯನ್ನು ಪಲ್ಲಕ್ಕಿಯ ಮೂಲಕ ವೇದಿಕೆಗೆ ಆಕರ್ಷಕ ಮೆರವಣಿಗೆ ಮೂಲಕ ತರಲಾಯಿತು.
ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯ ಉಪಸಮಿತಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ಉಪಾಧ್ಯಕ್ಷ ಸಿ.ಎನ್.ಬಾಲಕೃಷ್ಣ, ಕಾರ್ಯದಶರ್ಶಿ.ಎಸ್.ಪುಟ್ಟೇಗೌಡ, ಪ್ರಧಾನ ಕಾರ್ಯದಶರ್ಿ ಎಂ.ಎ.ಗೋಪಾಲಸ್ವಾಮಿ, ಸಾಹಿತಿ ಕಮಲಾ ಹಂಪನಾ, ಎ.ಮಂಜು,ಮಾಲಿತಿ ವೀರಪ್ಪ ಮೊಯ್ಲಿ ಮೊದಲಾದವರಿದ್ದರು. ಡಾ.ಜಯಕುಮಾರ್ ಉಪಾಧ್ಯೆ ಅಭಿನಂದನಾ ನುಡಿಗಳನ್ನಾಡಿದರು.